ಕೊನೆಗೂ ಕದನ ವಿರಾಮ ಒಪ್ಪಿಕೊಂಡ ಇಸ್ರೇಲ್ ಮತ್ತು ಇರಾನ್;  12 ದಿನಗಳ ಯುದ್ಧಕ್ಕೆ ವಿರಾಮ

ಇಸ್ರೇಲ್:  ಇಸ್ರೇಲ್ ಮತ್ತು ಇರಾನ್ ಕೊನೆಗೂ ಕದನ ವಿರಾಮವನ್ನು ಒಪ್ಪಿಕೊಂಡಿವೆ. ಇಂದು ಮುಂಜಾನೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಏರ್ಪಟ್ಟಿದೆ ಎಂದು ಘೋಷಿಸಿದ್ದರು. ಈ ಮೂಲಕ ಕಳೆದ ಕಳೆದ 12 ದಿನಗಳಿಂದ  ನಡೆಯುತ್ತಿದ್ದ ಯುದ್ದಕ್ಕೆ ವಿರಾಮ ಬಿದ್ದಿದೆ.

ಇರಾನ್‌ ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಈ ದಾಳಿಗೆ ಪ್ರತೀಕಾರವಾಗಿ, ಕತಾರ್‌ ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಏರ್ಪಟ್ಟಿದೆ ಎಂದು ಟ್ರಂಪ್ ಘೋಷಿಸಿದ್ದರು. ನಂತರವೂ ಅನೇಕ ಗಂಟೆಗಳ ಕಾಲ ಇರಾನ್‌ ಮತ್ತು ಇಸ್ರೇಲ್‌ ನಡುವೆ ಕದನ ಮುಂದುವರಿದೇ ಇತ್ತು. ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಿದ ಕೊನೆಯ ಕ್ಷಿಪಣಿ ದಾಳಿಯಲ್ಲಿ 4 ಮಂದಿ ಸಾವಿಗೀಡಾಗಿದ್ದರು. ಪ್ರತಿಯಾಗಿ ಇಸ್ರೇಲ್ ಇಂದು ಬೆಳಗಿನ ಜಾವ ಇರಾನ್ ಮೇಲೆ ದಾಳಿ ನಡೆಸಿತ್ತು. ಇದೀಗ ಕೆಲ ಹೊತ್ತಿನ ಮುಂಚೆ ಉಭಯ ರಾಷ್ಟ್ರಗಳು ಕದನ ವಿರಾಮವನ್ನು ಒಪ್ಪಿಕೊಂಡಿವೆ.

ಟ್ರಂಪ್ ಅವರ ಸಹಕಾರದಿಂದ ಇಸ್ರೇಲ್ ಇರಾನ್‌ನೊಂದಿಗೆ ದ್ವಿಪಕ್ಷೀಯ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಈ ಮೊದಲು ಕದನ ವಿರಾಮ ಜಾರಿಯಲ್ಲಿದೆ, ದಯಮಾಡಿ ಉಲ್ಲಂಘಿಸಬೇಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರುಥ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದರು.

ಇಂದು ಮುಂಜಾನೆ ಭಾರತೀಯ  ಕಾಲಮಾನ 4 ಗಂಟೆಗೆ ಕದನ ವಿರಾಮ ಪ್ರಕ್ರಿಯೆ ಆರಂಭವಾಗಿದೆ. ಇರಾನ್ ಎಲ್ಲಾ ಕಾರ್ಯಾಚರಣೆಗಳನ್ನು ಮೊದಲು ಸ್ಥಗಿತಗೊಳಿಸಲಿದೆ. 12 ಗಂಟೆಗಳ ನಂತರ ಇಸ್ರೇಲ್ ಕೂಡ ಇದೇ ಕ್ರಮ ಕೈಗೊಳ್ಳಲಿದೆ ಎಂದು ಡೊನಾಲ್ಡ್ ಟ್ರಂಪ್ ಬರೆದುಕೊಂಡಿದ್ದರು.

ಈ ಘೋಷಣೆ ಬಳಿಕವೂ ಇರಾನ್‌ ಮತ್ತು ಇಸ್ರೇಲ್ ಪರಸ್ಪರ ದಾಳಿಯನ್ನು ನಿಲ್ಲಿಸಿರಲಿಲ್ಲ. ಇಸ್ರೇಲ್‌ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ಖಚಿತ ಪಡಿಸಿತ್ತು. ಕ್ಷಿಪಣಿ ದಾಳಿಯಿಂದಾಗಿ ಕೆಲವು ಕಟ್ಟಡಗಳಿಗೆ ಅಪಾರ ಹಾನಿಯುಂಟಾಗಿದೆ ಎಂದು ಇಸ್ರೇಲ್‌ ತಿಳಿಸಿತ್ತು. ಈ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಕೂಡ ದಾಳಿ ನಡೆಸಿತ್ತು.

More articles

Latest article

Most read