ರಾಜಸ್ಥಾನದಿಂದ ತರಿಸಿದ್ದು ಕುರಿ ಮಾಂಸ : ಹೈದರಾಬಾದ್ ಲ್ಯಾಬ್ ವರದಿ

Most read

ರಾಜ್ಯ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್‌ ರೈಲು ನಿಲ್ದಾಣದಲ್ಲಿ ಪತ್ತೆಯಾಗಿರುವುದು ಕುರಿ ಮಾಂಸವೇ ಎಂದು ಹೈದರಾಬಾದ್‌ ಲ್ಯಾಬ್‌ ವರದಿ ಕೂಡ ಬಂದಿದೆ. ಇದರೊಂದಿಗೆ ಅಲ್ಲಿಗೆ ನಾಯಿ ಮಾಂಸ ವಿವಾದವು ಸತ್ವ ಕಳೆದುಕೊಂಡಂತಾಗಿದೆ.

ರಾಜಸ್ಥಾನದಿಂದ ವ್ಯಾಪಾರಿ ಅಬ್ದುಲ್‌ ರಜಾಕ್‌ ತರಿಸುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸವೂ ಮಿಶ್ರಣವಾಗಿರುತ್ತದೆ ಎಂದು ಪುನೀತ್‌ ಕೆರೆಹಳ್ಳಿ ಸೇರಿ ಹಲವು ಆರೋಪಿಸಿದ್ದರು. ಹಾಗಾಗಿ, ಬಾಕ್ಸ್‌ನಲ್ಲಿದ್ದ ಮಾಂಸದ ಸ್ಯಾಂಪಲ್‌ಅನ್ನು ಹೈದರಾಬಾದ್‌ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಇವುಗಳನ್ನು ಹೈದರಾಬಾದ್‌ನ ICAR ನ್ಯಾಷನಲ್ ಮೀಟ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ಪರೀಕ್ಷೆ ಮಾಡಿಸಲಾಗಿದೆ. ಅದರಲ್ಲಿ S Ovis Aries ಎಂದು ಲ್ಯಾಬ್ ವರದಿಯಲ್ಲಿ ಬಂದಿದ್ದು, ಅದು ಕುರಿ ಮಾಂಸವೇ ಎಂಬುದು ದೃಢವಾಗಿದೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ.

FSSAI ಗೈಡ್‌ಲೈನ್ಸ್ ಪ್ರಕಾರ ಉದ್ಯಮಿ ರಜಾಕ್ ಕೊಟ್ಟ ದಾಖಲೆ ಎಲ್ಲವೂ ಸರಿಯಾಗಿಯೇ ಇದೆ. ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ ಸೇರಿದಂತೆ ಹಲವು ಕಡೆಯಿಂದ ನಗರಕ್ಕೆ ಮಾಂಸ ಆಮದಾಗುತ್ತಿದೆ. ಮೀನು, ಕುರಿ ಸೇರಿದಂತೆ ವಿವಿಧ ರೀತಿಯ ಮಾಂಸ ಆಮದಾಗುತ್ತಿದೆ. ಎಲ್ಲವನ್ನೂ ಆಹಾರ ಗುಣಮಟ್ಟ ಇಲಾಖೆ ಪರೀಕ್ಷೆ ಮಾಡಿದೆ. ಮುಂದೆಯೂ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದರು.

More articles

Latest article