ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತವನ ಗ್ಯಾಂಗ್ ಅರೆಸ್ಟ್ ಆಗಿದೆ. ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ನಿನ್ನೆಯಷ್ಟೇ ಪವಿತ್ರ ಗೌಡ ಸೇರಿ 13 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದು ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇರುವ ದೆಶನ್ ಸೇರಿ ನಾಲ್ವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಕೊಲೆ ಪ್ರಕರಣದ 4 ಆರೋಪಿಗಳದ್ದು ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇದೆ ಅನ್ನೋದನ್ನು ಪೊಲೀಸರು ಕೋರ್ಟ್ಗೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.
A2 ದರ್ಶನ್, A4 ರಘು, A15 ಕಾರ್ತಿಕ್, A16 ಕೇಶವಮೂರ್ತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಒಬ್ಬೊಬ್ಬರದ್ದು ಒಂದೊಂದು ಕ್ರಿಮಿನಲ್ ಕೇಸ್ ಇದೆ. ನಾಲ್ಕೂ ಆರೋಪಿಗಳ ವಿರುದ್ಧ ಈ ಮುಂಚೆಯೇ ಕೇಸ್ ಇತ್ತುಎಂದು ತಿಳಿದುಬಂದಿದೆ.
A2 ದರ್ಶನ್ ಮೇಲಿರುವ ಕೇಸ್ಗಳೇನು?
ಕೇಸ್ 1: ಪತ್ನಿ ಮೇಲೆ ಹಲ್ಲೆ ಮಾಡಿದ್ರಿಂದ ಕೇಸ್
ಕೇಸ್ 2: ವನ್ಯ ಜಾತಿ ಕೋಳಿ ಸಾಗಣೆ ಕೇಸ್
ಕೇಸ್ 3: ಆರ್.ಆರ್ ನಗರದಲ್ಲಿ ನಾಯಿ ಕಚ್ಚಿಸಿದ ಕೇಸ್, ಕೇಸ್ 4: ರಾಜಕಾಲುಮೆ ಮೇಲೆ ಮನೆ ಇರುವುದು
A4 ರಾಘವೇಂದ್ರ ಮೇಲಿರುವ ಕೇಸ್ಗಳೇನು?
ಕೇಸ್ 1: ವಂಚನೆ, ಫೋರ್ಜರಿ ಮಾಡಿದ ಆರೋಪ
ಚಿತ್ರದುರ್ಗದಲ್ಲಿ ಕೇಸ್, ಜೈಲು ಸೇರಿ ವಾಪಸ್
A15 ಕಾರ್ತಿಕ್ ಮೇಲಿರುವ ಕೇಸ್ಗಳೇನು?
ಕೇಸ್ 1: ಜೀವ ಬೆದರಿಕೆ, ಬೇರೆಯವರಿಗೆ ಪ್ರಚೋದನೆ
ತಲಘಟ್ಟಪುರದಲ್ಲಿ ರಘು ವಿರುದ್ಧ ಕೇಸ್
A16 ಕೇಶವಮೂರ್ತಿ ಮೇಲಿರುವ ಕೇಸ್ಗಳೇನು?
ಕೇಸ್ 1: ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್
ಕೇಸ್ 2: ದರೋಡೆ ಮತ್ತು ವಂಚನೆ ಆರೋಪ ಕೇಸ್