ಕರೋನಾ  ಪ್ಯಾರ್ ಹೈ

ತರಾತುರಿಯಲ್ಲಿ ಕಂಡುಕೊಂಡ ಕೋರೋನ ವ್ಯಾಕ್ಸಿನ್ ನಮ್ಮ ಸಾಧನೆ ಎಂದು ಬಿಂಬಿಸಲು ನಡೆದ ಪ್ರಚಾರಗಳು, ಯಾರದೋ ಜನ್ಮದಿನಕ್ಕೆ ಒತ್ತಾಯ ಪೂರ್ವಕವಾಗಿ ದಾಖಲೆಯ ವ್ಯಾಕ್ಸಿನ್ ಚುಚ್ಚುವ ಅಭಿಯಾನಗಳು, ತಂದೆ ತಾಯಿಯರ  ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಇಲ್ಲದಿದ್ದಲ್ಲಿ ಮಕ್ಕಳಿಗೆ  ಶಾಲಾ ಪ್ರವೇಶವಿಲ್ಲ ಎನ್ನುವ ಬ್ಲಾಕ್ ಮೇಲ್ ಗಳು. ಭಯಬಿತ್ತುವ ಟಿವಿ ಮಾಧ್ಯಮಗಳು ದಿನಕ್ಕೊಂದು ತಳಿಯ ವೈರಸ್ ಮತ್ತು ಅದರ ಭಯಾನಕತೆಯನ್ನು ಬೆಳಗ್ಗಿಂದ ರಾತ್ರಿಯವರೆಗೆ ಬಿಂಬಿಸಿ ಜನರಲ್ಲಿ ಮತ್ತಷ್ಟು ಭಯಹುಟ್ಟಿಸುವಲ್ಲಿನ ಟಿ ಆರ್ ಪಿ ಹುಚ್ಚಿನ ಧಾವಂತ. ಅಬ್ಬಬ್ಬಾ..  ಇವೆಲ್ಲದರ ನಡುವೆ ನ್ಯಾಯಾಲಯದ ಈ ತೀರ್ಪು ಸ್ವಾಗತಾರ್ಹವೇ – ಶಂಕರ್‌, ಸೂರ್ನಳ್ಳಿ.

ಕೆಲ ವರ್ಷದ ಹಿಂದೆ ರೋಗ ಮತ್ತು ರೋಗದ ಹೊರತಾದ  ಕಾರಣಗಳಿಂದಾಗಿ ದೇಶದ  ಜನರನ್ನು ಸಾಕಷ್ಟು ಕಂಗೆಡಿಸಿದ್ದ ಕೊರೋನ (ಕೋವಿಡ್-19) ಇದೀಗ ಮತ್ತೆ ಸುದ್ದಿ ಮಾಡಿದೆ. ಕೋವಿಡ್ ಲಸಿಕೆಯ ಅಡ್ಡ ಪರಿಣಾಮದಿಂದಾಗಿ ನಮ್ಮ ಮಕ್ಕಳು ಮರಣಿಸಿದ್ದರೆಂದು ನೀಡಲಾದ ದೂರಿನನ್ವಯ ಸುಪ್ರೀಂ ಕೋರ್ಟ್ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳಿಂದ ತೊಂದರೆಗೊಳಗಾದವರಿಗೆ ಸೂಕ್ತವಾದ  ಪರಿಹಾರವನ್ನು ಒದಗಿಸಬೇಕೆಂದು ಸರಕಾರಕ್ಕೆ ಆದೇಶಿಸಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಸಣ್ಣ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತಿರುವ ಹೃದಯಾಘಾತದ ಸಾವೇ ಮೊದಲಾದ ಅನೇಕ ಅಸಹಜ ಅನಾರೋಗ್ಯ ಪರಿಣಾಮಗಳ ವರದಿಗಳು ಸಾಕಷ್ಟು ದಾಖಲಾಗಿದ್ದವು. ಹಲವರು ಅದನ್ನು ಕೋವಿಡ್ ಲಸಿಕೆಯ ಮೇಲೆ ಹಾಕಿದ್ದರೆ ಇನ್ನು ಕೆಲವರು ಲಸಿಕೆಗೂ ಈ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬ ಸಬೂಬುಗಳನ್ನು ಕೊಟ್ಟಿದ್ದರು. ಸರಕಾರವು ಕೂಡ ಲಸಿಕೆ ಹಾಕಿಸಿಕೊಳ್ಳಲು ಸರಕಾರದ ಯಾವ ಒತ್ತಾಯವೂ ಇದ್ದಿರಲಿಲ್ಲ ಎಂದು ತನ್ನ ಜವಾಬ್ದಾರಿಕೆಯಿಂದ ಹೊರಹೋಗುವ ಪ್ರಯತ್ನವನ್ನೂ ಮಾಡಿತ್ತು. ಆದರೂ ತರಾತುರಿಯಲ್ಲಿ ಕಂಡುಕೊಂಡ ಈ ಲಸಿಕೆಯ ಕುರಿತಾದ ಸಂಶಯ ಎಲ್ಲರನ್ನು ಕಾಡಿದ್ದು ಮಾತ್ರ ಸುಳ್ಳಲ್ಲ.   

ಕೋವಿಡ್  ಸಮಯ ವಿಶ್ವದಾದ್ಯಂತ ಜನರ ಜೀವನ ಪದ್ಧತಿಯೇ ಸಂಪೂರ್ಣವಾಗಿ ಬದಲಾದವು. ಬಿಂದಾಸ್ ಆಗಿ ಓಡಾಡಿ ಕೊಂಡಿದ್ದ ಜನರು ಸ್ವಯಂ ಬಂಧಿಗಳಾಗಿ ಮನೆಯೊಳಗೇ ಕುಳಿತರು. ಸಾಮಾನ್ಯವಾಗಿರುವ ಶಿಕ್ಷಣ, ವ್ಯವಹಾರ ಎಲ್ಲವು ಕಂಡು ಕೇಳರಿಯದಂತೆ ನಿರ್ಬಂಧಕ್ಕೊಳಗಾದವು. ಪರೀಕ್ಷೆಯೇ ಇಲ್ಲದೆ ಪಾಸ್ ಮಾರ್ಕ್ ಗಿಟ್ಟಿಸಿಕೊಂಡ ಪುಣ್ಯಾತ್ಮರದ್ದು ಒಂದು ಕಥೆಯಾದರೆ ಆನ್ ಲೈನ್ ಕ್ಲಾಸ್ ಗಾಗಿ ಹತ್ತಿಪ್ಪತ್ತು ಸಾವಿರದ ಮೊಬೈಲ್ ಕೊಳ್ಳಲು ಮತ್ತು ಇಂಟರ್ ನೆಟ್  ಕನೆಕ್ಷನ್ ಹಾಕಿಸಲು ಪಡಿ ಪಾಟಲು ಪಟ್ಟ ಬಡ  ಕುಟುಂಬಗಳು ಮತ್ತೊಂದೆಡೆ.

ಲಾಕ್ ಡೌನುಗಳು

ಕಾಪಾಡು ದೇವರೇ ಎಂದು ಶುಕ್ರವಾರ, ರವಿವಾರ, ಶನಿವಾರ ಆ ವೃತ, ಈ ವೃತ, ಪೂಜೆ ಎಂದು  ಪರಿಶುದ್ಧ ನಂಬಿಕೆಯಿಂದ ಮೊರೆಯಿಡಲು ದೇವ ಮಂದಿರಕ್ಕೆ ಹೋಗುವುದಾ.. ಅಯ್ಯೋ ಬೇಡಪ್ಪ, ದೇವ್ರೂ ಬೇಡ ಏನೂ  ಬೇಡ ನಾವು ಬದುಕಿದರೆ ಸಾಕಪ್ಪ ಎಂದು ಮಂದಿರಕ್ಕೆ ಬೀಗ ಬಿದ್ದು ಸರ್ವಶಕ್ತ ದೇವರೂ ಕೂಡ ಅನಾಥನಾದಂತ  ಕಾಲವದು. ಲಕ್ಷಾಂತರ ಜನ  ಸೇರುವ ಜಾತ್ರೆಗಳು, ನೂರಾರು ಜನ ಸೇರೋ ಮದುವೆಗಳು ಹತ್ತನ್ನೆರಡು ಜನಕ್ಕೆ ಸೀಮಿತವಾಗಿ ಬಿಕೋ ಎನ್ನುವಂತಾದವು. 

ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ  ಎಂಬಂತೆ  ಈ ಆಪತ್ತಿನ ಕಾಲದಲ್ಲೂ ಕೊಳ್ಳೆಗೇನು ಬರವಿರಲಿಲ್ಲ. ಹತ್ತು ರೂ  ಬೆಲೆ ಯ ಮಾಸ್ಕ್ ಗೆ ನೂರು ರುಪಾಯಿ. ಕೊರೋನಗಂತ ಯಾವ ಮದ್ದೂ ಬರದಿದ್ದರೂ ಆಸ್ಪತ್ರೆಗೆ ಅಡ್ಮಿಟ್ ಆದಂತಹ ರೋಗಿಯ  ಬಿಲ್ ಲಕ್ಷ ದಾಟುತ್ತಿತ್ತು. ಮಾತ್ರೆ ಮದ್ದೇ ಇಲ್ಲದೆ ರೋಗ ಭಯದಿಂದ ವೈದ್ಯರು, ನರ್ಸ್ ಗಳು ರೋಗಿಯ ಹತ್ತಿರಕ್ಕೂ ಸುಳಿಯದೆ ಭಯಾನಕ ಅನ್ಯಗ್ರಹಜೀವಿಯಂತೆ ರೋಗಿಯ ಬದುಕು ಸಾಗಿ ಬಹುತೇಕ ಅಲ್ಲೇ ಅಂತ್ಯಗೊಳ್ಳುತ್ತಿತ್ತು. ಸತ್ತ ಶವಗಳ ಅಂತಿಮ ವಿಧಿ ವಿಧಾನಗಳ ಮಾತು ಬಿಡಿ. ಹತ್ತಿರದವರೇ ಭಯದಿಂದ ತಮ್ಮವರ ಅಂತಿಮ ದರ್ಶನಕ್ಕೂ ಬರುತ್ತಿರಲಿಲ್ಲ. ಶವವನ್ನು ಗುರುತೇ ಸಿಗದಂತೆ ಸಂಪೂರ್ಣ ಪ್ಯಾ ಕ್ ಮಾಡಿ ಜೆಸಿಬಿಯಿಂದ ಹೂಳಲಾಗುತ್ತಿತ್ತು.  

ಎಷ್ಟೋ ಆರೋಗ್ಯವಂತರು ಶೀತ ಜ್ವರಕ್ಕೆಂದು ಆಸ್ಪತ್ರೆಗೆ ದಾಖಲಾಗಿ ಬಳಿಕ ಅನಾಥ ಶವವಾಗಿ ಹೊರಬರುವಂತಾಯ್ತು. ಸ್ವತಃ ಅವರ ಮಕ್ಕಳಿಗೂ ಅವರ ಶವ ನೋಡೋ ಅವಕಾಶ ಕಟ್ಟುನಿಟ್ಟಿನ ನಿರ್ಬಂಧಗಳ ಕಾರಣ  ಸಿಗದೇ ಇರುವಂತಹ ಸ್ಥಿತಿ. ಈ ಕಾರಣಕ್ಕಾಗಿ ಜನರು  ಶೀತ ಜ್ವರ ಬಂದರೂ ಕೂಡ ಕೆಮ್ಮದೇ ಕೊಸರದೇ  ಎತ್ತಾಕಿಕೊಂಡು ಹೋಗೋ ಭಯದಿಂದ  ಅದನ್ನು ಮುಚ್ಚಿಟ್ಟುಕೊಂಡು ಮಲಗೋ  ಸ್ಥಿತಿ.

ಮುಖ್ಯವಾಗಿ ದೇಶದಲ್ಲಿ ಹೊಟ್ಟೆ ಪಾಡಿಗೆಂದು ಎಲ್ಲೆಲ್ಲೋ ಹಂಚಿ ಹೋಗಿ ದುಡಿಮೆ ಮಾಡುತ್ತಿರುವ ವಲಸೆ ಕಾರ್ಮಿಕರ ಸ್ಥಿತಿಯಂತೂ ನಾಯಿ ಪಾಡು. ವಾಹನಗಳಿಲ್ಲ ಸಂಚಾರಕ್ಕೆ ರಾಜ್ಯಗಳ ಗಡಿದಾಟಲು ಕಟ್ಟು ನಿಟ್ಟಿನ ತಪಾಸಣೆ ಮತ್ತು ನಿರ್ಬಂಧಗಳು. ಹಸಿವು ನೀಗಿಸಿಕೊಳ್ಳಲು ಹೋಟೆಲು ಅಂಗಡಿಗಳಿಲ್ಲ. ನೀರು ಕೊಡಲು ಅಪರಿಚಿತರನ್ನು ಕಂಡರೆ ಹೆದರುವ ಮನೆ ಮಂದಿ. ಕಿಲೋ ಮೀಟರ್ ಗಟ್ಟಲೆ ಹೆಂಗಸರು ಮಕ್ಕಳೆನ್ನದೇ ಬಿರುಬಿಸಿಲಲ್ಲಿ  ಊರು ತಲುಪಲು ನಡೆದಾಟ. ಒಟ್ಟಾರೆ ಬಡವರ ಪಾಲಿಗದೊಂದು ಕರಾಳ ಕಾಲವೇ.

ವಿಶ್ವವೇ ಕೊರೋನದಿಂದ ನಲುಗಿರಲು ಅದರಲ್ಲೂ ದುಡ್ಡು ಮತ್ತು ಖ್ಯಾತಿಗಾಗಿ ಕೆಲ ಬಾಬಾಗಳು ಪಂಡಿತರುಗಳು ಅನಧಿಕೃತವಾಗಿ ಕೊರೋನಕ್ಕೆ ಇದು ರಾಮಬಾಣ ಎಂದು ಅವರದ್ದೇ ಮದ್ದುಗಳನ್ನು ಮಾಡಿ ಮಾರುಕಟ್ಟೆಗೆ ಬಿಟ್ಟವು. ಅಸಲಿಗೆ ಕೋರೋನ ಕಾಡಿದ್ದು ಯುರೋಪ್, ಅಮೆರಿಕದಂತಹ ದೇಶಗಳಿಗೆ ಹೊರತು ಭಾರತಕ್ಕಲ್ಲ. ಶ್ವಾಸ ಸಂಬಂಧಿ ಸಮಸ್ಯೆ ಉಳ್ಳವರು ಮತ್ತು ನಿಶ್ಶಕ್ತಿ ಉಳ್ಳವರು ದೇಶದಲ್ಲಿ ಕೊರೊನದಿಂದ ಮರಣಿಸಿರಬಹುದೇ ಹೊರತು ಮೀಡಿಯಾಗಳು ಬಿಂಬಿಸಿದ ರೀತಿಯಲ್ಲಿ ಕೋವಿಡ್ ನಿಂದ ಭಾರತಕ್ಕೇನು ಆಗಿಲ್ಲ. ಮೀಡಿಯಾಗಳು ಪ್ರತಿ ದಿನ ಒದಗಿಸುವ ಮರಣದ ಲೆಕ್ಕ, ಅಂಕಿ ಅಂಶಗಳು ೧೫೦ ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಅಪಘಾತ ಮತ್ತು ಸಣ್ಣ ಪುಟ್ಟ ಸಾಮಾನ್ಯ ಕಾಯಿಲೆಯಿಂದಲೂ ಸಾಯುತ್ತಾರೆ.  ಅಲ್ಲದೆ ಈ ವೈರಸ್ ಎನ್ನುವುದು ಜೀವಿ ಹಾಗು ನಿರ್ಜೀವಿ ಎರಡೂ  ಅನ್ನಬಹುದಾದ ಅಥವಾ ಅನ್ನಲಾಗದಂತಹ  ಒಂದು ಐಟಂ. ಅದರ ಚಟುವಟಿಕೆಗೆ ಪೂರಕ ಅವಕಾಶ ಸಿಕ್ಕಲ್ಲಿ ಇದು ಅಭಿವೃದ್ಧಿ ಹೊಂದಿದರೆ ಇಲ್ಲದಾಗ ಈ ವೈರಸ್ ಸತ್ತಂತಿರುತ್ತದೆ.  ಈ ಕಾರಣಕ್ಕೆ ಇತರ ಸೂಕ್ಷ್ಮ ಜೀವಿಗಳಂತೆ ಅದರ ನಾಶ ಅಥವಾ ನಿಯಂತ್ರಣ ಕಷ್ಟ. ಏಯ್ಡ್ಸ್ ನಿಂದ ಹಿಡಿದು ಸಾಮಾನ್ಯ ಶೀತದ ವರೆಗಿನ ವೈರಸ್ ರೋಗಗಳಿಗೆ ಮದ್ದು ತಯಾರಿ ಕಷ್ಟ ಎನ್ನುವುದು ಇದೇ ಕಾರಣಕ್ಕೆ. ಆದರೆ,  ದೇಹವನ್ನು ಈ ವೈರಸ್ ಗಳ ಪರಿಣಾಮಕ್ಕೆ ಪ್ರತಿಯಾಗಿ ಸಿದ್ಧರಾಗಿಸಿಕೊಳ್ಳಬಹುದು. ಭಾರತೀಯರ ಪ್ಲಸ್ ಪಾಯಿಂಟ್ ಇರೋದೇ ಇಲ್ಲಿ.

ಕೊರೋನಾ ದಿನಗಳು

 ಶೀತ  ಅಥವಾ ಶ್ವಾಸ ಸಂಬಂಧಿ ಕಾಯಿಲೆಯಾದ ಈ ಕೋವಿಡ್ ಗೆ ಪ್ರತಿಯಾಗಿ ನಾವು ಪ್ರತಿ ದಿನ ಸಾಂಬಾರು, ತಿಂಡಿ ತಿನಿಸುಗಳಲ್ಲಿ ಬಳಸುವ ಔಷಧೀಯ ವಸ್ತುಗಳೇ ಲಸಿಕೆಗಳಿಗಿಂತ ಹೆಚ್ಚಾಗಿ ನಮ್ಮನ್ನು ಇಲ್ಲಿ ಕಾಪಾಡಿವೆ. ನಾವು ಬಳಸುವ ಬೆಳ್ಳುಳ್ಳಿ, ಶುಂಠಿ, ಅರಸಿನ ಜೀರಿಗೆಯಂತಹ ಪದಾರ್ಥಗಳು ನಮ್ಮ ದೇಹದಲ್ಲಿ ಈ ಕುರಿತಂತೆ ನಿರೋಧಕ ಶಕ್ತಿ ಬೆಳೆಸಿರುವ ಕಾರಣ ಕೋವಿಡ್ ಬೇರೆ ದೇಶಗಳಷ್ಟು ಇಲ್ಲಿ ಕಾಡಹೋಗಿಲ್ಲ ಯಾವುದೋ ರಾಜಕೀಯ ಪಕ್ಷದ ಕಟ್ಟುನಿಟ್ಟಿನ ಕ್ರಮದ ಕಾರಣಕ್ಕೆ ಕೋಟಿಗಟ್ಟಲೆ ಜನ ಇಲ್ಲಿ ಸಾಯದೇ ಉಳಿದದ್ದು ಅಲ್ಲ. ಬಹುತೇಕ ಭಾರತದ್ದೇ ಆಹಾರ ಪದ್ಧತಿಯ ನೆರೆ ದೇಶಗಳಾದ ಶ್ರೀಲಂಕಾ, ಪಾಕ್, ಬಾಂಗ್ಲಾ, ನೇಪಾಳಗಳಲ್ಲೂ ಕೂಡ ಯುರೋಪ್ ದೇಶಗಳಂತೆ ಕೊರೋನ ಕಾಡದಿದ್ದದ್ದು ಇದೇ ಕಾರಣಕ್ಕೆ.  ಕೋವಿಡ್ ಕಾಲದಲ್ಲಿ ಕಟ್ಟುನಿಟ್ಟಾಗಿ ಬಳಕೆಗೆ ಬಂದ ಸ್ಯಾನಿಟೈಝರ್ ದ್ರಾವಣದ ಬಳಕೆ,  ನಿರ್ಮಲೀಕರಣಕ್ಕೆ ಒತ್ತು ಇವೆಲ್ಲವುಗಳ ಗೋಜಿಗೆ ಹೋಗದ ಲಕ್ಷಾಂತರ ಭಿಕ್ಷುಕರಲ್ಲಿ ಯಾರಿಗೂ ಕೋರೋನ ಬರಲೇ ಇಲ್ಲವೆಂಬುದು ಗೊತ್ತಲ್ಲ.

ತರಾತುರಿಯಲ್ಲಿ ಕಂಡುಕೊಂಡ ಕೋರೋನ ವ್ಯಾಕ್ಸಿನ್ ನಮ್ಮ ಸಾಧನೆ ಎಂದು ಬಿಂಬಿಸಲು ನಡೆದ ಪ್ರಚಾರಗಳು, ಯಾರದೋ ಜನ್ಮದಿನಕ್ಕೆ ಒತ್ತಾಯ ಪೂರ್ವಕವಾಗಿ ದಾಖಲೆಯ ವ್ಯಾಕ್ಸಿನ್ ಚುಚ್ಚುವ ಅಭಿಯಾನಗಳು, ತಂದೆ ತಾಯಿಯರ  ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಇಲ್ಲದಿದ್ದಲ್ಲಿ ಮಕ್ಕಳಿಗೆ  ಶಾಲಾ ಪ್ರವೇಶವಿಲ್ಲ ಎನ್ನುವ ಬ್ಲಾಕ್ ಮೇಲ್ ಗಳು. ಭಯಬಿತ್ತುವ ಟಿವಿ ಮಾಧ್ಯಮಗಳು ದಿನಕ್ಕೊಂದು ತಳಿಯ ವೈರಸ್ ಮತ್ತು ಅದರ ಭಯಾನಕತೆಯನ್ನು ಬೆಳಗ್ಗಿಂದ ರಾತ್ರಿಯವರೆಗೆ ಬಿಂಬಿಸಿ ಜನರಲ್ಲಿ ಮತ್ತಷ್ಟು ಭಯಹುಟ್ಟಿಸುವಲ್ಲಿನ ಟಿ ಆರ್ ಪಿ ಹುಚ್ಚಿನ ಧಾವಂತ. ಅಬ್ಬಬ್ಬಾ..  ಇವೆಲ್ಲದರ ನಡುವೆ ನ್ಯಾಯಾಲಯದ ಈ ತೀರ್ಪು ಸ್ವಾಗತಾರ್ಹವೇ ಸೈ.

ಶಂಕರ್ ಸೂರ್ನಳ್ಳಿ
ಸಾಮಾಜಿಕ ಹೋರಾಟಗಾರರು

More articles

Latest article

Most read