Thursday, July 25, 2024

ದೀನದಲಿತರ ಧ್ವನಿಯಾಗಿದ್ದ ಮಾಜಿ ಸಿಎಂ ದೇವರಾಜ ಅರಸು ಅವರಿಗೆ ಭಾರತ ರತ್ನ ಯಾವಾಗ? : ಡಿಕೆಶಿ

Most read

ಬಿಹಾರದ ಎರಡು ಬಾರಿಯ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ಭಾರತರತ್ನ ಪ್ರಶಸ್ತಿ ನೀಡಲು ನಿರ್ಧಾರ ಸ್ವಾಗತಾರ್ಹ ಆದರೆ ಕರ್ನಾಟಕ ದೀನದಲಿತರ ದ್ವನಿಯಾಗಿದ್ದ ಕರ್ನಾಟಕ ಮಾಜಿ ಸಿಎಂ ದೇವರಾಜ ಅರಸು ಅವರಿಗೆ ಯಾವಾಗ ಭಾರತ ರತ್ನ ಸಿಗೋದು ಎಂದು ಕೇಂದ್ರ ಸರ್ಕಾರಕ್ಕೆ ಕೇಳಿದ್ದಾರೆ.

ಈ ಕುರಿತು ಟ್ವೀಟ್ ( X) ಮಾಡಿರುವ ಅವರು, ಪ್ರೀತಿಯಿಂದ ‘ಜನ್ ನಾಯಕ್’ ಎಂದು ಕರೆಯಲ್ಪಟ್ಟ ಅವರು ಹಿಂದುಳಿದ ವರ್ಗಗಳ ಪರವಾಗಿ ಸಾಕಷ್ಟು ಹೋರಾಟ ಮತ್ತು ಕೆಕಸಗಳನ್ನು ಮಾಡಿದ್ದಾರೆ. ಅದಕ್ಕೆ ಅಚರು ರಾಜ್ಯಕ್ಕೆ ಪೂಜ್ಯರಾಗಿದ್ದರು. ಈ ಪ್ರಶಸ್ತಿಯು ಅವರ ಅನುಕರಣೀಯ ಕೊಡುಗೆಗೆ ಯೋಗ್ಯವಾದ ಗೌರವವಾಗಿದೆ ಎಂದು ಹೇಳಿದ್ದಾರೆ.

ಮುಂದುವರೆದು, ಕರ್ನಾಟಕದ ಮಾಜಿ ಸಿಎಂ ದೇವರಾಜ ಅರಸು ಭಾರತದ ಸರ್ಕಾರ ಕೊಡಮಾಡುವ ಭಾರತ ರತ್ನ ನೀಡಬೇಕೆಂದು ಕರ್ನಾಟಕದ ಜನರು ಒತ್ತಾಯಿಸುತ್ತಾರೆ. ರಾಜ್ಯದ ದೀನದಲಿತರ ಧ್ವನಿಯಾದ ಡಿ.ದೇವರಾಜ್ ಅರಸ್ ಅವರಿಗೆ ಯಾವಾಗ ನೀಡುತ್ತೀರಿ ಎಂದು ಹೇಳಿದ್ದಾರೆ.

More articles

Latest article