ಕುತೂಹಲ ಮೂಡಿಸಿದ್ದ ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಸಿ.ಪಿ ಯೋಗೇಶ್ವರ್ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಈ ಬಾರಿ ಕಣದಲ್ಲಿದ್ದರು. ಈಗಾಗಲೇ 16 ಸುತ್ತುಗಳ ಮತ ಎಣಿಕೆ ಮುಗಿಸಿದ್ದು, ಸಿಪಿ ಯೋಗೇಶ್ವರ್ 27 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಿ ಪಿ ಯೋಗೇಶ್ವರ್ ಅವರೇ ಗೆಲುವು ಸಾಧಿಸಿದ್ದಾರೆ.
ಚನ್ನಪಟ್ಟಣದಲ್ಲಿ ಪೂರ್ಣ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿಜಯೋತ್ಸವದ ವಾಹನ ಸಿದ್ಧವಾಗಿದೆ. ಈಗಾಗಲೇ 16 ಸುತ್ತುಗಳ ಮತ ಎಣಿಕೆ ಮುಗಿಸಿದ್ದು, ಸಿಪಿ ಯೋಗೇಶ್ವರ್ 27 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 54080 ಮತ ಪಡೆದು ಹಿನ್ನೆಡೆ ಸಾಧಿಸಿದ್ದಾರೆ.