Friday, December 6, 2024

ಡಿಕೆಶಿ ಭಯೋತ್ಪಾದಕರ ಪರ ಎಂಬುದು ನಮಗೆ ಗೊತ್ತಾಗಿದೆ : ಕೆ.ಎಸ್ ಈಶ್ವರಪ್ಪ

Most read

ರಾಮೇಶ್ವರಂ ಕೆಫೆಯಲ್ಲಿ ವಿಷಯದಲ್ಲಿ ಡಿಕೆ ಶಿವಕುಮಾರ್ ಬಾಯಿಗೆ ಬಂದಾಗೆ ಹೇಳಿಕೆ ಕೊಡುತ್ತಿದ್ದಾರೆ. ಮೊದಲು ಅದನೆಲ್ಲಾ ನಿಲ್ಲಿಸಿ. ಡಿಕೆಶಿ ಭಯೋತ್ಪಾದಕರ ಪರ ಎಂಬುದು ನಮಗೆ ಗೊತ್ತಾಗಿದೆ. ಅವರ ಮೇಲೆ ನಮಗೆ ಯಾವ ನಂಬಿಕೆಗಳು ಉಳಿದಿಲ್ಲ ಎಂದು ಡಿಕೆಶಿ ವಿರುದ್ಧ ಈಶ್ವರಪ್ಪ ಆರೋಪ ಮಾಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಇದು ಭಯೋತ್ಪಾದಕರ ಕೃತ್ಯ ಅಲ್ಲದೇ ಮತ್ತೇನು. ಹೋಟೆಲ್‌ನಲ್ಲಿ ಯಾರೋ ಮಕ್ಕಳು ಪಟಾಕಿ ಹೊಡೆದಿದ್ದಾರಾ? ಅಥವಾ ಬಲೂನ್ ಹೊಡೆದಿದ್ದಾರಾ? ಅಲ್ಲಿ ಆಗಿರುವುದು ಬಾಂಬ್ ಸ್ಪೋಟ. ಇದು ಭಯೋತ್ಪಾದಕರ ಕೃತ್ಯ. ಆದರೆ ಡಿಕೆ ಶಿವಕುಮಾರ್ ಬಾಯಿಗೆ ಬಂದಾಗೆ ಹೇಳಿಕೆ ಕೊಡುತ್ತಿದ್ದಾರೆ. ಇದರಿಂದ ಡಿಕೆಶಿ ಭಯೋತ್ಪಾದಕರ ಪರ ಎಂಬುದು ನಮಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಇದು ಗುಪ್ತಚರ ಇಲಾಖೆಯ ವೈಫಲ್ಯ, ಈ ವೈಫಲವ್ಯವನ್ನು ಸಿಎಂ ಮೊದಲು ಒಪ್ಪಿಕೊಳ್ಳಬೇಕು. ಭಯೋತ್ಪಾದಕರನ್ನು ಮೊದಲು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.

More articles

Latest article