ಸಿಬಿಎಸ್‌ಇ ‘ತ್ರಿಭಾಷಾ ಸೂತ್ರ’ ಹಿಂದಿ ಹೇರಿಕೆಯ ರಹಸ್ಯ ತಂತ್ರ: ಕೇಂದ್ರದ ವಿರುದ್ಧ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕಿಡಿ

ಚೆನ್ನೈ: ಕೇಂದ್ರ ಸರ್ಕಾರವು ಸಿಬಿಎಇ ಶಾಲೆಗಳಲ್ಲಿ ತರುತ್ತಿರುವ ಹೊಸ ಪಠ್ಯಕ್ರಮವು ಕೇವಲ ಶ್ಯಕ್ಷಣಿಕ ಸುಧಾರಣೆ ಅಲ್ಲ. ಬದಲಿಗೆ ಹಿಂದಿ ಮಾತನಾಡದ ರಾಜ್ಯಗಳ ಮೇಲೆ ಆ ಭಾಷೆಯನ್ನು ಬಲವಂತವಾಗಿ ಹೇರುವ ಒಂದು “ರಹಸ್ಯ ಕಾರ್ಯವಿಧಾನ” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗಂಭೀರವಾಗಿ ಆರೋಪಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ-2020ರ (NEP 2020) ಭಾಗವಾಗಿ ಅನಾವರಣಗೊಂಡಿರುವ ಈ ಹೊಸ ನಿಯಮಗಳು ಭಾರತದ ಭಾಷಾ ವೈವಿಧ್ಯತೆಗೆ ಮಾರಕವಾಗಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ‘ಭಾರತೀಯ ಭಾಷೆಗಳನ್ನು ಉತ್ತೇಜಿಸುವ’ ನೆಪದಲ್ಲಿ ಕೇಂದ್ರೀಕೃತ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಮುಂದಿಡುತ್ತಿದೆ. ಇದು ದೇಶದ ಶ್ರೀಮಂತ ಭಾಷಾ ಪರಂಪರೆಯನ್ನು ವ್ಯವಸ್ಥಿತವಾಗಿ ಅಂಚಿನಲ್ಲಿಟ್ಟು, ಹಿಂದಿಗೆ ಮಾತ್ರ ಅನಗತ್ಯ ಆದ್ಯತೆ ನೀಡುತ್ತಿದೆ ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.

“ದಕ್ಷಿಣದ ರಾಜ್ಯಗಳ ವಿದ್ಯಾರ್ಥಿಗಳಿಗೆ ಇದು ಕಡ್ಡಾಯವಾಗಿ ಹಿಂದಿ ಕಲಿಯುವ ಹೊರೆಯಾಗಿ ಬದಲಾಗುತ್ತದೆ. ಆದರೆ ಇಲ್ಲಿ ಪರಸ್ಪರ ಸಮಾನತೆ ಎಲ್ಲಿದೆ? ಹಿಂದಿ ಮಾತನಾಡುವ ರಾಜ್ಯಗಳ ವಿದ್ಯಾರ್ಥಿಗಳು ತಮಿಳು, ಕನ್ನಡ, ತೆಲುಗು, ಮಲಯಾಳಂ ಅಥವಾ ಬಂಗಾಳಿಯಂತಹ ಭಾಷೆಗಳನ್ನು ಕಲಿಯುವುದು ಕಡ್ಡಾಯವಾಗಿದೆಯೇ? ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲದಿರುವುದು ಕೇಂದ್ರದ ಏಕಪಕ್ಷೀಯ ಮತ್ತು ತಾರತಮ್ಯದ ಧೋರಣೆಯನ್ನು ಎತ್ತಿ ತೋರಿಸುತ್ತದೆ” ಎಂದು ಅವರು ಗುಡುಗಿದ್ದಾರೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ತಮಿಳನ್ನು ಕಡ್ಡಾಯಗೊಳಿಸಲು ಮತ್ತು ಅಗತ್ಯ ಶಿಕ್ಷಕರನ್ನು ನೇಮಿಸಲು ವಿಫಲವಾಗಿರುವ ಕೇಂದ್ರ ಸರ್ಕಾರ, ಈಗ ರಾಜ್ಯಗಳಿಗೆ ಭಾಷಾ ಪ್ರೇಮದ ಬಗ್ಗೆ ಉಪನ್ಯಾಸ ನೀಡುತ್ತಿರುವುದು ಬೂಟಾಟಿಕೆಯ ಪರಮಾವಧಿ. ಇಂತಹ ಬೃಹತ್ ಬದಲಾವಣೆಗೆ ಅಗತ್ಯವಿರುವ ಅರ್ಹ ಶಿಕ್ಷಕರು ಎಲ್ಲಿದ್ದಾರೆ ಮತ್ತು ಹಣಕಾಸಿನ ನೆರವು ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಹಿಂದಿ ಭಾಷಿಕ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಸವಲತ್ತು ನೀಡುವುದರಿಂದ ಉನ್ನತ ಶಿಕ್ಷಣ ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿ ಇತರ ಭಾಷಿಕರಿಗೆ ಅನ್ಯಾಯವಾಗುತ್ತದೆ. ಇದು ಪ್ರಾದೇಶಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸಿ, ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ಧಕ್ಕೆ ತರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

“ಜಗತ್ತು ಕೃತಕ ಬುದ್ಧಿಮತ್ತೆ (AI), ಅನಿಮೇಷನ್ (AVGC) ಮತ್ತು ವೈಜ್ಞಾನಿಕ ಮನೋಭಾವದತ್ತ ಮುನ್ನುಗ್ಗುತ್ತಿದೆ. ನಮ್ಮ ಮಕ್ಕಳಿಗೆ ಇಂತಹ ಭವಿಷ್ಯದ ಕೌಶಲ್ಯಗಳನ್ನು ಕಲಿಸುವ ಬದಲು, ಹಳೆಯ ಭಾಷಾ ವಿವಾದಗಳ ಹೊರೆ ಹೊರಿಸುವುದು ಅವರ ಪ್ರಗತಿಯನ್ನು ಹಳಿತಪ್ಪಿಸುತ್ತದೆ” ಎಂದು ಸ್ಟಾಲಿನ್ ಹೇಳಿದ್ದಾರೆ.

“ಭಾರತದ ಶಕ್ತಿಯು ಅದರ ವೈವಿಧ್ಯತೆಯಲ್ಲಿದೆ ಹೊರತು ಬಲವಂತದ ಏಕರೂಪತೆಯಲ್ಲಲ್ಲ. ಇಂತಹ ನೀತಿಗಳು ನಮ್ಮ ಬಹುತ್ವದ ರಾಷ್ಟ್ರದ ಅಡಿಪಾಯಕ್ಕೆ ಪೆಟ್ಟು ನೀಡುತ್ತವೆ ಮತ್ತು ಇದನ್ನು ನಾವು ಬಲವಾಗಿ ವಿರೋಧಿಸುತ್ತೇವೆ.” ತಮಿಳುನಾಡಿನ ಎಐಎಡಿಎಂಕೆ ಮತ್ತು ಎನ್‌ಡಿಎ ಮಿತ್ರಪಕ್ಷಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಈ ಹಿಂದಿ ಹೇರಿಕೆಯನ್ನು ನೀವು ಬೆಂಬಲಿಸುತ್ತೀರಾ? ಅಥವಾ ನಮ್ಮ ವಿದ್ಯಾರ್ಥಿಗಳ ಹಕ್ಕು ಮತ್ತು ಗುರುತಿಗಾಗಿ ಧ್ವನಿ ಎತ್ತುತ್ತೀರಾ?” ಎಂದು ಸವಾಲು ಹಾಕಿದ್ದಾರೆ.

More articles

Latest article

Most read