ಅತ್ಯಾಚಾರ ಆರೋಪದ ಮೇಲೆ ಬಿಜೆಪಿ ಮುಖಂಡ (BJP Leader) ಹಾಗೂ ವಕೀಲ ದೇವರಾಜೇಗೌಡ (Devarajegowda) ಮೊನ್ನೆಯಷ್ಟೇ ಅರೆಸ್ಟ್ ಆಗಿದ್ದರು. ಇಂದು ಹೊಳೆನರಸೀಪುರ JMFC ಕೋರ್ಟ್ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಬಂಧನಕ್ಕೊಳಗಾಗಿರುವ ವಕೀಲ ದೇವರಾಜೇಗೌಡಗೆ ನಿನ್ನೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಪೊಲೀಸರು ಹೆಚ್ಚಿನ ತನಿಖೆಗಾಗಿ ಅವರನ್ನು ಪೊಲೀಸರ್ ಕಸ್ಟಡಿಗೆ ಕೊಡಿ ಎಂದು ಕೋರ್ಟ್ ಮೊರೆ ಹೋದ ಪರಿಣಾಮಮ ಇಂದು ಕೋರ್ಟ್ ದೇವರಾಜೇಗೌಡನನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ
ದೆಹಲಿಯಲ್ಲಿ (Delhi) ರಾಷ್ಟ್ರೀಯ ಬಿಜೆಪಿ ನಾಯಕರನ್ನ ಭೇಟಿ ಮಾಡಿ ಪೆನ್‌ಡ್ರೈವ್ ಸಂಬಂಧ ಸುದ್ದಿಗೋಷ್ಠಿ ನಡೆಸಲು ಮುಂದಾಗಿದ್ದರಂತೆ. ಅಷ್ಟರಲ್ಲಿ ಹೊಳೆನರಸೀಪುರ ಪೊಲೀಸರು (Holenarasipura police) ಆತನನ್ನ ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿತ್ತು.