ನೋಡು ನೋಡುತ್ತಲೇ ಹೊತ್ತಿ ಉರಿದು ಕರಕಲಾದ ಬಿಎಂಟಿಸಿ ಬಸ್‌ : ಪ್ರಯಾಣಿಕರು ಸೇಫ್!

ಬೆಳ್ಳಂಬೆಳಗ್ಗೆಯೇ ನೋಡು ನೋಡುತ್ತಲೇ ಬಿಎಂಟಿಸಿ ಬಸ್​ವೊಂದು ಹೊತ್ತಿ ಉರಿದ ಘಟನೆ ನಡೆದಿದೆ. ನಡು ರಸ್ತೆಯಲ್ಲೇ ಸರ್ಕಾರಿ ಬಸ್​ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಬೆಂಗಳೂರಿನಅನಿಲ್ ಕುಂಬ್ಳೆ ಜಂಕ್ಷನ್ ಹತ್ತಿರ ಈ ಘಟನೆ ನಡೆದಿದೆ.

ಬಸ್​ನಲ್ಲಿ ಜನರಿದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣ ಅವರನ್ನು ಕೆಳಕ್ಕಿಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಬಸ್​ಗೆ ತಗುಲಿದ ಬೆಂಕಿ ನಂದಿಸುವ ಕಾರ್ಯ ಮುಕ್ತಾಯವಾಗಿದ್ದು, ಸಂಪೂರ್ಣ ಬಸ್‌ ಸುಟ್ಟು ಕರಕಲಾಗಿದೆ

ಬಸ್ಸಿನಲ್ಲಿದ್ದ ಚಾಲಕ ಮತ್ತು ಕಂಡಕ್ಟರ್ ಮೊದಲು ಇಂಜಿನ್‌ನಿಂದ ಹೊಗೆ ಹೊರಹೊಮ್ಮುವುದನ್ನು ಕಂಡು ಕಾರ್ಪೊರೇಷನ್‌ಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳಗಳು ಬರುವವರೆಗೆ ಕಂಡಕ್ಟರ್ ಬೆಂಕಿಯನ್ನು ನಿಯಂತ್ರಿಸಲು ಬಸ್‌ನೊಳಗಿನ ಅಗ್ನಿಶಾಮಕವನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.

More articles

Latest article

Most read