ಕ್ಯಾನ್ಸರ್‌ ನಿಂದ ಗುಣವಾಗಿದ್ದೇನೆ; ಸಿಹಿ ಸುದ್ದಿ ನೀಡಿದ ಶಿವರಾಜಕುಮಾರ್‌ ; ಮಾರ್ಚ್‌ ನಿಂದ ಶೂಟಿಂಗ್‌ ಆರಂಭ

Most read

ಬೆಂಗಳೂರು: 2024ರ ಡಿಸೆಂಬರ್ 24ರಂದು ಅಮೆರಿಕದ ಮಯಾಮಿ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಶಿವರಾಜ್‌ಕುಮಾರ್, ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಮಾಹಿತಿ ಹೊರಬಿದ್ದಿದೆ. ಹೊಸ ವರ್ಷದ ದಿನವಾದ ಇಂದು ಸ್ವತಃ ಶಿವರಾಜ್‌ಕುಮಾರ್ ಅವರೇ ವಿಡಿಯೊ ಮುಖಾಂತರ ಹೊಸ ವರ್ಷದ ಶುಭಾಶಯ ಕೋರುತ್ತಾ ತಾವು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. ಡಿಸೆಂಬರ್ 25ಕ್ಕೆ ಶಿವರಾಜ್‌ಕುಮಾರ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು.ಅಭಿಮಾನಿಗಳ ಪ್ರಾರ್ಥನೆಯಿಂದ ಎಲ್ಲ ವರದಿಗಳು ನೆಗೆಟಿವ್‌ ಬಂದಿದೆ. ಪೆಥಾಲಜಿ ವರದಿಯೂ ಬಂದಿದ್ದು, ಅದರಲ್ಲೂ ನೆಗೆಟಿವ್ ಬಂದಿದೆ. ಈ ಮೂಲಕ ಶಿವರಾಜ್‌ಕುಮಾರ್‌ ಅವರಿಗೆ ಕ್ಯಾನ್ಸರ್‌ ಇಲ್ಲ ಎಂದು ವೈದ್ಯರು ಅಧಿಕೃತವಾಗಿ ಹೇಳಿದ್ದಾರೆ ಎಂದು ಗೀತಾ ಶಿವರಾಜ್‌ಕುಮಾರ್‌ ತಿಳಿಸಿದ್ದಾರೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಭಯ ಎಲ್ಲರಿಗೂ ಸಾಮಾನ್ಯವಾಗಿ ಇರುತ್ತದೆ. ಈ ಭಯವನ್ನು ನೀಗಿಸಲು ಅಭಿಮಾನಿಗಳು, ಸಹ ಕಲಾವಿದರು, ಕುಟುಂಬದವರು, ಸ್ನೇಹಿತರು ಇರುತ್ತಾರೆ. ಬೆಂಗಳೂರಿನಲ್ಲಿದ್ದಾಗ ನನ್ನ ಆರೋಗ್ಯವನ್ನು ನೋಡಿಕೊಂಡ ವೈದ್ಯಕೀಯ ಸಿಬ್ಬಂದಿ ಧೈರ್ಯ ನೀಡಿದರು. ಆ ಧೈರ್ಯದಲ್ಲೇ ಶೂಟಿಂಗ್‌ ನಡೆಸಿದ್ದೆ. ಅದು ಯಾವ ಜೋಶ್‌ನಲ್ಲಿ ‘45’ ಸಿನಿಮಾವನ್ನು ಮಾಡಿದೆನೋ ನನಗೇ ಗೊತ್ತಿಲ್ಲ. ಕೀಮೊ ಮಾಡಿಸುತ್ತಿರುವಾಗಲೇ ‘45’ ಸಿನಿಮಾದ ಕ್ಲೈಮ್ಯಾಕ್ಸ್‌ ಸಾಹಸ ದೃಶ್ಯಗಳನ್ನು ಮಾಡಿದೆ. ಶಸ್ತ್ರಚಿಕಿತ್ಸೆಗೆ ಹೊರಡುವ ಸಂದರ್ಭದಲ್ಲಿ ಆತಂಕ ಜಾಸ್ತಿಯಾಗಿತ್ತು. ಎಲ್ಲರೂ ಧೈರ್ಯ ತುಂಬಿದರು. ಗೀತಾ ಇಲ್ಲದೆ ಶಿವಣ್ಣ ಇಲ್ಲವೇ ಇಲ್ಲ. ಗೀತಾ, ಮಕ್ಕಳು, ಮಧು ಬಂಗಾರಪ್ಪ, ದೇವರ ರೀತಿಯಲ್ಲಿದ್ದ ವೈದ್ಯರಾದ ಮನೋಹರನ್‌ ಎಲ್ಲರೂ ಚೆನ್ನಾಗಿ ನೋಡಿಕೊಂಡರು. ನನಗೆ ಮಾಡಿರುವುದು ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ ಅಲ್ಲ ಮೂತ್ರಕೋಶವನ್ನು ತೆಗೆದು ಹೊಸ ಮೂತ್ರಕೋಶ ಹಾಕಿದ್ದಾರೆ. ಜನರ ಆಶೀರ್ವಾದವನ್ನು ಜೀವನದಲ್ಲಿ ಯಾವತ್ತೂ ಮರೆಯುವುದಿಲ್ಲ. ಒಂದು ತಿಂಗಳು ಪೂರ್ಣ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಮಾರ್ಚ್‌ನಿಂದ ನಿರಂತರ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸುತ್ತೇನೆ.  ವಿಲ್ಬಿ ಬ್ಯಾಕ್‌’. ದುಪ್ಪಟ್ಟು ಶಕ್ತಿಯೊಂದಿಗೆ ಡ್ಯಾನ್ಸ್‌, ಫೈಟ್‌ನೊಂದಿಗೆ ಮರಳುತ್ತೇನೆ’ ಎಂದು ಶಿವರಾಜಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

More articles

Latest article