ಭಾರಿ ಮಳೆ: ಚೆನ್ನೈ ಮತ್ತು ಬೆಂಗಳೂರು ನಡುವಿನ ರೈಲು ಸಂಚಾರ ರದ್ದು

Most read

ಚೆನ್ನೈ ಮತ್ತು ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಎರಡೂ ನಗರಗಳ ನಡುವಿನ ಅನೇಕ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.


ಬೆಂಗಳೂರಿಗಿಂತಲೂ ಚೆನ್ನೈ ನಗರ ಮತ್ತು ತಮಿಳುನಾಡಿನಾದ್ಯಂತ ವಿಪರೀತ ಮಳೆಯಾಗುತ್ತಿದೆ. ತಮಿಳುನಾಡಿನಲ್ಲಿ ಅನೇಕ ಪ್ರದೇಶಗಳು ನೀರಿನಿಂದ ಜಲಾವೃತವಾಗಿವೆ. ಹಳಿಗಳ ಮೇಲೂ ನೀರು ನಿಂತಿರುವುದರಿಂದ ಹಲವು ರೈಲಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ.


ರದ್ದುಪಡಿಸಲಾದ ರೈಲುಗಳ ವಿವಿರ:
1.ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೆಆರ್ ಎಸ್ ಬೆಂಗಳೂರು(12657)

  1. ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೆಆರ್ ಎಸ್ ಬೆಂಗಳೂರು(12607)
  2. ಕೆಎಸ್ ಆರ್ ಬೆಂಗಳೂರು- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್(12608)
  3. ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಮೈಸೂರು(12609)
  4. ಮೈಸೂರು- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಬೆಂಗಳೂರು(12610)
  5. ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೆಎಸ್ ಆರ್ ಬೆಂಗಳೂರು(12027)
  6. ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೆಎಸ್ ಆರ್ ಬೆಂಗಳೂರು(12028)
  7. ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು(12077)
  8. ಚಾಮರಾಜನಗರ-ಮೈಸೂರು(06275)
  9. ಮೈಸೂರು- ಕೆಎಸ್ ಆರ್ ಬೆಂಗಳೂರು ಮಾಲ್ಗುಡಿ ಎಕ್ಸ್ ಪ್ರೆಸ್(20623)
  10. ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಬೆಂಗಳುರು ಎಕ್ಸ್ ಪ್ರೆಸ್( 2062)

More articles

Latest article