ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಆರೋಪಿ ದರ್ಶನ್‌ ಶಿಫ್ಟ್

Most read

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಅರೋಪಿಯಾಗಿರುವ ಚಿತ್ರನಟ ದರ್ಶನ್ ರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ವರ್ಗಾಹಿಸಿದ್ದಾರೆ. ಮೊದಲು ಪ್ಲ್ಯಾನ್ ಮಾಡಿದಂತೆ ಚಿತ್ರದುರ್ಗ ಮತ್ತು ತುಮಕೂರು ಮಾರ್ಗವಾಗಿ ಅವರನ್ನು ಬಳ್ಳಾರಿಗೆ ಕರೆದೊಯ್ಯುವ ಬದಲು ಆಂಧ್ರಪ್ರದೇಶದ ಅನಂತರಪುರ ಮಾರ್ಗದಿಂದ ಕರೆದೊಯ್ಯಲಾಗಿದೆ. 

ಬೆಳಗ್ಗೆ 4 ಗಂಟೆಯ ವೇಳೆಗೆ ಪರಪ್ಪನ ಅಗ್ರಹಾರದಿಂದ ಹೊರಟ ವಾಹನ ಮೇಕ್ರಿ ವೃತ್ತ, ಹೆಬ್ಬಾಳ ರಸ್ತೆ, ಯಲಹಂಕ ಮೂಲಕ ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ವಾಹನಗಳ ಭದ್ರತೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿಗೆ ತರಲಾಯಿತು.

ಈಗ ಪ್ರಾಥಮಿಕ ಹಂತದಲ್ಲಿ ನಡೆಸಲಾಗುವ ವೈದ್ಯಕೀಯ ಪರೀಕ್ಷೆ ಇತ್ಯಾದಿ ಔಪಚಾರಿಕ ಕ್ರಮಗಳು ಜರುಗುತ್ತಿವೆ. ದರ್ಶನ್‌ ಬರುತ್ತಿರವ ವಿಚಾರ ಮೊದಲೇ ತಿಳಿದಿದ್ದರಿಂದ ಜೈಲಿನ ರಸ್ತೆಯಲ್ಲಿ ಜನರು ನಿಂತಿದ್ದರು.

ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ವಿಚಾರ ಒಂದ್ಕಡೆಯಾದರೆ ದರ್ಶನ್‌ ಸೇರಿ ಸ್ವಾಮಿ ಕೊಲೆ ಕೇಸ್​ನ 17 ಆರೋಪಿಗಳ ನ್ಯಾಯಾಂಗ ಬಂಧನ ಸೆಪ್ಟೆಂಬರ್ 9ರವರೆಗೆ ವಿಧಿಸಿ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ. 

More articles

Latest article