ಸ್ವಾಭಿಮಾನ, ಸಾಮರಸ್ಯ, ಘನತೆಯ ಬದುಕಿಗಾಗಿ ಮಂಗಳೂರಿನಲ್ಲಿ ದ.ಕ ಜಿಲ್ಲಾ ಮಹಿಳಾ ಸಮ್ಮೇಳನ

Most read



ಮಂಗಳೂರು : ಮಹಿಳಾ ಹಕ್ಕುಗಳ ರಕ್ಷಣೆಗಾಗಿ, ಮೀಸಲಾತಿ, ಅಸಮಾನತೆ, ಸಬಲೀಕರಣಕ್ಕಾಗಿ ಜನವಾದಿ ಮಹಿಳಾ ಸಂಘಟನೆಯು ಒಂಭತ್ತನೆಯ ದ.ಕ ಜಿಲ್ಲಾ ಸಮ್ಮೇಳನವನ್ನು ಮಂಗಳೂರಿನಲ್ಲಿ ಆಯೋಜಿಸಿದೆ. ಜುಲೈ 27ರಂದು ಮಂಗಳೂರು ನಗರದ ಬಲ್ಮಠದಲ್ಲಿರುವ ಬಿಷಪ್‌ ಜತ್ತನ್ನ ಸಭಾಂಗಣದಲ್ಲಿ, ನಾಡೋಜ ಸಾರಾ ಅಬೂಬಕ್ಕರ್‌ ವೇದಿಕೆಯಲ್ಲಿ ಸಮ್ಮೇಳನವು ನಡೆಯಲಿದೆ.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಆಯಾಮಗಳಲ್ಲಿ  ಅತ್ಯಂತ ಮುಂದುವರಿದ ದ.ಕ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಹಲ್ಲೆಗಳು, ಅತ್ಯಾಚಾರ ಕೊಲೆಗಳು ನಡೆಯುತ್ತಿದ್ದು ಜಿಲ್ಲೆಯಲ್ಲಿ ಸಶಕ್ತ ಮಹಿಳಾ ಚಳುವಳಿಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಮ್ಮೇಳನದ ಮೊದಲ ಗೋಷ್ಠಿಯನ್ನು ಬೆಳಿಗ್ಗೆ10 ಗಂಟೆಗೆ ಖ್ಯಾತ ಸ್ತ್ರೀವಾದಿ ಲೇಖಕಿ ಡಾ. ಸಬಿತಾ ಬನ್ನಾಡಿ ಉದ್ಘಾಟಿಸಲಿದ್ದಾರೆ. ಸ್ವಾಗತ ಸಮಿತಿಯ ಗೌರವಾಧ್ಯಕ್ಷೆ, ರಂಗ ಕಲಾವಿದೆ ಗೀತಾ ಸುರತ್ಕಲ್‌ ಸ್ವಾಗತಿಸಲಿದ್ದಾರೆ. ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷೆ ಫ್ಲೇವಿ ಕ್ರಾಸ್ತಾ ವಹಿಸಲಿದ್ದಾರೆ. ಹಿರಿಯ ಲೇಖಕಿ, ಹೋರಾಟಗಾರ್ತಿ ಚಂದ್ರಕಲಾ ನಂದಾವರ, ಜನವಾದಿಯ ರಾಜ್ಯ ಕಾರ್ಯದರ್ಶಿ ದೇವಿ, ಉಪಾಧ್ಯಕ್ಷೆ ಕೆ.ಎಸ್‌ ಲಕ್ಷ್ಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ಗೋಷ್ಟಿಯ ಬಳಿಕ  ಪ್ರತಿನಿಧಿ ಅಧಿವೇಶನ ಜರಗಲಿದೆ ಎಂದೂ ಸಂಘಟಕರು ತಿಳಿಸಿದ್ದಾರೆ.

More articles

Latest article