ನಾಳೆ ಬೆಂಗಳೂರಿಗೆ CJP ನಾಯಕರು : SIR ಜನತಾ‌ ನ್ಯಾಯಾಲಯದಲ್ಲಿ ಭಾಗಿ

ಸಿಜೆಪಿ ಅಶೂತೋಷ್‌ ರಂಕಾ, ಪ್ರಕಾಶ್‌ ರಾಜ್‌ ಭಾಗಿ

ಬೆಂಗಳೂರು : ದೇಶಾದ್ಯಂತ   ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು  ‘ಜನತಾ ನ್ಯಾಯಾಲಯ’ ರಾಜ್ಯಮಟ್ಟದ ಬೃಹತ್‌ ಪ್ರತಿಭಟನೆಯನ್ನು   ಅಕ್ಟೋಬರ್ 8 ರಂದು ಸಿಜೆಪಿ ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಲಿದ್ದಾರೆ. 
 
ಸಿಜೆಪಿ (CJP) ಸಹ-ಸಂಯೋಜಕ ಅಶುತೋಷ್ ರಂಕಾ ಅವರು,  ಅ.8 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಬೆಳಿಗ್ಗೆ 10.30 ರಿಂದ  SIR ಕುರಿತ ಜನತಾ ನ್ಯಾಯಮಂಡಳಿಯಲ್ಲಿ ಭಾಗವಹಿಸುತ್ತಿದ್ದೇವೆ ಮತ್ತು ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಕೈಬಿಡಲಾದ ಕನ್ನಡಿಗರೊಂದಿಗೆ ಸಂವಾದ ನಡೆಸಲಿದ್ದೇವೆ. ಇದರ ನಂತರ ನಮ್ಮ ಮಹಿಳೆಯರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಪ್ರತಿಭಟನೆ ನಡೆಯಲಿದೆ. ನಿಮ್ಮೆಲ್ಲರ ಭೇಟಿಯ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ. 

 ಕರ್ನಾಟಕದಾದ್ಯಂತದ ನಾಗರಿಕ ಸಮಾಜದ ಗುಂಪುಗಳು ‘ಜನರ ನ್ಯಾಯಾಲಯ’ಯನ್ನು  ಆಯೋಜಿಸುಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.  ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್ ಹಾಗೂ ವಿವಿಧ ಯುವ ಮತ್ತು ನಾಗರಿಕ ಸಮಾಜದ ಸಂಘಟನೆಗಳ ಪ್ರತಿನಿಧಿಗಳೊಂದಿಗೆ, CJP ಸಂಸ್ಥಾಪಕ ಅಭಿಜೀತ್ ಡಿಪ್ಕೆ, ವಕ್ತಾರ ಸೌರವ್ ದಾಸ್ ಮತ್ತು ರಂಕಾ ಅವರು ಭಾಗವಹಿಸುವ ನಿರೀಕ್ಷೆಯಿದೆ.

More articles

Latest article

Most read