ದುರಸ್ತಿ ಕಾಮಗಾರಿ: ರಾಜ್ಯದ ಈ ಜಿಲ್ಲೆಗಳಲ್ಲಿ ನಾಳೆ ಕರೆಂಟ್ ಇರಲ್ಲ

Most read

ಹೆಮಿ ವೋಲ್ಟೇಜ್ ಲೈನ್ಗಳ ಕಂಬಗಳು ಮತ್ತು ಡಿಪಿಗಳ ದುರಸ್ತಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ಜೂನ್ 29 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ 33/11ಕೆ.ವಿ ಬಳ್ಳಾರಿಯ ಹಚ್ಚೋಳ್ಳಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಈ‌ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಹಚ್ಚೋಳ್ಳಿ, ಬೀರಳ್ಳಿ, ರಾವಿಹಾಳ್, ಕುಡುದರಹಾಳ್, ಬಿಎಂ ಸೂಗೂರು ಗ್ರಾಮ ಪಂಚಾಯತಿಗಳಿಗೆ ಒಳಪಡುವ ವಿವಿಧ ಊರುಗಳಲ್ಲಿ ಮತ್ತು ಶ್ರೀರಂಗ ಎಂಟರ್‌ಪ್ರೈಸಸ್ ಸ್ಥಾವರಕ್ಕೆ ಕರೆಂಟ್ ಪೂರೈಕೆಯಲ್ಲಿ ಅಡಚಣೆ ಆಗಲಿದೆ ಎಂದು ಜೆಸ್ಕಾಂ ಸಿರುಗುಪ್ಪೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಯಾದಗಿರಿಯ ಖಾನಾಪೂರ 110 ಕೆ.ವಿ. ಸಬ್-ಸ್ಟೇಷನ್‌ಗಳಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಜೂನ್ 29 ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಶೋರಾಪೂರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಹೇಳಿದ್ದಾರೆ.

ಖಾನಾಪೂರ, ಸೈದಾಪೂರ, ಕಡೇಚೂರ, ವಡಗೇರಾ, ಶಿರವಾಳ ಉಪಕೇಂದ್ರಗಳು, ಸುಜ್ಞಾನೇಶ್ವರ ಮಿನಿ ಹೈಡೆಲ್ ಪವರ್, ಮುದ್ನಾಳ ರೈಲ್ವೇ ಟ್ರ್ಯಾಕ್ಟನ್, ಥಾಣಾಗುಂದಿ, ವಡಗೇರಾ, ಕದ್ರಾಪೂರ, ಕಡೆಚೂರು ಹಾಗೂ ಬದ್ದೇಪಲ್ಲಿ ಉಪ- ಕೇಂದ್ರಗಳು ಸೇರಿದಂತೆ 11 ಕೆ.ವಿ. ವಿದ್ಯುತ್ ಫೀಡರ್‌ಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ತಾಂಡಾಗಳು ಮತ್ತು ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾವುದು ಎಂದು ಹೇಳಿದ್ದಾರೆ.

ಕೆಂಭಾವಿ, ಹುಣಸಗಿ, ನಗನೂರು ವಿದ್ಯುತ್ ವಿತರಣಾ ಕೇಂದ್ರಗಳು, ಸುತ್ತ ಮುತ್ತಲಿನ ಗ್ರಾಮ, ತಾಂಡಾ ಹಾಗೂ ನೀರಾವರಿ ಪಂಪ್‌ಸೆಟ್‌ಗಳು. ಅವಾದ ಇಂದಿಕ್ಲೀನ್, ಶೋರಾಪೂರ ಸೋಲಾರ್ ಪ್ರೈ. ಲಿ, ದೇವಿಂದಪ್ಪಗೌಡ ಸೋಲಾರ, ಹೂಗಾರ ಸುಗರ್ ಪ್ರೈ. ಲಿಮಿಟೆಡ್‌ನಲ್ಲಿ ವಿದ್ಯುತ್ ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

More articles

Latest article