ಮಮತಾ ಬ್ಯಾನರ್ಜಿ ಅವರಿಲ್ಲದ INDIA ಮೈತ್ರಿ ಕೂಟವನ್ನು ಊಹಿಸಲು ಸಾಧ್ಯವಿಲ್ಲ: ಜೈರಾಮ್ ರಮೇಶ್

Most read

 

ಮಮತಾ ಬ್ಯಾನರ್ಜಿ ಅವರಿಲ್ಲದ INDIA ಮೈತ್ರಿ ಕೂಟವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ಹೇಳಿದ್ದಾರೆ . 

2024 ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂಬ ಮಮತಾ ಅವರ ಘೋಷಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನೀವು ಅವರ ಸಂಪೂರ್ಣ ಹೇಳಿಕೆಯನ್ನು ಓದಿಲ್ಲ. ಅವರ ಹೇಳಿಕೆಯು, ಬಿಜೆಪಿ ಸೋಲಿಸುತ್ತೇವೆ ಎಂದು ಹೇಳಿದ್ದಾರೆ. ಮತ್ತದಕ್ಕಾಗಿ ಅವರು ಒಂದು ಹೆಜ್ಜೆಯನ್ನು ಕೂಡ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು,  ನಾವು (ಭಾರತ್ ಜೋಡೋ ನ್ಯಾಯ್ ಯಾತ್ರೆ) ಪಶ್ಚಿಮ ಬಂಗಾಳವನ್ನು ಪ್ರವೇಶಿಸುತ್ತಿದ್ದೇವೆ. ನಾವು ದೀರ್ಘ ಪ್ರಯಾಣದಲ್ಲಿದ್ದಾಗ, ರಸ್ತೆಯಲ್ಲಿ ಕೆಲವೊಮ್ಮೆ ಸ್ಪೀಡ್ ಬ್ರೇಕರ್ ಬರುತ್ತದೆ ಅದನ್ನು ಹೇಗೆ ದಾಟಿಕೊಂಡು ಹೋಗುತ್ತೆವ ಎಂಬುದು ಮುಖ್ಯ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, ಮಮತಾ ಬ್ಯಾನರ್ಜಿ ಅವರು INDIA ಮೈತ್ರಿ ಕೂಟದ ಪ್ರಮುಖ ನಾಯಕಿ. ಅವರು ದೇಶದ, ಪಶ್ಚಿಮ ಬಂಗಾಳದ ಎತ್ತರದ ನಾಯಕಿ ಎಂದು ರಾಹುಲ್ ಗಾಂಧಿ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಕುರಿತು ಮಾತುಕತೆಗಳು ನಡೆಯುತ್ತಿದ್ದು, ಲೋಕ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಟಿಎಂಸಿ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ನಾಯಕರಿಂದ ಈ ಹೇಳಿಕೆಗಳು ಕೇಳಿ ಬಂದಿವೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಪಶ್ಚಿಮ ಬಂಗಾಳವನ್ನು ಬರುವ ಬಗ್ಗೆ ತನಗೆ ತಿಳಿಸಲಾಗಿಲ್ಲ ಎಂಬ ಮಮತಾ ಬ್ಯಾನರ್ಜಿ ಅವರ ಆರೋಪದ ಕುರಿತು, ಜೈರಾಮ್ ರಮೇಶ್ ಅವರು ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹಲವು ಭಾಷಣಗಳಲ್ಲಿ ಭಾರತದ ಎಲ್ಲಾ ಪಕ್ಷದ ನಾಯಕರನ್ನು ಯಾತ್ರೆಗೆ ಆಹ್ವಾನಿಸಿದ್ದಾರೆ ಎಂದು ಹೇಳಿದರು.

More articles

Latest article