ಧರ್ಮಸ್ಥಳ ಅಪರಾಧಗಳು: ಶಿವಮೊಗ್ಗ ಜೈಲಿನಲ್ಲಿ ಚಿನ್ನಯ್ಯ ಹೇಳಿಕೆ ದಾಖಲಿಸಿಕೊಂಡ ಎಸ್‌ ಐಟಿ: ಸಾಕ್ಷಿ ದೂರುದಾರ ನೀಡಿದ ಸ್ಫೋಟಕ ಮಾಹಿತಿ ಏನು?

Most read

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ಹೂತುಹಾಕಿರುವ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ ಐಟಿ) ಇಂದು ಸಾಕ್ಷಿ ದೂರುದಾರ ಚಿನ್ನಯ್ಯನ ಹೇಳಿಕೆಯನ್ನು ದಾಖಲಿಸಿದೆ. ಸಧ್ಯ ಚಿನ್ನಯ್ಯ ನ್ಯಾಯಾಂಗ ಬಂಧನದಲ್ಲಿ ಇರುವ ಶಿವಮೊಗ್ಗ ಜೈಲಿನಲ್ಲೇ ಎಸ್‌ ಐಟಿ ತಂಡವು  ಬಿಎನ್‌ ಎನ್‌ ಎಸ್‌ ಸೆ-180 ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ.

ಗೃಹ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಕಳೆದ ಎರಡು ಮೂರು ದಿನಗಳಿಂದ ಎಸ್‌ ಐಟಿ ಅಧಿಕಾರಿಗಳು ಜೈಲಿನೊಳಗಡೆಯೇ ಸಾಕ್ಷಿ ದೂರುದಾರ ಚಿನ್ನಯ್ಯನ ಹೇಳಿಕೆಯನ್ನು ಬಿಎನ್‌ ಎನ್‌ ಎಸ್‌ ಸೆ-180 ಅಡಿಯಲ್ಲಿ ದಾಖಲಿಸಿಕೊಳ್ಳುತ್ತಿದ್ದಾರೆ. ಸೆಪ್ಟಂಬರ್‌ 27 ರಂದು ಮ್ಯಾಜಿಸ್ಟ್ರೇಟ್‌ ಎದುರು ಚಿನ್ನಯ್ಯನ ಹೇಳಿಕೆಯನ್ನು ದಾಖಲಿಸಿಕೊಳ್ಳುವುದು ಪೂರ್ಣಗೊಂಡ ನಂತರ ಇದೀಗ ಪೊಲೀಸ್‌ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಚಿನ್ನಯ್ಯನ ಮೊದಲ ಹೇಳಿಕೆಯನ್ನು ಜುಲೈ 11 ರಂದು ಸೆ. 183ರ ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಚಿನ್ನಯ್ಯ ತನ್ನ ಎರಡನೇ ಹೇಳಿಕೆಯನ್ನು ಬಿಎನ್‌ ಎನ್‌ ಎಸ್‌ ಸೆಪ್ಟಂಬರ್‌ 27 ರಂದು ನೀಡಿದ್ದು, ಈ ಹೇಳಿಕೆಯು ಭಾರಿ ಕೋಲಾಹಲವನ್ನುಂಟು ಮಾಡಿತ್ತು. ಆದರೂ ಮೊದಲ ಹೇಳಿಕೆಯು ಇನ್ನೂ ಅಸಿತ್ವದಲ್ಲಿದ್ದು, ಎರಡನೇ ಹೇಳಿಕೆಯ ಜತೆ ಹೋಲಿಕೆ ಮಾಡಿಯೇ ತನಿಖೆ ನಡೆಸಲಾಗುತ್ತಿದೆ.

ಚಿನ್ನಯ್ಯ ಎಸ್‌ ಐಟಿ ಎದುರು ನೀಡುತ್ತಿರುವ ಪೊಲೀಸ್‌ ಹೇಳಿಕೆಯು ತನಿಖೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ಜುಲೈ 11 ರಂದು ಸೆ. 183ರ ಅಡಿಯಲ್ಲಿ ದಾಖಲಿಸಿಕೊಂಡಿರುವ ಚಿನ್ನಯ್ಯನ ಮೊದಲ ಹೇಳಿಕೆ ಇನ್ನೂ ಅಸ್ತಿತ್ವದಲ್ಲಿದ್ದು, ಎರಡೂ ಹೇಳಿಕೆಗಳಲ್ಲಿ ಕೆಲವು ಅಂಶಗಳನ್ನು ಕುರಿತು ಹೊಂದಾಣಿಕೆ ಇರುವುದನ್ನು ಗುರುತಿಸಲಾಗಿದೆ. ನ್ಯಾಯಯುತ ತನಿಖೆ ನಡೆಸಲಿಕ್ಕಾಗಿಯೇ ಈತನ ಎರಡೂ ಹೇಳಿಕೆಗಳನ್ನು ಒಂದಕ್ಕೊಂದು ಪೂರಕವಾಗಿಯೇ ನೋಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದೀಗ ಚಿನ್ನಯ್ಯ ಏನೆಲ್ಲಾ ಅಂಶಗಳನ್ನು ಕುರಿತು ಹೇಳಿಕೆ ನೀಡಿರಬಹುದು ಎಂದು ಎಸ್‌ ಐಟಿ ಅಧಿಕಾರಿಗಳು ಗುಟ್ಟು ಬಿಡುಕೊಡುತ್ತಿಲ್ಲ.

ಕೆಲವು ಮುಖ್ಯ ವಾಹಿನಿಗಳ ವರದಿಗಳ ಪ್ರಕಾರ ಚಿನ್ನಯ್ಯ ಜುಲೈ 11 ರಂದು ಸೆ. 183ರ ಅಡಿಯಲ್ಲಿ ನೀಡಿರುವ ಹೇಳಿಕೆಯಲ್ಲಿ ಒಂದೇ ಸ್ಥಳದಲ್ಲಿ 10 ಶವಗಳನ್ನು ಹೂತು ಹಾಕಿದ್ದಾನೆ ಎಂದು ಹೇಳಿದ್ದಾಗಿ ವರದಿ ಮಾಡಿವೆ. ಆದರೆ ಎಸ್‌ ಐಟಿ ಈ ವರದಿಗಳನ್ನು ನಿರಾಕರಿಸಿಯೂ ಇಲ್ಲ, ಪುರಸ್ಕರಿಸಿಯೂ ಇಲ್ಲ.

ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಹತ್ಯೆ ಮಾಡಿದ ಶವಗಳನ್ನು ನನ್ನಿಂದ ಹೂತು ಹಾಲಿಸಲಾಗಿದೆ ಎಂದು ಜುಲೈ 3 ರಂದು ಚಿನ್ನಯ್ಯ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾನೆ. ನ್ಯಾಯಾಲಯದಲ್ಲಿಯೂ ಬಿಎನ್‌ ಎನ್‌ ಎಸ್‌ ಸೆ-183 ಅಡಿಯಲ್ಲಿ ತನ್ನ ಆರೋಪವನ್ನು ದೃಢೀಕರಿಸಿರುತ್ತಾನೆ. ಈತನ ಹೇಳಿಕೆಯನ್ನು ಆಧರಿಸಿ ಆರೋಪಗಳನ್ನು ಕುರಿತು ತನಿಖೆ ನಡೆಸಲು ಕರ್ನಾಟಕ ಸರ್ಕಾರ ಜುಲೈ 19 ರಂದು ವಿಶೇಷ ತನಿಖಾ ತಂಡ (ಎಸ್‌ ಐಟಿ) ರಚಿಸಲಾಗಿತ್ತು.

ನಂತರ ಎಸ್‌ ಐಟಿ ಸುಮಾರು ಎರಡು ವಾರದ ಕಾಲ ಶವಗಳ ಅವಶೇಷಗಳಿಗಾಗಿ ಮಹಜರು ನಡೆಸಿದೆ. ತದನಂತರ ನ್ಯಾಯಾಲಯದಲ್ಲಿ ತಾನು ಶವಗಳನ್ನು ಹೂತು ಹಾಕಿರುವುದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಸುಳ್ಳು ಹೇಳಿದ್ದಾಗಿ ಹೇಳಿದ ನಂತರ ಆಗಸ್ಟ್‌ 23ರಂದು ಎಸ್‌ ಐಟಿ ಚಿನ್ನಯ್ಯನನ್ನು ಬಂಧಿಸುತ್ತದೆ. ಇದೇ ಸೆಕ್ಷನ್‌ ಅಡಿಯಲ್ಲಿ ಚಿನ್ನಯ್ಯನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿರುತ್ತದೆ.

More articles

Latest article