ಸಾರಿಗೆ
• ʻಶಕ್ತಿʼ ಯೋಜನೆಯಡಿ ಪ್ರಸಕ್ತ ವರ್ಷ ಯೋಜನೆಗೆ ಈ ಸಾಲಿನಲ್ಲಿ 5,300 ಕೋಟಿ ರೂ. ಅನುದಾನ.
• ಬೆಂಗಳೂರು ಮೆಜೆಸ್ಟಿಕ್ನಲ್ಲಿರುವ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ, ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ನಿರ್ಮಾಣ.
• ಈ ಸಾಲಿನಲ್ಲಿ 42 ಸ್ವಯಂಚಾಲಿತ ಪರೀಕ್ಷಾ ಪಥಗಳ ನಿರ್ಮಾಣ ಪೂರ್ಣ. 2025-26ನೇ ಸಾಲಿನಲ್ಲಿ 3 ಕಡೆಗಳಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಪರೀಕ್ಷಾ ಪಥಗಳ ನಿರ್ಮಾಣ.
• ಐದು ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿನ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಒಟ್ಟು 25 ಕೋಟಿ ರೂ. ವೆಚ್ಚ.
• ರಾಜ್ಯದಲ್ಲಿ ವಾಹನ ಸಂಚಾರ ನಿಯಂತ್ರಣಕ್ಕೆ 50 ಕೋಟಿ ರೂ. ವೆಚ್ಚದಲ್ಲಿ AI ಆಧಾರಿತ ವಿದ್ಯುನ್ಮಾನ ಕ್ಯಾಮರಾ ಅಳವಡಿಕೆ.
• ರಾಜ್ಯದಲ್ಲಿನ ಸಾರಿಗೆ ಸಂಪರ್ಕ ಸುಧಾರಿಸಲು ಹಲವು ಉಪಕ್ರಮಗಳ ಅನುಷ್ಠಾನ.
ಒಟ್ಟಾರೆ 14,750 ಸಾವಿರ ಹೊಸ ವಿದ್ಯುತ್ ಚಾಲಿತ ಬಸ್ಸುಗಳ ಸೇರ್ಪಡೆಗೆ ಕ್ರಮ.
ii) ಹಣಕಾಸು ಸಂಸ್ಥೆಗಳಿಂದ 2 ಸಾವಿರ ಕೋಟಿ ರೂ. ಸಾಲ ಪಡೆಯಲು ನಾಲ್ಕು ಸಾರಿಗೆ ನಿಗಮಗಳಿಗೆ ಸರ್ಕಾರದ ಖಾತರಿ
iii) ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಹೊಸ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣ.
iv) ಮೈಸೂರಿನ ಬನ್ನಿಮಂಟಪದಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ.
ಕಾನೂನು
• ನ್ಯಾಯಾಲಯಗಳ ಕಾರ್ಯಕ್ಷಮತೆ ಸುಧಾರಣೆಗೆ ಎರಡು ಕೋಟಿ ರೂ. ವೆಚ್ಚದಲ್ಲಿ Smart System ಅನುಷ್ಠಾನ.
• ನ್ಯಾಯಾಲಯಗಳಲ್ಲಿರುವ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಡಿಜಿಟಲ್ ಗ್ರಂಥಾಲಯಗಳನ್ನು ಪ್ರಾರಂಭಿಸಲು ಎರಡು ಕೋಟಿ ರೂ. ಹಂಚಿಕೆ.
• ಬಾರ್ ಅಸೋಸಿಯೇಷನ್ ಸದಸ್ಯರಿಗಾಗಿ 50 ಲಕ್ಷ ರೂ. ವೆಚ್ಚದಲ್ಲಿ ಆನ್ಲೈನ್ ಗ್ರಂಥಾಲಯ ಸ್ಥಾಪನೆ.
• ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಲು ವಿಶೇಷ ತ್ವರಿತಗತಿ ನ್ಯಾಯಾಲಯ ಬಾಗಲಕೋಟೆಯಲ್ಲಿ ಸ್ಥಾಪನೆ.
• ಕೊಪ್ಪಳ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ 50 ಕೋಟಿ ರೂ., ಕುಕನೂರು ಹಾಗೂ ಕಾರಟಗಿ ತಾಲ್ಲೂಕಿನಲ್ಲಿ JMFC ನ್ಯಾಯಾಲಯ ಸ್ಥಾಪನೆ.
ತೆರಿಗೆ ಪ್ರಸ್ತಾವನೆ:
ವಾಣಿಜ್ಯ ತೆರಿಗೆ ಇಲಾಖೆ
• ಫೆಬ್ರವರಿ ಮಾಹೆಯ ವೃತ್ತಿ ತೆರಿಗೆ 200 ರೂ. ಗಳಿಂದ 300 ರೂ. ಗಳಿಗೆ ಹೆಚ್ಚಳ.
• 2025-26 ರಲ್ಲಿ 1,20,000 ಕೋಟಿ ರೂ. ತೆರಿಗೆ ಸಂಗ್ರಹ ಗುರಿ
ನೋಂದಣಿ ಮತ್ತು ಮುದ್ರಾಂಕ
• 2025-26 ರಲ್ಲಿ 28,000 ಕೋಟಿ ರೂ. ತೆರಿಗೆ ಸಂಗ್ರಹ ಗುರಿ
ಅಬಕಾರಿ
• 2025-26 ರಲ್ಲಿ 40,000 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ
ಮೋಟಾರು ವಾಹನ
• 2025-26 ನೇ ಸಾಲಿಗೆ 15000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ
ಗಣಿ ಮತ್ತು ಭೂ ವಿಜ್ಞಾನ
• 2025-26 ನೇ ಸಾಲಿಗೆ 9000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ