ಜನಗಣತಿಯೊಂದಿಗೆ ಜಾತಿಗಣತಿ ನಡೆಸಲು ನಿರ್ಧರಿಸಿದ ಕೇಂದ್ರ ಸರ್ಕಾರ

Most read

ನವದೆಹಲಿ: ಕೇಂದ್ರ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ತಕ್ಷಣದಲ್ಲಿ ಜನಗಣತಿಯ ಜೊತೆ ಜಾತಿಗಣತಿಯನ್ನು ನಡೆಸಲಾಗುವುದು ಎಂಬ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದರು.

ಕೇಂದ್ರ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ಬುಧವಾರ ಈ ಜಾತಿ ಸಮೀಕ್ಷೆಯನ್ನು ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿವೆ ಎಂಬ ಆರೋಪವಿದ್ದ ಕೇಂದ್ರ ಸರ್ಕಾರ ಶೀಘ್ರವಾಗಿ ಜನಗಣತಿಯ ಭಾಗವಾಗಿ ಜಾತಿಗಣತಿ ನಡೆಸುವ ನಿರ್ಧಾರ ತೆಗೆದುಕೊಂಡಿದೆ ಎಂದರು.

ಮುಂದುವರಿದು “ಜಾತಿ ಜನಗಣತಿಯನ್ನು ಕೆಲವು ರಾಜ್ಯಗಳು ಜಾತಿಗಳನ್ನು ಎಣಿಸಲು ಸಮೀಕ್ಷೆಗಳನ್ನು ನಡೆಸಿವೆ. ಕೆಲವು ರಾಜ್ಯಗಳು ಮಾಡಿದ್ದರೆ, ಇನ್ನೂ ಕೆಲವು ರಾಜ್ಯಗಳಲ್ಲಿ ಅಂತಹ ಸಮೀಕ್ಷೆಗಳನ್ನು ಪಾರದರ್ಶಕವಲ್ಲದ ರೀತಿಯಲ್ಲಿ ರಾಜಕೀಯ ದೃಷ್ಟಿಕೋನದಿಂದ ಮಾತ್ರ ನಡೆಸಿವೆ” ಎಂದು ಹೇಳಿದ್ದಾರೆ.

“ಜಾತಿ ಜನಗಣತಿಯನ್ನು ಕೆಲವು ರಾಜ್ಯಗಳು ಜಾತಿಗಳನ್ನು ಎಣಿಸಲು ಸಮೀಕ್ಷೆಗಳನ್ನು ನಡೆಸಿವೆ. ಕೆಲವು ರಾಜ್ಯಗಳು ಮಾಡಿದ್ದರೆ, ಇನ್ನೂ ಕೆಲವು ರಾಜ್ಯಗಳಲ್ಲಿ ಅಂತಹ ಸಮೀಕ್ಷೆಗಳನ್ನು ಪಾರದರ್ಶಕವಲ್ಲದ ರೀತಿಯಲ್ಲಿ ರಾಜಕೀಯ ದೃಷ್ಟಿಕೋನದಿಂದ ಮಾತ್ರ ನಡೆಸಿವೆ” ಎಂದು ಹೇಳಿದ್ದಾರೆ.

“ಜಾತಿ ಗಣತಿಯಂತಹ ಸಮೀಕ್ಷೆಗಳು ಸಮಾಜದಲ್ಲಿ ಅನುಮಾನಗಳನ್ನು ಸೃಷ್ಟಿಸಲಿವೆ. ನಮ್ಮ ಸಾಮಾಜಿಕ ರಚನೆಯಲ್ಲಿ ರಾಜಕೀಯದ ತೊಂದರೆಗಳು ಅಗದಂತೆ ನೋಡಿಕೊಳ್ಳಲು ಸಮೀಕ್ಷೆಗಳ ಬದಲಿಗೆ ಜಾತಿ ಎಣಿಕೆಯನ್ನು ಜನಗಣತಿಯಲ್ಲಿ ಸೇರಿಸಲಾಗುವುದು” ಎಂದರು.

ಕಾಂಗ್ರೆಸ್ ಸರ್ಕಾರಗಳು ಯಾವಾಗಲೂ ಜಾತಿ ಜನಗಣತಿಯನ್ನು ವಿರೋಧಿಸುತ್ತಲೇ ಬಂದಿವೆ. 2010ರಲ್ಲಿ ದಿವಂಗತ ಡಾ. ಮನಮೋಹನ್ ಸಿಂಗ್ ಅವರು ಜಾತಿ ಜನಗಣತಿಯ ವಿಷಯವನ್ನು ಸಚಿವ ಸಂಪುಟದಲ್ಲಿ ಪರಿಗಣಿಸಬೇಕೆಂದಿದ್ದರು. ಈ ವಿಷಯವನ್ನು ಪರಿಗಣಿಸಲು ಸಚಿವರ ಗುಂಪನ್ನು ರಚಿಸಲಾಗಿತ್ತು. ಹೆಚ್ಚಿನ ರಾಜಕೀಯ ಪಕ್ಷಗಳು ಜಾತಿ ಜನಗಣತಿಯನ್ನು ಶಿಫಾರಸು ಮಾಡಿವೆ. ಇದರ ಹೊರತಾಗಿಯೂ, ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆ ಅಥವಾ ಜಾತಿ ಜನಗಣತಿಯನ್ನು ನಡೆಸಲು ನಿರ್ಧರಿಸಿದೆ” ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

2024ರ ಲೋಕಸಭಾ ಚುನಾವಣೆಗೆ ಮುನ್ನ ಇಂಡಿಯಾ ಒಕ್ಕೂಟದ ಪ್ರಮುಖ ಯೋಜನೆಗಳಲ್ಲಿ ಜಾತಿ ಜನಗಣತಿಯೂ ಒಂದಾಗಿತ್ತು. 2022ರಲ್ಲಿ ಆಗ ಇಂಡಿಯಾ ಮೈತ್ರಿ ಸರ್ಕಾರದ ಅಡಿಯಲ್ಲಿದ್ದ ಬಿಹಾರ, ಸ್ವತಂತ್ರ ಭಾರತದಲ್ಲಿ ಎಲ್ಲಾ ಜಾತಿಗಳನ್ನು ಯಶಸ್ವಿಯಾಗಿ ಎಣಿಸಿದ ಮೊದಲ ರಾಜ್ಯವಾಯಿತು. ಬಿಹಾರದ ಮಾದರಿಯನ್ನು ಅನುಸರಿಸಿ, ಕಾಂಗ್ರೆಸ್ ಆಡಳಿತದ ಕರ್ನಾಟಕ ಮತ್ತು ತೆಲಂಗಾಣ ಕೂಡ ಜಾತಿ ಜನಗಣತಿಯನ್ನು ಕೈಗೊಂಡಿದೆ.

More articles

Latest article