Wednesday, May 22, 2024

1993ರ ರೈಲು ಬಾಂಬ್ ಸ್ಫೋಟ ಪ್ರಕರಣ; ಅಬ್ದುಲ್ ಕರೀಮ್ ತುಂಡಾ ಖುಲಾಸೆ

Most read

1993ರಲ್ಲಿ ರೈಲಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಟುಂಡಾನನ್ನು ರಾಜಸ್ಥಾನದ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.

1992 ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಘಟನೆಗೆ ಒಂದು ವರ್ಷ ತುಂಬಿದ ದಿನವೇ ಕೋಟಾ – ಕಾನ್ಪುರ – ಸಿಂಕದರಾಬಾದ್ ಹಾಗೂ ಸೂರತ್ ಬಳಿ ಸಾಗುವಾಗ ರೈಲಿನಲ್ಲಿ ಸ್ಫೋಟಗಳು ಸಂಭವಿಸಿದ್ದವು. ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂಭವಿಸಿದ್ದ ಎಲ್ಲ ಸ್ಫೋಟ ಪ್ರಕರಣಗಳನ್ನೂ ಒಗ್ಗೂಡಿಸಿ ರಾಜಸ್ಥಾನದ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಿಸಲಾಗಿತ್ತು. ಟಾಡಾ ಕಾಯ್ದೆ ಅಡಿ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ಅಬ್ದುಲ್ ಕರೀಂ ಟುಂಡಾನನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.

84 ವರ್ಷದ ಅಬ್ದುಲ್ ಕರೀಮ್ ತುಂಡಾ ಲಷ್ಕರ್ – ಇ – ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಬಾಂಬ್ ತಯಾರಕ ಎಂದೇ ಕುಖ್ಯಾತರಾಗಿದ್ದರು. ಇದಕ್ಕೆ ಅವರನ್ನು ಡಾ. ಬಾಂಬ್ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು. ಈ ನಿರ್ದಿಷ್ಟ ಪ್ರಕರಣದಲ್ಲಿ ಅವರಿಗೆ ಖುಲಾಸೆ ಸಿಕ್ಕಿದ್ದಾದರೂ, 1996ರ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ ಅದು ಮುಂದುವರೆಯಲಿದೆ.

More articles

Latest article