ಚನ್ನಪಟ್ಟಣದಲ್ಲಿ ದೇವೇಗೌಡರ ಪ್ರಚಾರ; ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ಚನ್ನಪಟ್ಟಣ: ನನಗೆ ವಯಸ್ಸಿನ ಪ್ರಶ್ನೆ ಮುಖ್ಯ ಅಲ್ಲ ಬದಲಾಗಿ ಪಕ್ಷದ ಅಳಿವು ಉಳಿವಿನ ಪ್ರಶ್ನೆ ಮುಖ್ಯ. ಮೊರಾರ್ಜಿ ದೇಸಾಯಿ ಅವರು ಪಕ್ಷದ ಅಧಿಕಾರ ಕೊಟ್ಟರು. ಅಂದಿನಿಂದ ಈ ಪಕ್ಷವನ್ನು ಉಳಿಸಿಕೊಂಡು ಬಂದಿದ್ದೇನೆ. ನಾನು ರಾಷ್ಟ್ರೀಯ ಘಟಕದ ಅಧ್ಯಕ್ಷನಾಗಿದ್ದೇನೆ. ಕುಮಾರಸ್ವಾಮಿ ಕೆಂದ್ರದ ಮಂತ್ರಿಯಾಗಿದ್ದಾರೆ. ನನ್ನ ಮೊಮ್ಮಗ ಅಭ್ಯರ್ಥಿಯಾಗಿದ್ದಾನೆ. ಮಂಡ್ಯ, ಬೆಂಗಳೂರು, ಹಾಸನದಿಂದ ಇಂದು ಜನರು ಪರಚಾರಕ್ಕೆ ಆಗಮಿಸಿದ್ದರು. ಇಂದು ಐದು ಭಾಗದಲ್ಲಿ ಪ್ರಚಾರ ಮಾಡಿದ್ದೇನೆ. ಎಲ್ಲಾ ಕಡೆಯೂ ಉತ್ತಮ ಸ್ಪಂದನೆ ಸಿಕ್ಕಿದೆ. ಜನರ ಆಶೀರ್ವಾದ, ಅಭಿಮಾನವಿದೆ ಎಂದು ಎಲೆತೋಟಹಳ್ಳಿಯಲ್ಲಿ ಹೇಳಿದರು.

ಜೆ ಬ್ಯಾಡರಹಳ್ಳಿಯಲ್ಲಿ ದೇವೇಗೌಡ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ದೇವೇಗೌಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿರುವ ಗರ್ವದ ಸೊಕ್ಕು ಮುರಿಯಬೇಕು ಎಂದು ಕಿಡಿ ಕಾರಿದರು. ಕೈಗಾರಿಕೆ ಅಭಿವೃದ್ದಿಗೆ ಜಮೀನು ನೀಡಲು ರಾಜ್ಯ ಸರ್ಕಾರಕ್ಕೆ ಹೆಚ್ ಡಿಕೆ ಮನವಿ ಸಲ್ಲಿಸಿದ್ದರು. ಆದರೆ ಜಮೀನು ಕೊಡಲು ಅಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು. ಇಂತಹ ಸರ್ಕಾರ ಇರಬೇಕೋ, ಬೇಡವೋ ಎಂದು ನೀವೇ ನಿರ್ಧರಿಸಿ ಎಂದು ಮತದಾರರನ್ನು ಕೋರಿದರು.

More articles

Latest article

Most read