ಮೋದಿಯವರೇ ನೀವು ಗಿರವಿ ಇಡಿಸಿದ ಚಿನ್ನ ಬಿಡಿಸಿಕೊಡಲೆಂದೇ ಕಾಂಗ್ರೆಸ್‌ ಗ್ಯಾರೆಂಟಿ ನೀಡುತ್ತಿದೆ: ಎಂ.ಜಿ.ಹೆಗಡೆ

Most read

ಮಂಗಳೂರು: ಕಾಂಗ್ರೆಸ್‌ ಗ್ಯಾರೆಂಟಿಯಿಂದ ಮಹಿಳೆಯರ ಮಂಗಳ ಸೂತ್ರಕ್ಕೂ ಕೈಹಾಕಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಮೋದಿಯವರೇ ಜನರಿಂದ ಗಿರವಿ ಇಡಿಸಿದ ಚಿನ್ನ ಬಿಡಿಸಿಕೊಳ್ಳಲೆಂದು ಕಾಂಗ್ರೆಸ್‌ ಪಕ್ಷ ಗ್ಯಾರೆಂಟಿ ನೀಡುತ್ತಿದೆ ಎಂದು ಪಕ್ಷದ ರಾಜ್ಯ ವಕ್ತಾರ ಎಂ.ಜಿ.ಹೆಗಡೆ ತಿರುಗೇಟು ನೀಡಿದ್ದಾರೆ.

2020ರ ಹೊತ್ತಿಗೆ ಭಾರತದ ತಾಯಂದಿರು ಮನೆ ಬಾಡಿಗೆ ನೀಡಲು, ದಿನಸಿ ವಸ್ತುಗಳನ್ನು ಖರೀದಿಸಲು, ಮಕ್ಕಳ ಫೀಸು ಕಟ್ಟಲು ಅಡವಿಟ್ಟಿದ್ದು ಸುಮಾರು 30 ಸಾವಿರ ಕೋರಿ ರುಪಾಯಿ ಮೌಲ್ಯದ ಚಿನ್ನ. 2024ರದಲ್ಲಿ ಅದು ದುಪ್ಪಟ್ಟಾಗಿದೆ. ಈಗ ಭಾರತದ ತಾಯಂದಿರ ಒಟ್ಟು 60 ಸಾವಿರ ಕೋಟಿ ರುಪಾಯಿ ಮೌಲ್ಯದ ಚಿನ್ನ ಗಿರವಿ ಅಂಗಡಿಗಳಲ್ಲಿ ಸಿಕ್ಕಿಬಿದ್ದಿವೆ. ಇದೆಲ್ಲವೂ ನೀವು ತಂದ ʻಅಚ್ಚೇ ದಿನʼ ಗಳಲ್ಲಿ ನಡೆದಿವೆ. ಈಗ ಆ ಚಿನ್ನವನ್ನು ಬಿಡಿಸಿಕೊಳ್ಳಲು ಕಾಂಗ್ರೆಸ್‌ ಗ್ಯಾರೆಂಟಿ ಸಹಾಯ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಗಿರವಿ ಇಟ್ಟ ಚಿನ್ನದಲ್ಲಿ ಭಾರತದ ತಾಯಂದಿರ ಚಿನ್ನದ ಸರ, ಬಳೆ, ಕಿವಿಯೋಲೆಯಿಂದ ಹಿಡಿದು ಮಂಗಳ ಸೂತ್ರವೂ ಸೇರಿದೆ. ಇದನ್ನೆಲ್ಲ ಬಿಡಿಸಿಕೊಳ್ಳಲೆಂದೇ ಕಾಂಗ್ರೆಸ್‌ ಪಕ್ಷ ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಒಂದು ಲಕ್ಷ ರುಪಾಯಿ ಗ್ಯಾರೆಂಟಿ ನೀಡಿದೆ ಎಂದು ಅವರು ಹೇಳಿದ್ದಾರೆ.

ದೇಶದ ಸಂಪತ್ತನ್ನೆಲ್ಲ ಮಾರಿದ ಪ್ರಧಾನಿಗೆ ಯಾರನ್ನೇ ನೋಡಿದರೂ ವ್ಯಾಪಾರಿಯಂತೆ ಕಾಣುತ್ತಾರೆ ಎಂದು ಲೇವಡಿ ಮಾಡಿದ ಅವರು ದೇಶದ ಜನತೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ, ಅವರ ನೆರವಿಗೆ ಬರುವುದು ಸರ್ಕಾರಗಳ ಕರ್ತವ್ಯ ಎಂದರು.

ವಿಮಾನದ ಮೂಲಕ ಅಡಿಕೆ ಕಳ್ಳ ಸಾಗಾಣಿಕೆ… ಮೋದಿ ಸರ್ಕಾರ ಮಾಡಿದ್ದೇನು?

ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರೇ ಅಪಾದನೆ ಮಾಡಿದ ಪ್ರಕಾರ ಮಂಗಳೂರು ವಿಮಾನನಿಲ್ದಾಣ ಮೂಲಕವೂ ಅಡಿಕೆ ಕಳ್ಳ ಸಾಗಾಣಿಕೆಯಾಗಿದೆಯೇ? ಹಾಗಾದರೆ ಇದರಿಂದ ಅಡಿಕೆ ಕೃಷಿಕರಿಗೆ ಅನ್ಯಾಯವಾದಂತೆ. ಸರ್ಕಾರ ಇದರ ಬಗ್ಗೆ ಯಾಕೆ ತನಿಖೆ ಮಾಡಿಲ್ಲ. ಇದರ ಹಿಂದಿರುವ ಶಕ್ತಿಯ ಬಗ್ಗೆ ಸರ್ಕಾರ ಯಾವ ಕ್ರಮ ಕೈವಗೊಂಡಿದೆ ಅನ್ನುವ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಎಂ.ಜಿ.ಹೆಗಡೆ ಆಗ್ರಹಿಸಿದ್ದಾರೆ.

More articles

Latest article