ನಿಮ್ಮ ಮಕ್ಕಳಿಗೆ ಕೇಸರಿ ಶಾಲು ಹೊದಿಸಿ ಗೋ ರಕ್ಷಣೆಗೆ ಕಳಿಸಿ: ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಸವಾಲು

Most read

ಬೆಂಗಳೂರು: ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಕೇಸರಿ ಶಾಲು ಹೊದಿಸಿ ಗೋ ರಕ್ಷಣೆಗೆ, ಧರ್ಮ ರಕ್ಷಣೆಗೆ ಕಳಿಸುತ್ತಾರೆಯೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ಬಿಜೆಪಿ ಮುಖಂಡರ ಗೋಸುಂಬೆತನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ತಲೆ ತೆಗೆಯಿರಿ, ತೊಡೆ ಮುರಿಯಿರಿ ಎನ್ನುತ್ತಿರುವ ಬಿಜೆಪಿ ನಾಯಕರು ತಮ್ಮ ಮಕ್ಕಳ ಕೈಗೆ ದೊಣ್ಣೆ, ಲಾಂಗು ಮಚ್ಚುಗಳನ್ನು ಕೊಟ್ಟು ಬೀದಿಗೆ ಬಿಡುತ್ತಾರೆಯೇ?

ಬಡವರ ಮನೆ ಮಕ್ಕಳನ್ನು ಬಾವಿಗೆ ತಳ್ಳಿ ರಾಜಕೀಯದ ಆಳ ನೋಡುವ ಬದಲು ತಮ್ಮ ಮಕ್ಕಳ ಹೆಗಲಿಗೆ ಕೇಸರಿ ಶಾಲು, ಕೈಗೆ ದೊಣ್ಣೆ ಮಚ್ಚು ಕೊಟ್ಟು ಧರ್ಮ ರಕ್ಷಣೆಯ ಕೈಂಕರ್ಯಕ್ಕೆ ಬಿಡಬೇಕು.

ಬಿಜೆಪಿ ನಾಯಕರು ಧರ್ಮರಕ್ಷಣೆಯ ಬೋಧನೆ, ಪ್ರಚೋದನೆಗಳನ್ನು ತಮ್ಮ ಮನೆಯಿಂದಲೇ ಶುರು ಮಾಡಲಿ, ತಮ್ಮ ಮಕ್ಕಳಿಗೆ ತ್ರಿಶೂಲ ದೀಕ್ಷೆ ಕೊಡಲಿ, ಕೈಗೆ ದೊಣ್ಣೆ ಕೊಡಲಿ.

ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬೇಕು ಎಂಬ RSS ಫರ್ಮಾನನ್ನು ಯಾವ ಬಿಜೆಪಿಗರು ಪಾಲನೆ ಮಾಡಲು ಮುಂದಾಗಿದ್ದಾರೆ?

ಮಕ್ಕಳು ಹೆರುವುದರ ಹೊರೆಯೂ ಬಡವರಿಗೆ ಮಾತ್ರವೇ? ಬಿಜೆಪಿಗರಿಗೂ ಅನ್ವಯಿಸುತ್ತದೆಯೇ?

ಅಮಾಯಕ ಹಿಂದೂ ಕಾರ್ಯಕರ್ತರು ಬಿಜೆಪಿ ನಾಯಕರೆದುರು ”ತಲೆ ತೆಗೆಯುವ ಕೆಲಸಕ್ಕೆ ನಿಮ್ಮ ಮಕ್ಕಳು ಮುಂದಿರಲಿ, ನಾವು ಅವರ ಹಿಂದೆ ಇರುತ್ತೇವೆ ಎಂಬ ಒಂದೇ ಒಂದು ಬೇಡಿಕೆ ಮುಂದಿಡಲಿ.

ಬಿಜೆಪಿ ನಾಯಕರ ಅಸಲಿತ ಬಂಡವಾಳವನ್ನು ಕಾಣಬಹುದು ಎಂದು ವ್ಯಂಗ್ಯವಾಡಿದ್ದಾರೆ.

More articles

Latest article