ಮೋದಿ ನೇತೃತ್ವದ NDA ಸರ್ಕಾರ ಮೂರನೇ ಅವಧಿಯ ಮೊದಲ ಬಜೆಟ್ ಮಂಡನೆಯಾಗಿದೆ. ಬಜೆಟ್ ಅಂದ್ರೆ ಜನಸಾಮಾನ್ಯರಿಗೆ ಯಾವ ಸರುಕು ಸೇವೆಗಳು ತುಟ್ಟಿಯಾಗಲಿವೆ, ಯಾವುವು ಅಗ್ಗವಾಗಲಿವೆ ಅನ್ನೋ ಕುತೂಹಲ ಇದ್ದೇ ಇರುತ್ತದೆ. ಅದರಂತೆಯೇ ಈ ಬಾರಿ ಕೆಲವು ಸರಕು ಸೇವೆಗಳ ಬೆಲೆಯಲ್ಲಿ ಏರಿಕೆಯಾದ್ರೆ. ಮತ್ತೊಂದಿಷ್ಟರಲ್ಲಿ ಇಳಿಕೆಯಾಗಿದೆ.
ಹಣಕಾಸು ವರ್ಷ 2025 ರಲ್ಲಿ ಯಾವುದು ದುಬಾರಿ ಮತ್ತು ಅಗ್ಗವಾಗಲಿದೆ ಎಂಬುದರ ಪಟ್ಟಿ ಇಲ್ಲಿದೆ:
ಯಾವುದು ಅಗ್ಗ?
- ಕ್ಯಾನ್ಸರ್ ಔಷಧಗಳು
- ವೈದ್ಯಕೀಯ ಎಕ್ಸ್-ರೇ ಯಂತ್ರಗಳು
- ಮೊಬೈಲ್ ಫೋನ್‌ಗಳು, ಬಿಡಿ ಬಾಗಗಳು ಮತ್ತು ಚಾರ್ಜರ್‌ಗಳು
- ಸೋಲಾರ್ ಪ್ಯಾನಲ್‌ಗಳ ಬೆಲೆ ಇಳಿಕೆ
- ಮೀನು ಮತ್ತು ಸೀಗಡಿ ಆಹಾರ
- ವಿದೇಶಿ ಬಟ್ಟೆ, ಚರ್ಮೋತ್ಪನ್ನಗಳು, ಟಿವಿ ಅಗ್ಗವಾಗಲಿದೆ
- ಪಾದರಕ್ಷೆಗಳು
- ಜವಳಿ
- ಚಿನ್ನ, ಬೆಳ್ಳಿ, ಪ್ಲಾಟಿನಂ ತಯಾರಿಕೆ ಶುಲ್ಕ ಇಳಿಕೆ
ಯಾವುದು ದುಬಾರಿ?
- ಮರು ಬಳಕೆ ಆಗದ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬೆಲೆ ಏರಿಕೆ
- ವಿವಿಧ ರೀತಿಯ ಬಟ್ಟೆ, ವಸ್ತ್ರಗಳ ಬೆಲೆ ಏರಿಕೆ
- ವಿದ್ಯುತ್ ಉಪಕರಣ
- ಮೊಬೈಲ್ ಟವರ್
- PVC ಫ್ಲೆಕ್ಸ್ ಬ್ಯಾನರ್‌ಗಳು
- ಸ್ಟೇಟ್ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳಿಗೆ ಅವಕಾಶ