ಸತೀಶ್‌ ಜಾರಕಿಹೊಳಿ, ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರ ಬಗ್ಗೆ ಡಿ.ಕೆ ಶಿ ಹೇಳಿದ್ದೇನು?

Most read

ಸತೀಶ್ ಜಾರಕಿಹೊಳಿ,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿರೋದು ಮತ್ತಷ್ಟು ಕೂತೂಹಲ ಕೆರಳಿಸಿದೆ.‌ ಮುಡಾ ಪ್ರಕರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಲಾಭಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ ಈಗ ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆಶಿ, ನಾನು ಸಹ ದೆಹಲಿಗೆ ಹೋದಾಗ ಅಧ್ಯಕ್ಷರನ್ನು ಭೇಟಿ ಮಾಡುತ್ತೇನೆ. ಹಳ್ಳಿಯಿಂದ ಬಂದವರು ನನ್ನ ಭೇಟಿ ಮಾಡ್ತಾರೆ, ನಾನೂ ಭೇಟಿಯಾಗ್ತೇನೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ನಮ್ಮ ಪಕ್ಷದ ಕಚೇರಿಯಿಂದ ಎಲ್ಲಾ ರಿಪೋರ್ಟ್‌ ಕಳುಹಿಸಬೇಕು. ಎಲ್ಲಾ ಮಾಹಿತಿಯನ್ನು ದೆಹಲಿಯವರು ಕಲೆಕ್ಟ್‌ ಮಾಡುತ್ತಾ ಇರ್ತಾರೆ. ಕೆಪಿಸಿಸಿ ಕಚೇರಿಯಿಂದಲೂ ರಿಸರ್ಚ್‌ ಟೀಂ ಮಾಹಿತಿ ನೀಡುತ್ತದೆ. ಕೆ.ಸಿ ವೇಣುಗೋಪಾಲ್‌ ಬೆಂಗಳೂರಿಗೆ ಆಗಮಿಸುವ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

‌ ಕಾಂಗ್ರೆಸ್‌ ನಾಯಕರು ನನ್ನನ್ನು ಹೆದರಿಸುವ ಕೆಲಸ ಮಾಡ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ಡಿಸಿಎಂ ಡಿ.ಕೆ ಶಿವಕುಮಾರ್‌, ನನಗೆ ಅವರ ವೈಯಕ್ತಿಕ ವಿಚಾರ ಗೊತ್ತಿಲ್ಲ. ನಾನು ಹೋಮ್‌ ಮಿನಿಸ್ಟರ್‌ ಅಲ್ಲ, ಯಾವ ವಿಚಾರವೂ ಗೊತ್ತಿಲ್ಲ. ನನಗೆ ಚನ್ನಪಟ್ಟಣ, ಅಲ್ಲಿನ ಅಭಿವೃದ್ದಿ ಕೆಲಸ ಅಷ್ಟೇ ಮುಖ್ಯ.
ಜಲಸಂಪನ್ಮೂಲ ಇಲಾಖೆಯಡಿ 6 ಬ್ರಿಡ್ಜ್‌ ನ ಭೂಮಿ ಪೂಜೆ ಮಾಡಿದ್ದೀನಿ. ಅಷ್ಟು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದ ಹೇಳಿದ್ದಾರೆ.

ಜಾತಿ ಜನಗಣತಿ ವರದಿ ಜಾರಿ ವಿಚಾರ. ವೈಯಕ್ತಿಕ ವಿಚಾರಗಳ ಅಭಿಪ್ರಾಯ ಬೇರೆ ಪಕ್ಷದ ಅಭಿಪ್ರಾಯಗಳೇ ಬೇರೆ. ನಾನು ಪಕ್ಷ ಹೇಳಿದಂತೆ ಕೇಳುವವನು. ಪಕ್ಷದ ವರಿಷ್ಠರು ಎಲ್ಲವನ್ನೂ ನೋಡ್ತಾರೆ. ರಾಹುಲ್‌ ಗಾಂಧಿ ಕೂಡ ಹೇಳಿದ್ದಾರೆ. ಹಾಗಾಗಿ ಪಕ್ಷ ಎಲ್ಲವನ್ನು ಪರಿಶೀಲಿಸುತ್ತದೆ ಎಂದು ಹೇಳಿದ್ದಾರೆ.

More articles

Latest article