ನಾಗರಿಕ ಮೂಲಸೌಕರ್ಯಗಳೇ ಟಾರ್ಗೆಟ್‌ : ಇರಾನ್‌ ಅಣ್ವಸ್ತ್ರದ ವಿರುದ್ಧ ಟ್ರಂಪ್‌ ಅಂತಿಮ ಸಮರ!

ವಾಷಿಂಗ್ಟನ್/ಟೆಹ್ರಾನ್‌ : ಪಶ್ಚಿಮ ಏಷ್ಯಾದಲ್ಲಿ ಯುದ್ಧ ಕಾರ್ಮೋಡ ದಟ್ಟವಾಗಿ ಆವರಿಸಿದ್ದು, ಇಡೀ ವಿಶ್ವವೇ ಉಸಿರು ಬಿಗಿಹಿಡಿದು  ನೋಡುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ಗೆ ನೀಡಿದ್ದ ಗಡವು ಮಂಗಳವಾರ ರಾತ್ರಿ 8 ಗಂಟೆಯ ಅಂತಿಮ ಗಡವು ಸಮೀಪಿಸುತ್ತಿದ್ದಂತೆ, ಸಂರ್ಘಷದ ತೀರ್ವತೆ ತರಕ್ಕೇರಿದೆ.

ವೈಟ್‌ಹೌಸ್‌ನಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಇರಾನ್‌ ಒಪ್ಪಂದಕ್ಕೆ ಒಪ್ಪದಿದ್ದರೆ ಇರಾನ್‌ ಹಿಂದೆಂದು ಕಾಣಾದ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ . ಹಾಗೆ “ಹಾರ್ಮುಜ್ ಜಲಸಂಧಿಯನ್ನು ಕೂಡಲೇ ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ, ಇರಾನ್‌ನ ಪ್ರಮುಖ ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಒಂದೇ ರಾತ್ರಿಯಲ್ಲಿ ಮಣ್ಣುಪಾಲು ಮಾಡಲಾಗುವುದು” ಎಂದು ಅವರು ಗುಡುಗಿದ್ದಾರೆ.

ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಯುದ್ಧಾಪರಾಧವಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ಅಣ್ವಸ್ತ್ರಗಳನ್ನು ಸಂಗ್ರಹಿಸಿರುವುದು ಜಗತ್ತಿನ ಅತಿದೊಡ್ಡ ಯುದ್ಧಾಪರಾಧ. ಹಾಗಾಗಿ ಇರಾನ್ ಮೇಲಿನ ದಾಳಿಯ ಬಗ್ಗೆ ನನಗೇನೂ ಆತಂಕವಿಲ್ಲ” ಎಂದು ಕಟುವಾಗಿ ಹೇಳಿದ್ದಾರೆ. ಅಲ್ಲದೆ, ಇರಾನ್‌ನ ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳುವ ಆಸೆಯನ್ನುಅವರು ವ್ಯಕ್ತಪಡಿಸಿದ್ದಾರೆ.

ಟ್ರಂಪ್‌ ಮಾತಿಗೆ ಇರಾನ್ ತಿರಸ್ಕಾರ

ಅತ್ತ ಇರಾನ್ ಕೂಡ ಯಾವುದೇ ಕಾರಣಕ್ಕೂ ಮಣಿಯುವ ಲಕ್ಷಣಗಳನ್ನು ತೋರಿಸುತ್ತಿಲ್ಲ. ಅಮೆರಿಕ ನೀಡಿದ್ದ 45 ದಿನಗಳ ತಾತ್ಕಾಲಿಕ ಕದನ ವಿರಾಮ ಪ್ರಸ್ತಾವನೆಯನ್ನು ಟೆಹ್ರಾನ್ ಕಸದ ಬುಟ್ಟಿಗೆ ಎಸೆದಿದೆ. “ನಮಗೆ ಬೇಕಿರುವುದು ತಾತ್ಕಾಲಿಕ ಬಿಡುವು ಅಲ್ಲ, ಯುದ್ಧಕ್ಕೆ ಶಾಶ್ವತ ಅಂತ್ಯ ಮತ್ತು ಇದುವರೆಗೆ ಸಂಭವಿಸಿದ ಹಾನಿಗೆ ಅಮೆರಿಕದಿಂದ ನ್ಯಾಯಯುತ ಪರಿಹಾರ” ಎಂದು ಇರಾನ್ ಅಧಿಕಾರಿಗಳು ಆಗ್ರಹಿಸಿದ್ದಾರೆ.

ಸವಾಲಿನ ನಡುವೆಯೇ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕತಾರ್‌ನ ಎರಡು ಎಲ್‌ಎನ್‌ಜಿ (LNG) ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದಿದ್ದು, ಜಾಗತಿಕ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.

ಯುದ್ಧದ ಭೀಕರತೆ ಮತ್ತು ಸಾವು-ನೋವುಗಳು

ಸೋಮವಾರವೊಂದೇ ದಿನ ಇಸ್ರೇಲ್ ಪಡೆಗಳು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 25 ಮಂದಿ ಮೃತಪಟ್ಟಿದ್ದಾರೆ. ಇಡೀ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 34 ಮಂದಿ ಬಲಿಯಾಗಿದ್ದಾರೆ. ಗಾಜಾದ ನಿರಾಶ್ರಿತರ ಕೇಂದ್ರದ ಮೇಲಿನ ದಾಳಿಯಲ್ಲಿ 10 ಮಂದಿ ಸಾವನ್ನಪ್ಪಿದ್ದರೆ, ಲೆಬನಾನ್‌ನಲ್ಲಿ ಸಂಘರ್ಷದ ಬಲಿಪಶುಗಳ ಸಂಖ್ಯೆ 1,400 ದಾಟಿದೆ. ಇರಾನ್ ಉಡಾಯಿಸಿದ ಡ್ರೋನ್ ಮತ್ತು ಕ್ಷಿಪಣಿಗಳನ್ನು ಯುಎಇ ಮತ್ತು ಕುವೈತ್‌ನ ರಕ್ಷಣಾ ವ್ಯವಸ್ಥೆಗಳು ಹೊಡೆದುರುಳಿಸಿವೆ. ಈ ಪ್ರದೇಶದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ತೈಲ ಮಾರುಕಟ್ಟೆಯಲ್ಲಿ ಕಂಪನ

ಯುದ್ಧದ ಬಿಸಿಯು ಜಾಗತಿಕ ಆರ್ಥಿಕತೆಯ ಮೇಲೂ ತಟ್ಟಿದೆ. ತೈಲ ಪೂರೈಕೆಯಲ್ಲಿನ ವ್ಯತ್ಯಯದ ಭೀತಿಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 110 ಡಾಲರ್ ಗಡಿ ದಾಟಿದೆ. ಇದು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ತೈಲ ಬೆಲೆ ಏರಿಕೆಯ ಭೀತಿ ಹುಟ್ಟಿಸಿದೆ.

ವಿಶ್ವಸಂಸ್ಥೆಯ ನಿರ್ಣಾಯಕ ಸಭೆ

ಇಂದು ಏಪ್ರಿಲ್ 7 ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈ ಬಿಕ್ಕಟ್ಟಿನ ಬಗ್ಗೆ ತುರ್ತು ಸಭೆ ನಡೆಸಲಿದೆ. ಹಾರ್ಮುಜ್ ಜಲಸಂಧಿಯ ವಿವಾದ ಮತ್ತು ಹೆಚ್ಚುತ್ತಿರುವ ಸಾವು-ನೋವುಗಳನ್ನು ತಡೆಗಟ್ಟಲು ವಿಶ್ವಸಂಸ್ಥೆಯು ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ.

ಟ್ರಂಪ್ ಅವರ ಗಡುವು ಮುಗಿಯಲು ಕೇವಲ ಕೆಲವು ಗಂಟೆಗಳಷ್ಟೇ ಬಾಕಿ ಉಳಿದಿದ್ದು, ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆಸುತ್ತವೆಯೇ ಅಥವಾ ರಾಜತಾಂತ್ರಿಕ ಮಾತುಕತೆ ಯಶಸ್ವಿಯಾಗುತ್ತದೆಯೇ ಎಂಬುದನ್ನು ಇಡೀ ಜಗತ್ತು ಕಾತರದಿಂದ ನೋಡುತ್ತಿದೆ.

More articles

Latest article

Most read