Wednesday, December 11, 2024

ನಾಯಕರನ್ನು ಹುಲಿ, ಸಿಂಹ, ಚಿರತೆಗೆ ಹೋಲಿಸಿ ಮಾನ ತೆಗೆಯಬೇಡಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಕಟ್ಟಪ್ಪಣೆ

Most read

ಪಕ್ಷದ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ಸಂದರ್ಭದಲ್ಲಿ ಪ್ಲೆಕ್ಸ್, ಬ್ಯಾನರ್, ಡ್ರಾಪ್ಸ್, ಕಟೌಟ್, ಹೊರ್ಡಿಂಗ್ಸ್ ಹಾಕುವಾಗ ನಾಯಕರುಗಳ ಹೆಸರುಗಳ ಮುಂದೆ ಬಾಸ್, ಕಿಂಗ್, ಟೈಗರ್ ಅಂತ ಹಾಕಿ, ಹುಲಿ ಸಿಂಹಗಳನ್ನಿ ಜೊತೆಗೆ ನಾಯಕರ ಪೋಟೋ ಹಾಕಿ ಮುಜುಗರ ಉಂಟು ಮಾಡಬೇಡಿ. ಇದೆಲ್ಲವನ್ನೂ ಕೂಡಲೇ ನಿಲ್ಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು, ಬ್ಲಾಕ್/ಡಿಸಿಸಿ ಮುಖಂಡರುಗಳಿಗೆ ಒತ್ರ ಬರೆದಿರುವ ಅವರು, ನಾನು ಪ್ರವಾಸ ಮಾಡುವ ಸಂದರ್ಭದಲ್ಲಿ ಕೆಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ಸಂದರ್ಭದಲ್ಲಿ ಪ್ಲೆಕ್ಸ್, ಬ್ಯಾನರ್, ಡ್ರಾಪ್ಸ್, ಕಟೌಟ್, ಹೊರ್ಡಿಂಗ್ಸ್ ಹಾಕುವಾಗ ನಾಯಕರುಗಳ ಹೆಸರುಗಳ ಮುಂದೆ ಬಾಸ್, ಕಿಂಗ್, ಟೈಗರ್, ರಾಜಾಧಿರಾಜ ಇತ್ಯಾದಿ ಪದಗಳನ್ನು ಬಳಸುವುದಲ್ಲದೆ ಸಿಂಹ, ಹುಲಿ, ಚಿರತೆ ಇತರೆ ಪ್ರಾಣಿಗಳ ಚಿತ್ರಗಳೊಂದಿಗೆ ನಾಯಕರ ಫೋಟೊಗಳನ್ನು ಜೊತೆಸೇರಿಸಿ ಅತಿಶಯವಾದ ಮುಜುಗರ ಉಂಟುಮಾಡುವಂತೆ ಮುದ್ರಿಸಿ ಹಾಕುತ್ತಿರುವುದನ್ನು ಗಮನಿಸಿರುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ತಮ್ಮ ಸಿದ್ಧಾಂತಕ್ಕೆ ಇಂತಹ ಪದಬಳಕೆ, ಪ್ರದರ್ಶನಗಳು ವಿರುದ್ಧವಾಗಿರುತ್ತವೆ ಹಾಗೂ ಈ ಪದಗಳ ಉಪಯೋಗ ಸಾರ್ವಜನಿಕರಲ್ಲಿ ನಮ್ಮ ಪಕ್ಷ ಮತ್ತು ನಾಯಕರ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಮೂಡಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದುದರಿಂದ, ರಾಜ್ಯದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು, ಬ್ಲಾಕ್/ಡಿಸಿಸಿ ಮುಖಂಡರುಗಳು ಪಕ್ಷದ ಕಾರ್ಯಕ್ರಮಗಳ ಪ್ರಚಾರಕ್ಕೆ ಬಳಸುವ ಪ್ಲೆಕ್ಸ್, ಬ್ಯಾನರ್ ಮತ್ತು ಇತರ ಪ್ರಚಾರ ಸಾಧನಗಳಲ್ಲಿ ಪಕ್ಷ ಹಾಗೂ ನಾಯಕರುಗಳಿಗೆ ಮುಜುಗರ ಉಂಟು ಮಾಡುವ ಪದಗಳನ್ನು ಇನ್ನು ಮುಂದೆ ಬಳಸಬಾರದೆಂದು ಕೋರಿದೆ. ಇಂತಹ ಸಂದರ್ಭದಲ್ಲಿ ನಾಯಕರ ಬಗ್ಗೆ ಮೆಚ್ಚುಗೆ ಪದಗಳನ್ನು ಬಳಸವುದಾದರೆ ನಾಯಕರು, ಸಾಧಕರು, ಹಿರಿಯರು ಹಿರಿಯ ನಾಯಕರು ಇತ್ಯಾದಿ ಸದ್ಭಾವನೆ ಮೂಡುವಂತಹ ಪದಬಳಕೆಗಳನ್ನು ಮಾಡುವುದು ಸೂಕ್ತ ಎಂದು ಈ ಮೂಲಕ ಕೋರಿದ್ದಾರೆ.

More articles

Latest article