Sunday, September 8, 2024

ಸ್ಪಾನಿಷ್‌ ದಂಪತಿ ಮೇಲಿನ ಕ್ರೌರ್ಯ: ಮೂವರ ಬಂಧನ

Most read

ರಾಂಚಿ: ಸ್ಪೇನ್‌ ದೇಶದ ಪ್ರವಾಸಿ ದಂಪತಿಗಳ ಮೇಲೆ ಹಲ್ಲೆ ನಡೆಸಿ, ಮಹಿಳೆಯನ್ನು ಏಳು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ದೇಶವನ್ನು ತಲ್ಲಣಗೊಳಿಸಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಜಾರ್ಖಂಡ್‌ ಪೊಲೀಸರು ಬಂಧಿಸಿ ಉಳಿದ ನಾಲ್ವರ ಹುಡುಕಾಟದಲ್ಲಿ ತೊಡಗಿದ್ದಾರೆ.

ಮಾ.1ರಂದು ದುಮ್ಕ ಜಿಲ್ಲೆಯ ಹಂಸ್ದಿಹ ಪೊಲೀಸ್‌ ಠಾಣಾ ವ್ಯಾಪ್ತಿಯ ಕುರುಮಹಟ್‌ ಎಂಬಲ್ಲಿ ಈ ಭೀಕರ ಕ್ರೌರ್ಯ ನಡೆದಿದ್ದು, ಇದು ರಾಜ್ಯದ ರಾಜಧಾನಿ ರಾಂಚಿಯಿಂದ 300 ಕಿ.ಮೀ ದೂರದಲ್ಲಿದೆ.

ಕುರುಮಹಟ್‌ ನಲ್ಲಿ ತನ್ನ ಪತಿಯೊಂದಿಗೆ ರಾತ್ರಿ ಟೆಂಟ್‌ ನಲ್ಲಿ ಇದ್ದಾಗ ಏಳು ಮಂದಿ ಕಾಮುಕರು ದಾಳಿ ನಡೆಸಿ, ಪ್ರವಾಸಿ ಸ್ಪಾನಿಷ್‌ ಮಹಿಳೆಯನ್ನು ಭೀಕರವಾಗಿ ಅತ್ಯಾಚಾರ ಮಾಡಿದ್ದಲ್ಲದೆ, ಆಕೆ ಪತಿಯನ್ನು ಥಳಿಸಿ ಗಾಯಗೊಳಿಸಿದರು.

ಸ್ಪಾನಿಷ್‌ ಟಿವಿ ಆಂಟೆನಾ-3 ಗೆ ದಂಪತಿಗಳು ವಿಡಿಯೋ ಸಂದರ್ಶನವೊಂದನ್ನು ನೀಡಿದ್ದು, ತಮ್ಮ ಮೇಲೆ ನಡೆದ ಕ್ರೌರ್ಯವನ್ನು ಅವರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಸಂದರ್ಶನ ಪ್ರಸಾರವಾಗುತ್ತಿದ್ದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ದುರ್ಘಟನೆ ಕುರಿತಂತೆ ವರದಿಗಳನ್ನು ಪ್ರಕಟಿಸುತ್ತಿವೆ.
ಈಗಾಗಲೇ ಮಹಿಳೆಯ ಹೇಳಿಕೆಯನ್ನು ಸಿಆರ್‌ ಪಿಸಿ ಸೆಕ್ಷನ್‌ 1647ರ ಅನ್ವರ ದಾಖಲಿಸಿಕೊಳ್ಳಲಾಗಿದ್ದು, ಮಹಿಳೆಯ ವೈದ್ಯಕೀಯ ಪರೀಕ್ಷೆಯೂ ಆಕೆಯ ಮೇಲೆ ನಡೆದಿರುವ ಅತ್ಯಾಚಾರವನ್ನು ದೃಢಪಡಿಸಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಪಿತಾಂಬರ ಸಿಂಗ್‌ ಖೆರ್ವಾರ್‌ ತಿಳಿಸಿದ್ದಾರೆ.

ಮಾರ್ಚ್‌ 1ರಂದು ರಾತ್ರಿ 11 ಗಂಅಎ ಸುಮಾರಿಗೆ ಸ್ಪಾನಿಷ್‌ ದಂಪತಿಗಳು ರಸ್ತೆ ಬದಿಯಲ್ಲಿ ಗಾಯಗೊಂಡು ಬಿದ್ದಿದ್ದರು, ವಿಚಾರಣೆ ನಡೆಸಿದಾಗ ತಮ್ಮ ಮೇಲೆ ಆದ ದಾರುಣ ಘಟನೆಯನ್ನು ಅವರು ವಿವರಿಸಿದರು ಎಂದು ಪೊಲೀಸರು ʻರಾಯಿಟರ್ಸ್‌ʼ ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸನಿಹದಲ್ಲಿ ಯಾವುದೇ ಹೋಟೆಲ್‌ ವ್ಯವಸ್ಥೆ ಇಲ್ಲದೇ ಇದ್ದಿದ್ದರಿಂದಾಗಿ ಟೆಂಟ್‌ ಬಳಸಿದ್ದೆವು, ಹೀಗಾಗಿ ನಮ್ಮ ಮೇಲೆ ದಾಳಿ ನಡೆಯಿತು ಎಂದು ದಂಪತಿಗಳು ಶನಿವಾರ ಸಂಜೆ ನೀಡಿದ್ದ ವಿಡಿಯೋ ಸಂದರ್ಶನದಲ್ಲಿ ತಿಳಿಸಿದ್ದರು.

ʻಅವರು ನನ್ನನ್ನು ಅತ್ಯಾಚಾರ ಮಾಡಿದರು. ಸರದಿಯ ಪ್ರಕಾರ ಅತ್ಯಾಚಾರ ಮಾಡುವಾಗ ಉಳಿದವರು ನಿಂತು ನೋಡುತ್ತಿದ್ದರು. ಎರಡು ಗಂಟೆಗಳ ಕಾಲ ಹೀಗೇ ನಡೆಯಿತುʼ ಎಂದು ಮಹಿಳೆ ತಿಳಿಸಿದ್ದಾರೆ. ಸುಮಾರು ಎರಡು ಲಕ್ಷ ಅನುಯಾಯಿಗಳಿರುವ ತಮ್ಮ ಇನ್ಸ್ಟಾಗ್ರಾಂ ಅಕೌಂಟ್‌ ನಲ್ಲಿ ದಂಪತಿಗಳು ತಮ್ಮ ಮೇಲೆ ನಡೆದ ದಾಳಿ ಕುರಿತು ಒಂದು ವಿಡಿಯೋ ಹಾಕಿದ್ದರಾದರೂ ನಂತರ ಅದನ್ನು ಅಳಿಸಿ ಹಾಕಲಾಗಿತ್ತು.

ಮಹಿಳೆ ಸ್ಪೇನ್‌ ಮತ್ತು ಬ್ರೆಜಿಲ್‌ ಎರಡೂ ದೇಶದ ದ್ವಿಪೌರತ್ವ ಹೊಂದಿದ್ದುಎರಡೂ ದೇಶಗಳೂ ಆಘಾತ ವ್ಯಕ್ತಪಡಿಸಿವೆ. ಸ್ಪೇನ್‌ ದೇಶದ ಅಧಿಕಾರಿಗಳನ್ನು ಘಟನೆ ಸ್ಥಳಕ್ಕೆ ಕಳುಹಿಸಲಾಗಿದ್ದು, ಬ್ರೆಜಿಲ್‌ ಅಧಿಕಾರಿಗಳು ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಘಟನೆಯ ಮಾಹಿತಿ ಪಡೆಯುತ್ತಿದ್ದಾರೆ.

More articles

Latest article