ಕಲಬುರಗಿ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಆರೋಪದಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸುನಿಲ್ ವಲ್ಯಾಪುರ ಅವರ ಮನೆಯ ಮೇಲೆ ಸಿಐಡಿ ಅಧಿಕಾರಿಗಳ ತಂಡ ಶನಿವಾರ ದಿಡೀರ್ ದಾಳಿ ನಡೆಸಿದೆ.
2022ರಲ್ಲಿ ಸುನಿಲ್ ವಲ್ಯಾಪುರ ಅವರ ಪುತ್ರ ವಿನಯ್ ವಲ್ಲಾಪುರ ಅವರ ಮೇಲೆ ಭೋವಿ ನಿಗಮದ 12 ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಸಿಐಡಿ ಅಧಿಕಾರಿಗಳ ತಂಡ ನ್ಯಾಯಾಲಯದ ಸರ್ಚ್ ವಾರೆಂಟ್‌ನೊಂದಿಗೆ ಆಗಮಿಸಿ ನಗರದ ಸಂತೋಷ ಕಾಲೊನಿಯಲ್ಲಿನ ವಾಲ್ಲ್ಯಾಪುರ ಅವರ ಮನೆಯಲ್ಲಿ ಕಡತಗಳ ಶೋಧ ನಡೆಸುತ್ತಿದೆ.
ಚಿಂಚೋಳಿ ಸೋಲಾರ್ ಪ್ಲಾಂಟ್ ಸ್ಥಾಪನೆ ಹೆಸರಲ್ಲಿ ಕೆಲಸ ಮಾಡದೇ ಮಗನ ಮೂಲಕ ಹಣ ಲೂಟಿ ಮಾಡಿದ್ದಾರೆ ಎಂಬ ಆರೋಪ ಇವರ ಮೇಲಿದೆ. ಫಲಾನುಭವಿಗಳ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ 12 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ.
ಸಿಐಡಿ ಡಿವೈಎಸ್ಪಿ ಅಸ್ಲಂ ಭಾಷಾ ನೇತೃತ್ವದಲ್ಲಿ ಎಂಟು ಜನ ಅಧಿಕಾರಿ ಹಾಗೂ ಸಿಬ್ಬಂದಿಗಳ ದಾಳಿ ಮಾಡಿದ್ದಾರೆ. ಮನೆಯೊಳಗೆ ಎಂಟ್ರಿ ಕೊಟ್ಟ ಸಿಐಡಿ ತಂಡ ಹಗರಣದ ಬಗ್ಗೆ ವಿವರಣೆ ಮತ್ತು ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದೆ.