ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ವತಃ ಡಿಸಿಎಂ ಡಿ ಕೆ ಶಿವಕುಮಾರ್ ಅಖಾಡಕ್ಕೆ!

Most read

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಹೋದರ ಡಿಕೆ ಸುರೇಶ ಸೋಲನ್ನು ಅನುಭವಿಸಿರುವ ಹಿನ್ನೆಲೆಯಲ್ಲಿ ತಮ್ಮ ಸಹೋದರನಿಗಾಗಿ ಕನಕಪುರ ಕ್ಷೇತ್ರ ತ್ಯಾಗ ಮಾಡಿ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಣಕ್ಕೆ ಇಳಿಯಲು ಚಿಂತನೆ ನಡೆಸಿದ್ದಾರೆ. ಇದಕ್ಕೆ ಪುಷ್ಟಿ ಕೊಡುವಂತಾ ಹೇಳಿಕೆಯನ್ನು ಇಂದು ಡಿಕೆ ಶಿವಕುಮಾರ್‌ ಅವರೇ ಆಡಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್‌ ಅವರು,   ಚನ್ನಪಟ್ಟಣ ನನಗೆ ರಾಜಕೀಯ ಜನ್ಮಕೊಟ್ಟ ಕ್ಷೇತ್ರ. ಜನರು ಏನು ಹೇಳ್ತಾರೆ ಅದರಂತೆ ನಡೆಯುತ್ತೇನೆ. ಚನ್ನಪಟ್ಟಣ ಕ್ಷೇತ್ರ ನನ್ನ ಹೃದಯ ವಿದ್ದಂತೆ. ನಾನು ಚನ್ನಪಟ್ಟಣ  ಕ್ಷೇತ್ರವನ್ನು ಪ್ರೀತಿಸ್ತೇನೆ. ಕಷ್ಟಕಾಲದಲ್ಲಿ ಚನ್ನಪಟ್ಟಣ ಜನ ಕೈಹಿಡಿದಿದ್ದಾರೆ. ಕನಕಪುರದಂತೆ ಚನ್ನಪಟ್ಟಣ ಅಭಿವೃದ್ದಿ ಮಾಡ್ತೇನೆ ಎಂದು ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಹೀಗಾಗಿ ಈಗ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಇನ್ನೂ ದಿನಾಂಕ ನಿಗದಿಯಲ್ಲಿ ಅದಕ್ಕೂ ಮುನ್ನವೇ ಅವರು ಚುನಾವಣೆಗೆ ತಯಾರಿಯನ್ನು ನಡೆಸಿದ್ದಾರೆ. ಇನ್ನೊಂದೆಡೆಗೆ ಸ್ಥಳೀಯವಾಗಿಯೂ ಕಾರ್ಯಕರ್ತರು ಡಿಕೆಶಿವಕುಮಾರ್ ಅವರೇ ಸ್ಪರ್ಧೆ ಮಾಡಬೇಕೆಂಬ ಒತ್ತಾಯಿಸಿದ್ದಾರೆ. 

 ಚನ್ನಪಟ್ಟಣದಿಂದ ಗೆದ್ದರೆ ಸಿಎಂ ಆಗುತ್ತಾರೆ ಎನ್ನುವ ನಂಬಿಕೆ ಇರುವುದರಿಂದ ಈಗ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವ ಉತ್ಸುಕತೆ ತೋರಿದ್ದಾರೆ ಎನ್ನಲಾಗುತ್ತಿದೆ.

More articles

Latest article