ನೆರೆಯ ತಮಿಳುನಾಡು ಮತ್ತು ಪುದುಚೇರಿಯಲ್ಲಿನಿಷೇಧಿಸಲಾಗಿರುವ ‘ಕಾಟನ್ ಕ್ಯಾಂಡಿ’ ಯನ್ನೂ ರಾಜ್ಯದಲ್ಲೂ ನಿಷೇಧಿಸುವ ಮಾಡುವ ಆದೇಶವನ್ನು ಹೊರಡಿಸಿದೆ. ಇಂದು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು, ರಾಜ್ಯದಲ್ಲಿ ಇನ್ನುಮುಂದೆ ಕಲರ್ ಕಾಟನ್ ಕ್ಯಾಂಡಿ ಮಾರುವಂತಿಲ್ಲ ಅದನ್ನು ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗವು, ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿತ್ತು. ಗೋಬಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಬಳಸುವುದು ತಿಳಿದುಬಂದಿದೆ ಎನ್ನಲಾಗಿದೆ.
ಮಾದರಿಗಳನ್ನು ಬೇರೆ ಬೇರೆ ಕಡೆ ಸಂಗ್ರಹಿಸಲಾಗಿತ್ತು. 171 ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಕೃತಕ ಬಣ್ಣಗಳ ಅಸುರಕ್ಷಿತ ಮಾದರಿಯನ್ನು ಪತ್ತೆ ಹಚ್ಚಿರೋದು 107 ಇದೆ. ಸೋ ಗೋಬಿ ಮಂಚೂರಿನೂ ಮಾಡಿದ್ದೇವೆ, ಕ್ಯಾಂಡಿಯನ್ನೂ ಮಾಡಿದ್ದೇವೆ ಎಂದರು.
ಒಂದು ರೋಡಮೈನ್ ಬೀ, ಇನ್ನೊಂದು ಟಾಟ್ರಾಸೈನ್ ಅಂತ ಅದು ಇವತ್ತು ನಾವು ಈ ಒಂದು ಪದಾರ್ಥಗಳಲ್ಲಿ, ನಮ್ಮ ಸ್ಯಾಂಪಲ್ಲಿನಲ್ಲಿ ಸಿಕ್ಕಿದೆ. ಇದು ನಮ್ಮ ಉಪಯೋಗಕ್ಕೆ ಅನ್ ಸೇಫ್. ರೋಡಮೈನ್ ಬೀ ಕ್ಯಾನ್ಸರ್ ಗೆ ಬರೋದಕ್ಕೆ ಒಂದು ರೀತಿ ಕಾರಣವಾಗುತ್ತದೆ. ಈ ಕೆಮಿಕಲ್ ಅವಕಾಶ ಮಾಡಿಕೊಡುತ್ತದೆ. ವಿಶೇಷವಾಗಿ ಈ ಬಣ್ಣವನ್ನು ಯೂಸ್ ಮಾಡುವ ಹಾಗೋ ಇಲ್ಲ. ಯಾವ ಪದಾರ್ಥಗಳಲ್ಲೂ ಯೂಸ್ ಮಾಡೋ ಹಾಗೇ ಇಲ್ಲ. ಹಾಗಿದ್ದರೂ ಅದನ್ನು ಸ್ಯಾಂಪಲ್ ಗಳಲ್ಲಿ ಪರೀಕ್ಷೆಯಲ್ಲಿ ಬಳಕೆ ಮಾಡಿರೋದು ಕಂಡು ಬಂದಿದೆ ಎಂದರು.
ಯಾಕೆ ರೋಡಮೈನ್ ಬೀ ಬಳಕೆ ಮಾಡುತ್ತಾರೆ ಅಂದರೇ ಪಿಂಕ್ ಕಲರ್ ಬರೋದಕ್ಕೆ ಬಳಕೆ ಮಾಡುತ್ತಾರೆ. ಈಗ ನಮ್ಮ ಆರೋಗ್ಯ ಇಲಾಖೆಯ ಆಯುಕ್ತರು ಕೂಡ ಸುತ್ತೋಲೆ ಹೊರಡಿಸುತ್ತಾರೆ. ಅದನ್ನು ಬಳಕೆ ಮಾಡುವಂತಿಲ್ಲ. ಬಳಕೆ ಮಾಡಿದ್ರೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಗೋಬಿ ಮಂಚೂರಿ ಇದೊಂದು ಪುಡ್ ಐಟಂ. ಟಾಟ್ರಾಸೈನ್ ಏನಿದೆ ಅದು ಅಪ್ರೂವ್ಡ್ ಆರ್ಟಿಫಿಷಲ್ ಪುಡ್ ಕಲ್ಲರ್. ಕೆಮಿಕಲ್ ಬಳಕೆ ಮಾಡದಂತ ಗೋಬಿಮಂಚೂರಿಯನ್ನು ಬಳಕೆಗೆ ಅವಕಾಶ ನೀಡಲಾಗುತ್ತದೆ. ವಿತ್ ಔಟ್ ಕಲರ್ ಬಳಕೆ ಮಾಡಿರದ ಕ್ಯಾಂಡಿಯನ್ನು ಬಳಕೆ ಮಾಡೋದಕ್ಕೆ ಅವಕಾಶ ನೀಡಲಾಗುತ್ತದೆ. ಅದರ ಹೊರತಾಗಿ ಕಲರ್ ಬಳಕೆ ಮಾಡುವಂತ ಗೋಬಿಮಂಚೂರಿ, ಕ್ಯಾಂಡಿ ನಿಷೇಧ ಮಾಡಲಾಗುತ್ತಿದೆ ಎಂಬುದಾಗಿ ಘೋಷಣೆ ಮಾಡಿದರು.
ಗೋಬಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಬಳಸುವುದು ತಿಳಿದುಬಂದಿದೆ ಎನ್ನಲಾಗಿದೆ. ಇನ್ನೂ ಇದಲ್ಲದೇ ಕಬಾಬ್‌ನ ರುಚಿ ಹೆಚ್ಚಿಸಲು, ಆಕರ್ಷಕವಾಗಿ ಕಾಣುವಂತೆ ಮಾಡಲು ಪೌಡರ್ ಬಳಸಲಾಗುತ್ತದೆ. ಇದು ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕೂಡಲೇ ಈ ಮಾದರಿಯ ಕಬಾಬ್ ಅನ್ನು ನಿಷೇಧಿಸಬೇಕೆಂದು ಆಹಾರ ತಜ್ಞರು ಮತ್ತು ವೈದ್ಯರು ಆಗ್ರಹಿಸಿದ್ದಾರೆ. ಮುಂಬರುವ ದಿನಲ್ಲಿ ಕಬಾಬ್ ಕೂಡ ಬ್ಯಾನ್ ಆದರೆ ಅಚ್ಚರಿ ಪಡಬೇಕಾಗಿಲ್ಲ ಎನ್ನಲಾಗಿದೆ.