ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಅಂತ್ಯವಾಗಲಿದೆ. ಇಂದು 24ನೇ ACMM ಕೋರ್ಟ್ಗೆ ವಿಚಾರಣೆಗೆ ಹಾಜರಾದ ಡಿ ಗ್ಯಾಂಗ್ ಗೆ ಮತ್ತೆ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳ ಹಾಜರು ಪಡಿಸಲಾಗುವುದು. ಆರೋಪಿಗಳನ್ನ ಹಾಜರು ಪಡಿಸಿ ಪುನಃ ನ್ಯಾಯಾಂಗ ಬಂಧನ ವಿಸ್ತರಣೆಗೆ ಮನವಿ ಮಾಡಲಾಗುವುದು. ಇದನ್ನು ಪರಿಗಣಿಸಿದ ಕೋರ್ಟ್ ಯಾಂಗ ಬಂಧನ ಅವಧಿ ವಿಸ್ತರಿಸಿದೆ.
ಚಾರ್ಜ್ ಶೀಟ್ ನೀಡುವಂತೆ ಅರೋಪಿ ಪರ ವಕೀಲರ ಮನವಿ ಮಾಡಿದ್ದು, ಆರೋಪಿಗಳಿಗೆ ಪರ್ಸನಲ್ ಆಗಿ ಕೋಡೋಕೆ ಹೇಳ್ತಿನಿ ಬಿಡಿ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಈಗಾಗಲೇ ಚಾರ್ಜ್ಶೀಟ್ ಹಾಕಿರುವ ಕಾರಣಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಅಥವಾ ನಾಳೆ ವಕೀಲರ ಮೂಲಕ ಜಾಮೀನು ಅರ್ಜಿ ಹಾಕುವ ಸಾಧ್ಯತೆಗಳಿವೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ A1 ಪವಿತ್ರಗೌಡ ಹಾಗೂ A7 ಅನು ಕುಮಾರ್ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್ 31 ರಂದು ಸೆಷನ್ಸ್ ಕೋರ್ಟ್ ಪವಿತ್ರಾ ಗೌಡ, ಅನು ಕುಮಾರ್ ಜಾಮೀನು ಅರ್ಜಿ ವಜಾಗೊಳಿಸಿತ್ತು. ಸದ್ಯ ಈಗ ಸೆಷನ್ಸ್ ಕೋರ್ಟ್ ಆದೇಶದ ಮೇಲೆ ಹೈಕೋರ್ಟ್ಗೆ ಪವಿತ್ರಾ ಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಅವರಿಂದ ಮೇಲ್ಮನವಿ ಸಲ್ಲಿಸಲಾಗಿದೆ. ಇನ್ನು ಅನುಕುಮಾರ್ ಪರ ವಕೀಲ ರಾಮ್ ಸಿಂಗ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.