ಭಾರತದ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಿ: ಗೂಗಲ್‌, ಮೈಕ್ರೋಸಾಫ್ಟ್‌ಗೆ ಟ್ರಂಪ್‌ ತಾಕೀತು

Most read

ವಾಷಿಂಗ್ಟನ್‌ : ಭಾರತ ಚೀನಾದಂತಹ ದೇಶಗಳ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ಬಿಟ್ಟು ಅಮೆರಿಕಾದ ಯುವಕರಿಗೆ ಆದ್ಯತೆ ನೀಡುವಂತೆ ಮೈಕ್ರೋಸಾಫ್ಟ್‌ ಮತ್ತು ಗೂಗಲ್‌ ನಂತಹ ಐಟಿ ಕ್ಷೇತ್ರದ ದಿಗ್ಗಜ ಕಂಪನಿಗಳಿಗೆ ನಿರ್ದೇಶನ ನೀಡಿದ್ದಾರೆ.

ವಾಷಿಂಗ್ಟನ್‌ ನಲ್ಲಿ ಜರುಗಿದ ಅಮೆರಿಕ ಎಐ ಟೆಕ್ ಸಮ್ಮಿತ್‌ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮೆರಿಕದ ನಾಗರಿಕರಿಗೆ ಉದ್ಯೋಗಗಳನ್ನು ಕೊಡಲು ಕಂಪನಿಗಳು ಚಿತ್ತ ಹರಿಸಬೇಕು. ಭಾರತ, ಚೀನಾದವರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಿದರೆ ಕ್ಷೇಮ ಎಂದು ಹೇಳಿದ್ದಾರೆ.

ನಿಮ್ಮ ಜಾಗತಿಕವಾದಿ ಮನಸ್ಥಿತಿ ಅಮೆರಿಕನ್ನರನ್ನು ಹಿಂದಕ್ಕೆ ತಳ್ಳಿದೆ. ಅಮೆರಿಕ ನೀಡಿರುವ ಸ್ವಾತಂತ್ರ್ಯ ಬಳಸಿಕೊಂಡು ಸಾಕಷ್ಟು ಲಾಭ ಮಾಡಿಕೊಂಡಿದ್ದೀರಿ. ಲಾಭವನ್ನು ಹೊರ ದೇಶಗಳಲ್ಲಿ ಹೂಡಿಕೆ ಮಾಡಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಚೀನಾದಲ್ಲಿ ಕಂಪನಿ ಘಟಕಗಳನ್ನು ಆರಂಭಿಸುತ್ತೀರಿ, ಭಾರತದ ಪ್ರತಿಭಾವಂತರನ್ನು ನೇಮಿಸಿಕೊಳ್ಳುತ್ತೀರಿ, ಐರ್ಲೆಂಡ್‌ ನಲ್ಲಿ ಹಣ ಇಡುತ್ತೀರಿ ಎಂದು ಟ್ರಂಪ್‌ ವ್ಯಂಗ್ಯವಾಡಿದ್ದಾರೆ

ನನ್ನ ಆಡಳಿತದಲ್ಲಿ ಇನ್ನು ಮುಂದೆ ಅಂತಹದ್ದೆಲ್ಲಾ ನಡೆಯುವುದಿಲ್ಲ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಜೊತೆ ದೇಶ ನಿಷ್ಠೆ ಹಾಗೂ ರಾಷ್ಟ್ರೀಯತೆಯೂ ಬೇಕಾಗುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ತನ್ನದೇ ದೇಶದ ದೊಡ್ಡ ದೊಡ್ಡ ಐಟಿ ಕಂಪನಿಗಳಿಗೆ ಸಲಹೆ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

More articles

Latest article