ಒಂದು ಪರಿಷತ್‌ ಸೇರಿ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ: 4 ಕ್ಷೇತ್ರಕ್ಕೂ ಉಸ್ತುವಾರಿ ಸಮಿತಿ ರಚಿಸಿದ ಕಾಂಗ್ರೆಸ್‌

Most read

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕರು ಸಂಸದರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಈ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗಾಗಿ ಹಾಗೂ  ಅಭ್ಯರ್ಥಿಯು ಜಯಶಾಲಿಯಾಗಲು ಅಗತ್ಯ ಚುನಾವಣಾ ತಂತ್ರಗಳನ್ನು ರೂಪಿಸುವ ಸಲುವಾಗಿ “ಮೂರು ವಿಧಾನಸಭಾ ಕ್ಷೇತ್ರಗಳಿಗೂ ಉಸ್ತುವಾರಿ ಸಮಿತಿ”ಯನ್ನು ಕಾಂಗ್ರೆಸ್ ರಚಿಸಿದೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಸದಸ್ಯರು ಸಂಸದರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಇದಕ್ಕೂ ಸಹ ಉಸ್ತುವಾರಿ ಸಮಿತಿ”ಯನ್ನು ಕಾಂಗ್ರೆಸ್ ರಚಿಸಿದೆ.

“ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಉಸ್ತುವಾರಿ ಸಮಿತಿ”

ಶ್ರೀ ಅಭಿಶೇಖ್ ದತ್, ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ,

ಶ್ರೀ ಜಿ.ಸಿ. ಚಂದ್ರಶೇಖರ್, MP, ಉಸ್ತುವಾರಿ ಕಾರ್ಯಾಧ್ಯಕ್ಷರು

ವೀಕ್ಷಕರ ಹೆಸರು

  • ಚಲುವರಾಯಸ್ವಾಮಿ, ಸಚಿವರು – ಸಮಿತಿ ಅಧ್ಯಕ್ಷರು
  • ರಾಮಲಿಂಗಾ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರು
  • ಡಿ.ಕೆ. ಸುರೇಶ್, Ex-MP, 2024ರ ಲೋಕಸಭಾ ಅಭ್ಯರ್ಥಿ
  • ಬಾಲಕೃಷ್ಣ, ಶಾಸಕರು, ಮಾಜಿ ಸಚಿವರು
  • ನರೇಂದ್ರಸ್ವಾಮಿ, ಶಾಸಕರು, ಮಾಜಿ ಸಚಿವರು
  • ಇಟ್ಬಾಲ್ ಹುಸೇನ್, ಶಾಸಕರು
  • ಪುಟ್ಟಣ್ಣ, ವಿಧಾನಪರಿಷತ್‌ ಸದಸ್ಯರು
  • ಎಸ್. ರವಿ, ವಿಧಾನಪರಿಷತ್ ಸದಸ್ಯರು
  • ಗಂಗಾಧರ, ಡಿಸಿಸಿ ಅಧ್ಯಕ್ಷರು, ರಾಮನಗರ

“ಸಂಡೂರು ವಿಧಾನಸಭೆ ಉಪಚುನಾವಣೆ ಉಸ್ತುವಾರಿ ಸಮಿತಿ”

ಮಯೂರ ಜಯಕುಮಾ‌ರ್, ಉಸ್ತುವಾರಿ ಕಾರ್ಯದರ್ಶಿ, ಎಐಸಿಸಿ

ವಸಂತಕುಮಾರ್, ಉಸ್ತುವಾರಿ ಕಾರ್ಯಾಧ್ಯಕ್ಷರು, ಕೆಪಿಸಿಸಿ

ವೀಕ್ಷಕರ ಹೆಸರು

  • ಜಮೀರ್ ಅಹಮದ್‌ ಖಾನ್‌, ಸಚಿವರು, ಸಮಿತಿ ಅಧ್ಯಕ್ಷರು
  • ನಾಸೀ‌ರ್ ಹುಸೇನ್, M.P., ಹಾಗೂ ಸಿ.ಡಬ್ಲ್ಯು.ಸಿ. ಸದಸ್ಯರು
  • ಇ. ತುಕಾರಾಂ, ಲೋಕಸಭಾ ಸದಸ್ಯರು
  • ಬಿ. ನಾಗೇಂದ್ರ, ಶಾಸಕರು, ಮಾಜಿ ಸಚಿವರು
  • ಡಾ: ಎನ್.ಟಿ. ಶ್ರೀನಿವಾಸ್, ಶಾಸಕರು
  • ಪಿ.ಟಿ. ಪರಮೇಶ್ವರ್ ನಾಯಕ್, ಮಾಜಿ ಸಚಿವರು
  • ಶಿವಯೋಗಿ, ಡಿಸಿಸಿ ಅಧ್ಯಕ್ಷರು, ಬಳ್ಳಾರಿ ಗ್ರಾಮಾಂತರ ಡಿಸಿಸಿ

“ಶಿಗ್ಗಾಂವ ವಿಧಾನಸಭೆ ಉಪಚುನಾವಣೆ ಉಸ್ತುವಾರಿ ಸಮಿತಿ”

ಶ್ರೀ ಮಯೂರ ಜಯಕುಮಾ‌ರ್, ಉಸ್ತುವಾರಿ ಕಾರ್ಯದರ್ಶಿಗಳು, ಎಐಸಿಸಿ

ಶ್ರೀ ವಿನಯ ಕುಲಕರ್ಣಿ, MLA :- ಉಸ್ತುವಾರಿ ಕಾರ್ಯಾಧ್ಯಕ್ಷರು, ಕೆಪಿಸಿಸಿ

ವೀಕ್ಷಕರ ಹೆಸರು

  • ಈಶ್ವರ ಖಂಡ್ರೆ, ಸಚಿವರು – ಸಮಿತಿ ಅಧ್ಯಕ್ಷರು
  • ಶಿವಾನಂದ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವರು
  • ಸಂತೋಶ್ ಲಾಡ್, ಸಚಿವರು
  • ಸಲೀಂ ಅಹಮದ್, ಮುಖ್ಯ ಸಚೇತಕರು, ವಿಧಾನಪರಿಷತ್‌
  • ಸಂಜೀವ್ ಕುಮಾರ್ ನೀರಲಗಿ, ಅಧ್ಯಕ್ಷರು, ಹಾವೇರಿ ಡಿಸಿಸಿ
  • ಆನಂದ ಗಡ್ಡದೇವರಮಠ, 2024ರ ಲೋಕಸಭಾ ಸದಸ್ಯರು

“ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆ ಉಪಚುನಾವಣೆ ಉಸ್ತುವಾರಿ ಸಮಿತಿ”

ರೋಜಿ ಜಾನ್, ಉಸ್ತುವಾರಿ ಕಾರ್ಯದರ್ಶಿ, ಎಐಐಸಿ

ಮಂಜುನಾಥ್ ಭಂಡಾರಿ, MLC ಉಸ್ತುವಾರಿ ಕಾರ್ಯಾಧ್ಯಕ್ಷರು, ಕೆಪಿಸಿಸಿ

ವೀಕ್ಷಕರ ಹೆಸರು

  • ದಿನೇಶ್ ಗುಂಡೂರಾವ್, ಉಸ್ತುವಾರಿ ಸಚಿವರು, ಸಮಿತಿ ಅಧ್ಯಕ್ಷರು
  • ವಿನಯಕುಮಾರ್ ಸೊರಕೆ, ಅಧ್ಯಕ್ಷರು, ಪ್ರಚಾರ ಸಮಿತಿ, ಕೆಪಿಸಿಸಿ
  • ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್, ಉಸ್ತುವಾರಿ ಸಚಿವರು, ಉಡುಪಿ ಜಿಲ್ಲೆ
  • ರಮನಾಥ ರೈ, ಮಾಜಿ ಸಚಿವರು, ಉಪಾಧ್ಯಕ್ಷರು, ಕೆಪಿಸಿಸಿ
  • ಅಶೋಕ್ ರೈ, ಶಾಸಕರು
  • ಡಾ: ಜಯಪ್ರಕಾಶ್ ಹೆಗ್ಡೆ, Ex-MP, 2024ರ ಉಡುಪಿ ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ
  • ಪದ್ಮರಾಜ್, 2024ರ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ
  • ಹರೀಶ್ ಕುಮಾ‌ರ್, Ex-MLC
  • ಉದಯಶೆಟ್ಟಿ, 2023ರ ವಿಧಾನಸಭೆ ಅಭ್ಯರ್ಥಿ
  • ಕಿಶನ್ ಹೆಗ್ಡೆ

ಮೇಲ್ಕಂಡ ಸಮಿತಿಯು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಯನ್ನು ಶಿಫಾರಸ್ಸು ಮಾಡಲು ಹಾಗೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ ಅಭ್ಯರ್ಥಿಯನ್ನು ಗೆಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸ್ಥಳೀಯ ಶಾಸಕರು, ಹಿರಿಯ ಮುಖಂಡರು ಹಾಗೂ ಇತರರೊಂದಿಗೆ ಸಮಾಲೋಚನೆ ನಡೆಸಿ ತಕ್ಷಣ ಕೆಪಿಸಿಸಿಗೆ ವರದಿಯನ್ನು ಸಲ್ಲಿಸಲು ಕೋರಲಾಗಿದೆ ಎಂದು ತಿಳಿಸಿದೆ.

More articles

Latest article