ಮೋದಿ‌ ಸರ್ಕಾರ ನಿಷೇಧಿಸಿದ ವಿಡಿಯೋ ಹಂಚಿಕೊಂಡ ದ್ರುವ್ ರಾಠಿ!

ನವದೆಹಲಿ: ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಆರ್ಟಿಕಲ್ 19(1)(a) ಅಡಿಯಲ್ಲಿ ‘ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹಕ್ಕನ್ನು ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೇಂದ್ರದ ಮೋದಿ ಸರ್ಕಾರವು ಸಂವಿಧಾನ ನೀಡಿರುವ ಈ ಹಕ್ಕಿನ ವಿರುದ್ಧ ಹೆಜ್ಜೆ ಇಡುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪುಲ್ಕಿತ್ ಮಣಿ (Pulkit Mani) ಅವರ ವಿಡಿಯೋವನ್ನು ಭಾರತದಲ್ಲಿ ಬ್ಯಾನ್ ಮಾಡಿರುವುದು.

ವೀಡಿಯೋದಲ್ಲಿ ಏನಿದೆ?

 ​ಇನ್ಸ್ಟಾಗ್ರಾಮ್‌ನಲ್ಲಿ ‘hunnywhoisfunny’ ಎಂಬ ಹೆಸರಿನ ಖಾತೆ ಹೊಂದಿರುವ ಪುಲ್ಕಿತ್ ಮಣಿ ಅವರು, ಇತ್ತೀಚೆಗೆ “How Moody Gee greets foreign ministers” ಎಂಬ ಶೀರ್ಷಿಕೆಯಡಿ ಒಂದು ಹಾಸ್ಯಮಯ ವಿಡಿಯೋ ಮಾಡಿದ್ದರು. ಈ ವಿಡಿಯೋದಲ್ಲಿ ಪುಲ್ಕಿತ್ ಮಣಿ ಅವರು ಪ್ರಧಾನಿ ಮೋದಿಯವರನ್ನು ಅನುಕರಿಸುವ (Mimicry) ರೀತಿಯಲ್ಲಿ ನಟಿಸಿದ್ದರು. ವಿದೇಶಿ ಮಂತ್ರಿಗಳನ್ನು ಭೇಟಿಯಾಗುವ ಸಂದರ್ಭವನ್ನು ಬಹಳ ತಮಾಷೆಯಾಗಿ ಚಿತ್ರಿಸಲಾಗಿದ್ದ ಈ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ 16 ಮಿಲಿಯನ್ ವೀಕ್ಷಣೆ ಪಡೆದುಕೊಂಡು ಸಖತ್ ವೈರಲ್ ಆಗಿತ್ತು.

IT Act ಬಳಸಿ ವಿಡೆಯೋವನ್ನು ಬ್ಯಾನ್‌ ಮಾಡಿದ ಸರ್ಕಾರ

ಯಾವಾಗ ಈ ವಿಡಿಯೋ ವೈರಲ್ ಆಗಿ ಜನಪ್ರಿಯತೆ ಪಡೆಯಿತೋ, ತಕ್ಷಣವೇ ಎಚ್ಚೆತ್ತ ಭಾರತ ಸರ್ಕಾರವು IT Act 2000 ರ ಸೆಕ್ಷನ್ 79(3)(b) ಅನ್ನು ಬಳಸಿ ಈ ವಿಡಿಯೋವನ್ನು ಭಾರತದಲ್ಲಿ ಪ್ರದರ್ಶಿಸದಂತೆ ನಿರ್ಬಂಧ ಹೇರಿದೆ. ಈ ಬಗ್ಗೆ ಸ್ವತಃ ಪುಲ್ಕಿತ್ ಮಣಿ ಅವರು ತಮಗೆ ಬಂದಿರುವ ಸರ್ಕಾರದ ನೋಟಿಸ್ ಅನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋವನ್ನು ರೀಪೊಸ್ಟ್‌ ಮಾಡಿದ ಧ್ರುವ್‌ ರಾಠಿ

ಸರ್ಕಾರದ ಈ ನಡೆಯನ್ನು ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ (Dhruv Rathee) ತೀವ್ರವಾಗಿ ಖಂಡಿಸಿದ್ದಾರೆ. ಬ್ಯಾನ್‌ ಆಗಿರುವ ಈ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡು ಪುಲ್ಕಿತ್ ಮಣಿ ಅವರ ವಿಡಿಯೋವನ್ನು ಬೆಂಬಲಿಸಿದ್ದಾರೆ.

ಸಂವಿಧಾನದ ಆಶಯಗಳಿಗೆ ಧಕ್ಕೆ?

​ಭಾರತವು ವಿಶ್ವದ ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿ ಮತ್ತು ಎತ್ತರವಾಗಿ ಕಾಣುವುದು ಇಲ್ಲಿನ ಸಂವಿಧಾನ ಮತ್ತು ಜನರಿಗೆ ನೀಡಿರುವ ಸ್ವಾತಂತ್ರ್ಯದಿಂದ. ಆದರೆ ಪ್ರಸ್ತುತ ರಾಜಕಾರಣಿಗಳು ತಮ್ಮ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಅಥವಾ ಟೀಕೆಗಳನ್ನು ಸಹಿಸಲಾಗದೆ ಸಂವಿಧಾನದ ಆಶಯಗಳನ್ನು ಹದಗೆಡಿಸುತ್ತಿದ್ದಾರೆ. ಇದೆ ಮೊದಲ ಭಾರಿ ಅಲ್ಲ ಹಿಂದೆ ಕುನಲ್‌ ಕಾಮ್ರಾ ಅವರ ವೀಷಯದಲ್ಲೂ ಸರ್ಕಾರ ಇದೆ ಕೆಲಸ ಮಾಡಿತ್ತು. ಒಬ್ಬ ಪ್ರಧಾನ ಮಂತ್ರಿಯ ಬಗ್ಗೆಯೂ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುವ ಹಕ್ಕು ಪ್ರಜೆಗಿದೆ. ಆದರೆ ಸರ್ಕಾರವು ಐಟಿ ಕಾಯ್ದೆಯನ್ನು ಅಸ್ತ್ರವಾಗಿ ಬಳಸಿ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿರುವುದು ನಿಜಕ್ಕೂ ಖಂಡನೀಯ.

More articles

Latest article

Most read