Saturday, July 27, 2024

‘ಪಾಕಿಸ್ತಾನ್ ಜಿಂದಾಬಾಂದ್’ ಘೋಷಣೆ ಪ್ರಕರಣ : ಮಾಧ್ಯಮಗಳ ವಿರುದ್ಧವೂ ತನಿಖೆಯಾಗಬೇಕು ಎಂದ ನಾಸಿರ್ ಹುಸೇನ್

Most read

ರಾಜ್ಯಸಭೆ ಚುನಾವಣೆಯ ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಝಿಂದಾಬಾಂದ್’ ಘೋಷಣೆ ಕೂಗಲಾಗಿದೆ ಎಂಬ ಬಿಜೆಪಿ ಮತ್ತು ಮಾಧ್ಯಮಗಳ ಆರೋಪದ ಕುರಿತು ರಾಜ್ಯಸಭಾ ಸದಸ್ಯ ಡಾ. ಸೈಯ್ಯದ್ ನಾಸಿರ್ ಹುಸೇನ್, ಸುದ್ದಿಯನ್ನು ತಿರುಚಿದ ಮಾಧ್ಯಮಗಳ ವಿರುದ್ಧವು ತನಿಖೆಯಾಗಬೇಕು ಎಂದು ಹೇಳಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆಯಾದ ಎಎನ್ಐ ಜೊತೆ ಮಾತನಾಡಿರುವ ಅವರು,  ಎರಡೂ ಪಕ್ಷಗಳು (ಬಿಜೆಪಿ-ಜೆಡಿಎಸ್) ಮೈತ್ರಿ ಮಾಡಿಕೊಂಡು ಬಂದರೂ ರಾಜ್ಯಸಭಾ ಚುನಾವಣೆಯಲ್ಲಿ ತುಂಬಾ ಹೀನಾಯವಾಗಿ ಸೋತಿದ್ದಾರೆ. ಅವರ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ. ಸೋಲಿನ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಬಿಜೆಪಿಯರು ಹೆಚ್ಚಿನ ರಾಜ್ಯಸಭಾ ಸ್ಥಾನವನ್ನು ಗೆಲ್ಲಲು ತಮ್ಮ ಬತ್ತಳಿಯಲ್ಲಿರುವ ಇಡಿ, ಐಟಿ ಮತ್ತು ಹಣ ಆಮಿಷ ಎಲ್ಲಾ ಅಸ್ತ್ರವನ್ನು ಬಳಸಿ ಸೋತಿದ್ದಾರೆ. ಅದಕ್ಕೆ ಅವರು ಈತರ ಮಾತನಾಡುತ್ತಿದ್ದಾರೆ ಬಿಡಿ ಎಂದು ಟೀಕಿಸಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಕ್ಕೆ, ನಮ್ಮ ಕಾರ್ಯಕರ್ತರು ಮತ್ತು ಬೆಂಬಲಿಗರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ ನಾನೂ ಅಲ್ಲಿದ್ದೆ. ನಮ್ಮ ಬೆಂಬಲಿಗರು ನಾಸಿರ್ ಹುಸೇನ್ ಝಿಂದಾಬಾದ್, ನಾಸಿರ್ ಸಾಬ್ ಝಿಂದಾಬಾದ್, ನಾಸಿರ್ ಖಾನ್ ಝಿಂದಾಬಾದ್, ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲಿ ಎಲ್ಲಿಯೂ ನನಗೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ಕಾಣಿಸಿಲ್ಲ. ಯಾರಾದರು ಘೋಷಣೆ ಕೂಗಿದ್ದರೆ ನಾನೇ ಆತನನ್ನು ಜೈಲಿಗೆ ಕಳಿಸುತ್ತಿದೆ ಎಂದು ಎಎನ್ಐ ಗೆ ತಿಳಿಸಿದ್ದಾರೆ.

ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವನು. ಸ್ವಾತಂತ್ರ್ಯಕ್ಕಾಗಿ ತಂದುಕೊಟ್ಟು ಪಕ್ಷವನ್ನು ಪ್ರತಿನಿಧಿಸುತ್ತಿದ್ದೇನೆ.ರಾಷ್ಟ್ರೀಯತೆ ಮತ್ತು ದೇಶಪ್ರೇಮದ ಬಗ್ಗೆ ಅವರಿಂದ ಪಾಠ ಕಲಿಯಬೆಕಿಲ್ಲ. ಅಲ್ಲಿ ಹಲವು ಪತ್ರಕರ್ತರಿದ್ದರೂ ಆದರೆ ಅಲ್ಲಿದ್ದ ಒಬ್ಬ ಪತ್ರಕರ್ತ ಕೆರಳಿಸಬೇಕು ಅಂತಲೇ ಈ ಪ್ರಶ್ನೆಯನ್ನು ಪದೆ ಪದೆ ಕೇಳಿದನು. ಸಿಟ್ಟಿನಿಂದ ನಾನು ಆತನಿಗೆ ಈತನನ್ನು ಹೊರಗೆ ಕಳಿಸಿ ಎಂದು ಹೇಳಿದ್ದೇನೆ. ಈ ಪತ್ರಕರ್ತ ಬಿಟ್ಟು ಬೇರೆ ಯಾವುದೇ ಪತ್ರಕರ್ತ ಈ ಒಂದಿ ಘೋಷಣೆಯನ್ನು ಕೇಳಿಕೊಂಡಿಲ್ಲ. ರೆಕಾರ್ಡ್ ಮಾಡಿಲ್ಲ ಮತ್ತು ಒಂದು ಗಂಟೆಗಳ ಕಾಲ ನಾನು ವಿಧಾಸೌಧದಲ್ಲಿ ಇದ್ದರೂ ಈ ಕುರಿತು ಪ್ರಶ್ನೆಯನ್ನು ಕೇಳಿಲ್ಲ. ಆದರೆ ನಾನು ನನ್ನ ಕಚೇರಿಗೆ ಹೊರಟಾಗ ಮಾಧ್ಯಮಗಳಿಂದ ನನಗೆ ಕರೆ ಬಂತು. ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಲಾಗಿದೆ ಎಂದು ಅವರು ಹೇಳಿದರು. ಅದಕ್ಕೆ ಉತ್ತರಿಸಿದ ನಾನು, ಅಲ್ಲಿ ಹಲವು ಘೋಷಣೆಗಳನ್ನು ಕೂಗಲಾಗಿದೆ. ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗಿರುವುದು ನನ್ನ ಕಿವಿಗೆ ಬಿದ್ದಿಲ್ಲ ಎಂದಿದ್ದೇನೆ. ಅದು ಏನೇ ಆಗಿದ್ದರೂ ತನಿಖೆ ನಡೆಸುವಂತೆ ಪೊಲೀಸರನ್ನು ಕೇಳುತ್ತೇನೆ. ಅವರು ತನಿಖೆ ನಡೆಸಲಿ ಎಂದು ನಾಸಿರ್ ಹುಸೇನ್ ಹೇಳಿದ್ದಾರೆ.

ಯಾರಾದರು ಆ ರೀತಿಯ ಘೋಷಣೆ ಕೂಗಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಕುರಿತು ತನಿಖೆಯಾಗಬೇಕು. ಯಾರು ಈ ಕುರಿತು ಘೋಷಣೆ ಕೂಗಿಲ್ಲ ಎಂದಾದಲ್ಲಿ ವಿಡಿಯೋವನ್ನು ತಿರುಚಿದ ಬಗ್ಗೆಯೂ ತನಿಖೆ ನಡೆಯಬೇಕು. ಅದನ್ನು ಹಂಚಿಕೊಂಡ ಮಾಧ್ಯಮಗಳ ವಿರುದ್ಧವು ತನಿಖೆಯಾಗಬೇಕು. ಯಾರಾದರು ಘೋಷಣೆ ಕೂಗಿದ್ದರೆ, ಆ ವ್ಯಕ್ತಿ ಯಾರು? ಆತ ಎಲ್ಲಿಯವನು? ಮತ್ತು ಆತ ವಿಧಾನಸೌಧಕ್ಕೆ ಪ್ರವೇಶ ಪಡೆದಿದ್ದು ಹೇಗೆ? ಈ ರೀತಿ ಘೋಷಣೆ ಕೂಗಿರುವುದರ ಹಿಂದಿನ ಉದ್ದೇಶವೇನು? ಈ ಎಲ್ಲದರ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದ್ದಾರೆ.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅವರು ಈ ಕುರಿತು ನಾಸಿರ್ ಅವರು ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಅವರು ನನ್ನ ಪೋಸ್ಟ್ ನೋಡದೆ ವಿಧಾನಸಭಾ ಅಧಿವೇಶನಕ್ಕೆ ಹೋಗಿರಬೇಕು. ಜವಾಬ್ದಾರಿಯುತ ಹುದ್ದೆಯಲ್ಲಿ ಇರುವವರು ಸರಿಯಾಗಿ ಸಿದ್ದತೆ ಮಾಡಿಕೊಂಡು ವಾದ ಮಾಡಬೇಕು. ರಾಜ್ಯದ ಜನರಿಗೆ ಈತರ ಸುಳ್ಳು ಸಂದೇಶ ನೀಡಬಾರದು. ಇದನ್ನು ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ ಎಂದು ಕಿಡಿಕಾರಿದ್ದಾರೆ.

More articles

Latest article