ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಕೋಟೆ ಕೆಡವಿ ಕಾಂಗ್ರೆಸ್ ಬಾವುಟ ನೆಟ್ಟ ಡಿಕೆ ಬ್ರದರ್ಸ್

Most read

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಕಾಂಗ್ರೆಸ್‌ನ ಒಗ್ಗಟ್ಟು ಹಾಗೂ ಡಿಕೆ ಬ್ರದರ್ಸ್ ಅವಿರತ ಶ್ರಮದಿಂದಿಂದಾಗಿ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್‌ ಭದ್ರಕೋಟೆಯನ್ನು ಛಿದ್ರಗೊಳಿಸಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಬಾವುಟವನ್ನು ನೆಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ದಶಕಗಳಿಂದ ಪ್ರಯತ್ನ ನಡೆಸಿತ್ತು. ಆದರೆ ಒಕ್ಕಲಿಗ ಪ್ರಾಬಲ್ಯ ಇರುವ ಜಿಲ್ಲೆಯಲ್ಲಿ ಜೆಡಿಎಸ್ ಇದಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ಆದರೆ ಚನ್ನಪಟ್ಟಣ ಕ್ಷೇತ್ರವನ್ನು ಮಾತ್ರ ಕುಮಾರಸ್ವಾಮಿ ಗೆದ್ದು ಜೆಡಿಎಸ್ ಅಸ್ತಿತ್ವವನ್ನು ಉಳಿಸಿದ್ದರು ಆದರೆ ಈಗ ಚನ್ನಪಟ್ಟಣವನ್ನು ಕಾಂಗ್ರೆಸ್ ವಶಪಡಿಸಿಕೊಂಡರು ಸಿಕೊಂಡು ಜೆಡಿಎಸ್ ಅನ್ನು ಇಡೀ ಜಿಲ್ಲೆಯಿಂದ ಹೊರತಳ್ಳಿದೆ.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿ ಆಗಿವೆ. ಜೊತೆಗೆ ಪಕ್ಷದ ನಾಯಕರ ಒಗ್ಗಟ್ಟಿನ ಪ್ರಚಾರ ಫಲ ನೀಡಿದೆ. ಮಾಗಡಿ, ರಾಮನಗರ ಹಾಗೂ ಕನಕಪುರ ಶಾಸಕ ಹಾಗೂ ಉಪ ಮುಖ್ಯಮಂತ್ರಿ ಡಿಜೆ ಶಿವಕುಮಾರ್, ಡಿಕೆ ಸುರೇಶ್ ಎಲ್ಲರೂ ಜಿಲ್ಲೆಯ ಮುಖಂಡರೆಲ್ಲ ಒಟ್ಟಾಗಿ ಸೇರಿಸಿ ಪ್ರಚಾರ ನಡೆಸಿದ್ದು, ಮತದಾರರ ಒಲೈಕೆ ಯಶಸ್ವಿಯಾಗಿದೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕೋಟೆ ಏರಲು ಹೋದ ಪ್ರತಿಸ್ಪರ್ಧಿಗಳ ಪೈಕಿ ಬಹುತೇಕರು ಠೇವಣಿ ಕಳೆದುಕೊಂಡಿದ್ದಾರೆ. ವಿರೋಧಿಗಳಿಗೆ ಅವರ ಪಕ್ಷ ಜಿಲ್ಲೆಯಲ್ಲಿ ಅಸ್ತಿತ್ವವೇ ಇಲ್ಲದಂತೆ ಮಾಡುವಲ್ಲಿ ಡಿ.ಕೆ. ಸಹೋದರರು ಯಶಸ್ವಿ ಆಗಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಫಲಿತಾಂಶ ಜೆಡಿಎಸ್‌ಗೆ ತೀವ್ರ ಆಘಾತ ನೀಡಿದೆ. ಕಳೆದ ಮೂರು ದಶಕಗಳಿಂದ ಜೆಡಿಎಸ್‌ ವರಿಷ್ಠರ ಕುಟುಂಬದವರು ಪ್ರತಿನಿಧಿಸುತ್ತಿದ್ದ ಜಿಲ್ಲೆ ಹಾಗೂ ಕ್ಷೇತ್ರ ಈಗ ಕಾಂಗ್ರೆಸ್ ಪಾಲಾಗಿದೆ. ಅದರಲ್ಲೂ ಮುಖ್ಯವಾಗಿ, ಮಗನಿಗಾಗಿ ಕ್ಷೇತ್ರವನ್ನು ತಂತ್ರದಿಂದ ಪಡೆದಿದ್ದ ಎಚ್‌ಡಿಕೆ ದಂಪತಿಗೆ ಇದು ನುಂಗಲಾರದ ತುತ್ತು. ನಿಖಿಲ್‌ ರಾಜಕೀಯ ಭವಿಷ್ಯಕ್ಕೂ ಕಲ್ಲು ಬಿದ್ದಿದೆ. ಜೆಡಿಎಸ್‌ನಲ್ಲಿ ಎರಡನೇ ಹಂತದ ನಾಯಕರ ಕೊರತೆ, ತೋರಿಕೆಯ ರಾಜಕಾರಣ, ಅತಿಯಾದ ಆತ್ಮವಿಶ್ವಾಸದಿಂದಾಗಿ ಪೆಟ್ಟು ಬಿದ್ದಿದೆ. ತನ್ನ ಭದ್ರಕೋಟೆಯಾದ ಮಾಗಡಿ, ರಾಮನಗರ ಈಗ ಚನ್ನಪಟ್ಟಣ ಕೂಡ ಜೆಡಿಎಸ್‌ ಕೈ ಚೆಲ್ಲಿದ್ದು, ಚಿಂತೆಗೀಡು ಮಾಡಿದೆ.

ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ, ನಿಖಿಲ್ ನನ್ನು ಗೆಲ್ಲಿಸಿ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತಂದೇ ಕಣ್ಣು ಮುಚ್ಚುವೆ ಎಂದು ಟೊಂಕ ಕಟ್ಟಿ ನಿಂತು ಇಳಿ ವಯಸ್ಸಿನಲ್ಲೂ ಚನ್ನಪಟ್ಟಣ ಕ್ಷೇತ್ರದಲ್ಲಿ ಉತ್ಸಾಹದ ಪ್ರಚಾರ ನಡೆಸಿದ್ದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಶ್ರಮ ಸಂಪೂರ್ಣ ವಿಫಲವಾಗಿದೆ. ಮಂಡ್ಯದಲ್ಲಿ ಮಗನ ಗೆಲುವಿಗೆ ಖುಷಿ ಪಡುವುದೋ ಇಲ್ಲ ಚನ್ನಪಟ್ಟಣದಲ್ಲಿ ಮೊಮ್ಮಗನ ಸೋಲಿಗೆ ದುಃಖಿಸುವುದೋ ಎಂಬ ಗೊಂದಲ ಅವರದ್ದು.

ಕಳೆದ ಹಲವು ತಿಂಗಳಿನಿಂದ ಮುಡಾ ಬದಲಿ ನಿವೇಶನ ಪ್ರಕರಣ, ವರ್ಕ್ಫ್ ಆಸ್ತಿ ಪ್ರಕರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರಕರಣ ಬಗ್ಗೆ ವಿರೋಧ ಪಕ್ಷವಾಗಿರುವ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದರು. ಆದರೆ ಇದಕ್ಕೆಲ್ಲ ಮಣಿಯದ ಮತದಾರರು ಈ ಚುನಾವಣೆ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ 112642 ಮತಪಡೆದು 25,413 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 87229 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

ಈ ಹಿಂದೆ ಮಂಡ್ಯದಿಂದ ಲೋಕಸಭೆ ಚುನಾವಣೆ, ರಾಮನಗರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಸೋಲುಂಡಿದ್ದ ಅವರು, ಇದೀಗ ಮೂರನೇ ಪ್ರಯತ್ನದಲ್ಲಿಯೂ ವಿಫಲರಾಗಿದ್ದಾರೆ. ನಿಖಿಲ್, ಯೋಗೇಶ್ವರ್ ಅಭ್ಯರ್ಥಿಯಾದರೂ, ಇದು ಹೆಚ್​ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಯುದ್ಧವೇ ಆಗಿತ್ತು.

More articles

Latest article