ಜಗತ್ತಿನ ಅತ್ಯಂತ ಕೆಟ್ಟ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಭಾರತದ ರಾಜಧಾನಿ ದೆಹಲಿ 2ನೇ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮೌಂಟ್ ಇಸಾ ನಂ,1 ಮಾಲಿನ್ಯ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದರೆ ಪಾಕಿಸ್ತಾನದ ಪೇಶಾವರ 2ನೇ ಸ್ಥಾನದಲ್ಲಿದೆ. ವಾಯು ಗುಣಮಟ್ಟ ಸೂಚ್ಯಂಕ( AQI) ಈ ವರದಿಯನ್ನು ಬಿಡುಗಡೆ ಮಾಡಿದೆ. ನಗರ ಮತ್ತು ಸೂಚ್ಯಂಕ ಹೀಗಿದೆ.
ಮೌಂಟ್ ಇಸಾ-358, ಪೇಶಾವರ-304, ನವದೆಹಲಿ-296, ಕಲ್ಯಾಣ ನಗರ(ಭಾರತ)-278, ಬೆಹಬಹಾನ್, (ಇರಾನ್)-258, ಸೋನಿಪತ್ (ಹರಿಯಾಣ)-253, ಟೀರಾ(ಇಸ್ರೇಲ್)-253, ಪಣಜಿ(ಗೋವಾ)-247, ಕರ್ಚೋರಮ್(ಗೋವಾ)-246, ರೋಹ್ಟಕ್ (ಹರಿಯಾಣ)-244 ಈ ಮಾಲಿನ್ಯಕ್ಕೆ ಕೃಷಿ ತ್ಯಾಜ್ಯವನ್ನು ಸುಡುವುದು, ಕೈಗಾರಿಕೆಗಳು ಹೊರಸೂಸುವ ಹೊಗೆ ಪ್ರಮುಖ ಕಾರಣಗಳಾಗಿವೆ.
ಇದೇ ಸಂಸ್ಥೆ ಪ್ರಕಟಿಸಿರುವ ಭಾರತದ ಅತ್ಯಂತ ಕೆಟ್ಟ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣದ ನಗರಗಳು ಸ್ಥಾನ ಪಡೆದುಕೊಂಡಿವೆ. ಚಂಡೀಗಢ, ಫರಿದಾಬಾದ್, ಗಾಜಿಯಾಬಾದ್, ಗುರ್ ಗಾಂವ್, ಜಲಂಧರ್ ಮತ್ತು ಹಿಸ್ಸಾರ್ ಅಗ್ರ ಸ್ಥಾನದಲ್ಲಿವೆ.
AQI ಅಳೆಯುವುದು ಹೇಗೆ?
ಗಾಳಿಯಲ್ಲಿನ ವಿವಿಧ ಮಾಲಿನ್ಯಕಾರಕಗಳ ಸಾಂದ್ರತೆಯ ಅಳತೆ ಇದಾಗಿದೆ. ವಾಯು ಗುಣಮಟ್ಟದ ಸೂಚ್ಯಂಕದ ಪ್ರಕಾರ 0ಯಿಂದ 50ರ ನಡುವಿನ ಎಕ್ಯೂಐ ಅನ್ನು ಉತ್ತಮ; 51ರಿಂದ 100 ತೃಪ್ತಿದಾಯಕ; 101ರಿಂದ 200 ಮಧ್ಯಮ; 201ರಿಂದ 300 ಕಳಪೆ; 301ರಿಂದ 400 ಅತಿ ಕಳಪೆ; 401ರಿಂದ 500 ತೀವ್ರ ಕಳಪೆ ಎಂದು ಪರಿಗಣಿಸಲಾಗುತ್ತದೆ.