ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ; ಸೆಕ್ಷನ್ 6A ಸಿಂಧು ಎಂದ ಸುಪ್ರೀಂಕೋರ್ಟ್

Most read

ಅಸ್ಸಾಂ ಒಪ್ಪಂದದ ಪ್ರಕಾರ ವಲಸಿಗರಿಗೆ ಪೌರತ್ವ ನೀಡುವ 1955ರ ಪೌರತ್ವ ಕಾಯಿದೆಯ ಸೆಕ್ಷನ್ 6Aನ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದೆ. ಈ ಸೆಕ್ಷನ್ ಅಡಿಯಲ್ಲಿ 1966 ಜನವರಿ 1 ಹಾಗೂ 1971ಮಾರ್ಚ್ 25ರ ನಡುವೆ ಅಸ್ಸಾಂಗೆ ಪ್ರವೇಶಿಸಿದ ವಲಸಿಗರಿಗೆ ಭಾರತದ ಪೌರತ್ವ ನೋಂದಣಿ ಮಾಡಿಕೊಳ್ಳಬಹುದಾಗಿದೆ.


ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸೂರ್ಯಕಾಂತ, ಎಂ.ಎಂ.ಸುಂದರೇಶ್, ಜೆ.ಬಿ.ಪಾರ್ದೀವಾಲ, ಹಾಗೂ ಮನೋಜ್ ಮಿಶ್ರಾ ಅವರಿದ್ದ ಸಾಂವಿಧಾನಿಕ ಪೀಠ 4:1 ರ ಬಹುಮತದ ಆಧಾರದಲ್ಲಿ ಗುರುವಾರ ಮಹತ್ವದ ತೀರ್ಪು ನೀಡಿದೆ. ಅಸ್ಸಾಂ ಒಪ್ಪಂದವು ಅನಧಿಕೃತ ವಲಸೆ ಸಮಸ್ಯೆಗೆ ರಾಜಕೀಯ ಪರಿಹಾರವಾಗಿತ್ತು. ಸೆಕ್ಷನ್ 6A ಶಾಸನಾತ್ಮಕ ಪರಿಹಾರವಾಗಿದೆ ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ.
ಅಸ್ಸಾಂನ ಸ್ಥಳೀಯ ಜನಸಂಖ್ಯೆಯಲ್ಲಿ ವಲಸಿಗರ ಪ್ರಮಾಣವು ಇತರ ಗಡಿ ರಾಜ್ಯಗಳಿಗಿಂತ ಹೆಚ್ಚಾಗಿದೆ. ಹೀಗಾಗಿ ಬಾಂಗ್ಲಾದೇಶದೊಂದಿಗೆ ಹೆಚ್ಚಿನ ಗಡಿಭಾಗವನ್ನು ಹಂಚಿಕೊಂಡಿದೆ. ಇದು ಇತರ ರಾಜ್ಯಗಳಿಗಿಂತ ಅಸ್ಸಾಂ ಅನ್ನು ಪ್ರತ್ಯೇಕಿಸುವುದು ನ್ಯಾಯಸಮ್ಮತವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.


ಬಾಂಗ್ಲಾದೇಶ ವಿಮೋಚನಾ ಯುದ್ಧ ಅಂತ್ಯಗೊಂಡ ದಿನವಾಗಿರುವುದರಿಂದ 1971 ಮಾರ್ಚ್ 25 ಅನ್ನು ಕೊನೆಯ ದಿನಾಂಕ ಎಂದು ನಿಗದಿಪಡಿಸುವುದು ಕೂಡಾ ತಾರ್ಕಿಕವಾಗಿದೆ ಎಂದು ಬಹುಮತದ ತೀರ್ಪು ನೀಡಿದ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

More articles

Latest article