ಭಾರತದ ಸಂವಿಧಾನ ಸಂಭ್ರಮ-75 : ವಿಡಿಯೋ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ವಿಜೇತರ ಪಟ್ಟಿ

Most read

ಕನ್ನಡ ಪ್ಲಾನೆಟ್ ಬಳಗ ಹಾಗೂ ಅಂಬೇಡ್ಕರೈಟ್ ಯೂತ್ ಫೇಡರೇಷನ್ ಜೊತೆಗೂಡಿ ನಡೆಸಿರುವ ಭಾರತದ ಸಂವಿಧಾನ ಸಂಭ್ರಮ-75 ವಿಡಿಯೋ ಭಾಷಣ ಸ್ವರ್ಧೆಯ ಅಂತಿಮ ತೀರ್ಪನ್ನು ಶನಿವಾರ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು.

18 ವರ್ಷದ ಒಳಗಿನ ವಿಭಾಗದ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ತಪಸ್ವಿನಿ ಕೆ ದತ್ತರ್ ಪ್ರಥಮ ಬಹುಮಾನ ಪಡೆದರು. 18 ವರ್ಷದಿಂದ 30 ವರ್ಷದೊಳಗಿನ ಸ್ಪರ್ಧೆಯಲ್ಲಿ ಕಲಬುರಗಿಯ ರಮಾ ದೊಡ್ಡಮನಿಯವರು ಪ್ರಥಮ ಸ್ಥಾನವನ್ನು ಪಡೆದರು.

ಪ್ರಶಸ್ತಿಯು 12,000 ರೂ ನಗದು, ಪ್ರಮಾಣ ಪತ್ರ ಹಾಗೂ ಪಾರಿತೋಷಕ ಒಳಗೊಂಡಿದೆ. ಅದೇ ರೀತಿಯಲ್ಲಿ ದ್ವಿತೀಯ ಬಹುಮಾನವು 8,000 ರೂ ನಗದು, ಪ್ರಮಾಣ ಪತ್ರ ಹಾಗೂ ಪಾರಿತೋಷಕ ಮತ್ತು ತೃತೀಯ ಬಹುಮಾನವು 5,000 ರೂ ನಗದು ಪ್ರಮಾಣ ಪತ್ರ ಹಾಗೂ ಪಾರಿತೋಷಕ ಒಳಗೊಂಡಿದೆ.

ಸುಮಾರು 27 ಜನರಿಗೆ ಸಮಾಧಾನಕಾರ ಪ್ರಶಸ್ತಿಯನ್ನು ಸಹ ನೀಡಲಾಯಿತು. ಈ ಪ್ರಶಸ್ತಿಯು 1,000 ರೂ ನಗದು, ಪ್ರಮಾಣ ಪತ್ರ ಹಾಗೂ ಪಾರಿತೋಷಕವನ್ನು ಒಳಗೊಂಡಿದೆ.

ಪ್ರಶಸ್ತಿ ಪಡೆದ ವಿಜೇತರ ಹೆಸರು ಮತ್ತು ಕೋಡ್

18 ವರ್ಷದ ಒಳಗಿನ ಸ್ಪರ್ಧೆಯಲ್ಲಿ ಬಹುಮಾನ ವಿಜೇತರು

ಪ್ರಥಮ ಬಹುಮಾನ : ತಪಸ್ವಿನಿ ಕೆ ದತ್ತರ್ – 470
ದ್ವಿತೀಯ ಬಹುಮಾನ : ಲಕ್ಷ್ಮೀ ಚಂ ಮಠಪತಿ – 150
ತೃತೀಯ ಬಹುಮಾನ : ಅಬ್ದುಲ್ ಸಲಾಮ್ – 271

ಸಮಾಧಾನಕರ ಬಹುಮಾನ ಪಡೆದವರು

ಚರಿತ ಎಂ – 562
ಮಹಮದ್ ಇರ್ಷದ್ – 373
ಪ್ರಗತಿ ಮಲಕಾರಿ ಒಡೆಯರ್ – 252
ಅಧಿತಿ ಎಂ ಆಚಾರ್ –
ಅಸ್ಮಿತ ಸಂಜು ಕೋರ್ಪಡೆ – 371
ಆಸೀಫ್ – 242
ಕಾರ್ತಿಕ್ ರಾಜು – 244
ಮಹಾಂತೇಶ್ ರಂಗಪ್ಪ – 243
ಶೋಭಿತ್ ಹೆಚ್ ಮೆನನ್ – 017
ಹಶೀಮ್ – 457
ಕ್ರಿತಿ – 429
ಮಹಮದ್ ರಫೀಕ್ – 192
ಖುಷಿ – 568
ತನುಶ್ರೀ – 367

18 ರಿಂದ 30 ವರ್ಷದ ಒಳಗಿನವರ ಸ್ಪರ್ಧೆಯಲ್ಲಿ ಬಹುಮಾನ ಪಡೆದವರು

ಪ್ರಥಮ ಬಹುಮಾನ : ರಮಾ ದೊಡ್ಡಮನಿ – 312
ದ್ವಿತೀಯ ಬಹುಮಾನ : ಶೀಲಾ – 298
ತೃತೀಯ ಬಹುಮಾನ : ದಿಲೀಪ್ – 023

ಸಮಾಧಾನಕರ ಬಹುಮಾನ ಪಡೆದವರು
ಕಾವ್ಯ ಜಿ – 540
ಮಾನಸ – 378
ತನುಜಾ ಸಿ – 380
ಅನುಷ – 226
ಅಶ್ವಿನಿ ಎಸ್ ಎನ್ – 224
ಚೇತನ್ ರಾಜ್ – 322
ಅನಿತಾ ಈರಣ್ಣ – 569
ಸಹನ – 377
ಹನುಮೇಶ್ – 122
ದರ್ಶಿನಿ. ಸಿ – 011
ಫಕೀರಮ್ಮ ತೋಟದ್ – 564
ಪೂಜಾ ತೀರ್ಥಹಳ್ಳಿ – 248
ಶ್ರೀ ಶೆಟ್ಟಿ – 361

ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಹಾಗೂ ಹರ್ಷಕುಮಾರ್‌ ಕುಗ್ವೆ ಅವರು ಬರೆದಿರುವ “ನಮ್ಮ ಸಂವಿಧಾನ” ಪುಸ್ತಕವನ್ನು ಕೊಡಲಾಯಿತು.

“ವೈಯಕ್ತಿಕವಾಗಿ ಕಾರ್ಯಕ್ರಮ ನನಗೆ ತುಂಬ ಇಷ್ಟವಾಯಿತು. ಗೋಷ್ಠಿಯಲ್ಲಿ ಸಂವಾದಿತವಾದ ವಿಷಯಗಳು ಹೊಸ ಕಲಿಕೆಗೆ ದಾರಿ ತೋರಿದಂತಾಗಿವೆ… ವೀಡಿಯೋ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿದ್ದು ತುಂಬ ಸಂತೋಷವಾಯಿತು … ಕನ್ನಡ ಪ್ಲಾನೆಟ್ ತಂಡದವರು ಈ ಕಾರ್ಯಕ್ರಮವನ್ನು ತುಂಬ ಅಚ್ಚುಕಟ್ಟಾಗಿ ನಡೆಸಿದರು. ಭಾಷಣ ಸ್ಪರ್ಧೆಗೆ ಆಯ್ದುಕೊಂಡಿರುವ ವಿಷಯಗಳು ಚರ್ಚಿಸುವಂತವು ಮತ್ತು ಚಿಂತನೆ ಮಾಡುವಂತವಾಗಿದ್ದವು. ಸಂವಿಧಾನ ಉಳಿಸಿಕೊಳ್ಳುವುದೆಂದರೆ ಕೇವಲ ಬೀದಿಗಿಳಿದು ಹೋರಾಟ ಮಾಡುವುದಲ್ಲ, ನಾವು ಅರ್ಥಮಾಡಿಕೊಂಡು ಇತರರಿಗೂ ಅರ್ಥಮಾಡಿಸುವ ಮೌಲ್ಯ” ಎಂದು ಪ್ರಥಮ ಬಹುಮಾನ ಪಡೆದ ರಮಾ ದೊಡ್ಡಮನಿ (ಕಲಬುರಗಿ) ಹೇಳಿದರು.

“ಕಾರ್ಯಕ್ರಮಕ್ಕೆ ಬಂದಿದ್ದು ತುಂಬಾ ಸಂತೋಷ ಕೊಟ್ಟಿತು. ಪ್ರಶಸ್ತಿ ಬರದೆ ಇದ್ದರೂ ಇಡೀ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಮತ್ತು ಸಂವಿಧಾನ ಅರಿವನ್ನು ತಿಳಿದಿದ್ದು, ಜೊತೆಗೆ ನಾಡಿನ ಸಾಹಿತಿಗಳು, ಗಣ್ಯವ್ಯಕ್ತಿಗಳನ್ನು ಬೇಟಿ ಮಾಡಿದ್ದು ಸಂತಸ ತಂದಿತು” ಎಂದು ಸ್ಪರ್ಧಾರ್ತಿ ಯಶಸ್ವಿನಿ ಕೆ. ಕೆ. (ಕೊಡಗು) ಹೇಳಿದರು.

ಬಹುಮಾನ ವಿತರಣೆ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿಯವರು, ಮುಖ್ಯಮಂತ್ರಿಗಳ ಆಪ್ತಕಾರ್ಯದರ್ಶಿಯಾದ ವೆಂಕಟೇಶಯ್ಯ ನೆಲ್ಲುಕುಂಟೆ ಅವರು, ಕರವೇಯ ರಾಜ್ಯ ಕಾರ್ಯದರ್ಶಿಯಾದ ಬಿ.ಸಣ್ಣೀರಪ್ಪ ಅವರು, ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿಯ ವೈಶಾಲಿ ಎನ್‌ ಬ್ಯಾಳಿ ಅವರು, ಭಾಷಣ ಸ್ಪರ್ಧೆಯ ತೀರ್ಪುಗಾರರು ಹಾಗೂ ಸಹಾಯಕ ಪ್ರಾಧ್ಯಪಕರಾದ ಡಾ.ವಿನುತಾ ಅವರು, ಅಂಬೇಡ್ಕರೈಟ್‌ ಯೂತ್‌ ಫೇಡರೇಶನ್‌ನ ರುದ್ರು ಪುನೀತ್‌ ಮತ್ತು ಅರುಣ್‌ ಚಕ್ರವರ್ತಿ ಅವರು ಹಾಗೂ ಕನ್ನಡ ಪ್ಲಾನೆಟ್‌ ಪ್ರಧಾನ ಸಂಪಾದಕರಾದ ದಿನೇಶ್‌ ಕುಮಾರ್‌ ಎಸ್‌ ಸಿ ಮತ್ತು ಹರ್ಷಕುಮಾರ್‌ ಕುಗ್ವೆ ಅವರು ಉಪಸ್ಥಿತರಿದ್ದರು.

More articles

Latest article