ಚನ್ನಪಟ್ಟಣ ಟಿಕೆಟ್, ಎರಡು ಪಕ್ಷದ ಮುಖಂಡರ ನೇತೃತ್ವದಲ್ಲಿ ಸಮನ್ವಯ ಸಭೆ

Most read

ಪಕ್ಷ ಸಂಘಟನೆಯ ದೂರದೃಷ್ಠಿಯಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇವೆ.ರಾಜ್ಯದ ಮೂರು ಉಪಚುನಾವಣೆಯ ದಿನಾಂಕ ಘೋಷಣೆ ಆಗಿದೆ. ಆ ಹಿನ್ನಲೆಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರು ಹೊಂದಾಣಿಕೆ ಮೂಲಕ‌ ಕೈಜೋಡಿಸಬೇಕು‌ ಅನ್ನೋದು ಉದ್ದೇಶ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು. ಈಗಾಗಲೇ ಏಳು ಜಿಲ್ಲೆಗಳ ಪ್ರವಾಸ ಮಾಡಿದ್ದೇವೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಆರೋಗ್ಯಕರ ವಾತಾವರಣ ಸೃಷ್ಠಿಯಾಗಿದೆ.ಈ ಬಾರಿಯೂ ಕೂಡ ಉಪಚುನಾವಣೆಯಲ್ಲಿ ಹೊಂದಾಣಿಕೆಯಿಂದ ಚುನಾವಣೆ ನಡೆಸಬೇಕು‌ ಅನ್ನೋ ವೇದಿಕೆ ಕಲ್ಪಿಸುತ್ತಿದ್ದೇವೆ ಎಂದರು.

ಸಿ.ಪಿ.ಯೋಗೀಶ್ವರಗೆ ಚನ್ನಪಟ್ಟಣ ಟಿಕೆಟ್ ವಿಚಾರಕ್ಕೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದ ಹಿತದೃಷ್ಠಿಯಿಂದ ಪಕ್ಷದ ವರಿಷ್ಠರು ದೇವೇಗೌಡರು ನಿರ್ಧಾರ ತೆಗೆದುಕೊಂಡಿದ್ದರು.62 ವರ್ಷದ ದೀರ್ಘಕಾಲದ ರಾಜಕಾರಣದಲ್ಲಿ ಮೊದಲನೇ ಭಾರಿ ದೇವೇಗೌಡರು ಬಿಜೆಪಿ ಪಕ್ಷದ ಜೊತೆಗೂಡಿ ರಾಜ್ಯದ ಹಿತಾಸಕ್ತಿ ದೃಷ್ಟಿಯಿಂದ ತಗೊಂಡ ತೀರ್ಮಾನ ಅದು ಫಲಿತಾಂಶದ ಮೂಲಕ‌ ರಾಜ್ಯದ ಜನ ನಮಗೆ ಸಹಿ ಹಾಕಿದ್ದಾರೆ ನಮ್ಮ ಜೊತೆಯಲ್ಲಿ ನಿಂತಿದ್ದಾರೆ ಎಂದರು.

ಇಂದು ಸಂಜೆ ಸಮನ್ವಯ ಸಭೆ

ಈ ಬಾರಿಯೂ ಕೂಡ NDA ಅಭ್ಯರ್ಥಿ ಚನ್ನಪಟ್ಟಣದಲ್ಲಿ ಯಾರೇ ಕಣಕ್ಕಿಳಿದರು, ಕೇಂದ್ರ ಬಿಜೆಪಿ ವರಿಷ್ಠರು ಈಗಾಗಲೇ ವರದಿ ಪಡೆದಿದ್ದಾರೆ. ಇಂದು ಸಂಜೆ ನಮ್ಮ ನಾಯಕರಾದ ಕುಮಾರಣ್ಣ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿಗಳು ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ಅವರು ಅನೇಕ ರಾಜ್ಯ ಮಟ್ಟದ ಹಿರಿಯರ ನೇತೃತ್ವದಲ್ಲಿ ಸಮನ್ವಯ ಸಭೆ ನಡೆಯಲಿದೆ. ಆ ಸಭೆಯಲ್ಲಿ‌ ಉಪಚುನಾವಣೆಯ ಬಗ್ಗೆ ಸೂಕ್ತ ತೀರ್ಮಾನಗಳಾಗುತ್ತವೆ ಎಂದು ತಿಳಿಸಿದರು.

NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ ಅವರು, ಇಲ್ಲಿ ಅಂತಿಮವಾಗಿ ನಿಖಿಲ್ ಕುಮಾರಸ್ವಾಮಿ, ಯೋಗೇಶ್ವರ್ ಅವರು ಅಂತ ಯಾವುದೇ ತೀರ್ಮಾನ ಆಗಬೇಕಾದ್ರು ಕೂಡ ಎರಡು ಪಕ್ಷದ ಮುಖಂಡರುಗಳ ಸಮ್ಮುಖದಲ್ಲಿ ತೀರ್ಮಾನ ಆಗುತ್ತದೆ ಎಂದು ಹೇಳಿದರು. ಇನ್ನು ನಾನು ಅಧಿಕಾರದ ಹಪಾಹಪಿಗಾಗಿ ಕೆಲಸ ಮಾಡುತ್ತಿಲ್ಲ. ನಾನು ಪಕ್ಷದ ಒಬ್ಬ‌ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದೇನೆ ಎಂದರು.

More articles

Latest article