Saturday, May 18, 2024

Budget 2024 Live: ಕೇಂದ್ರದ ಸರ್ಕಾರದ ಕೊನೆಯ ಬಜೆಟ್ Update

Most read

ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಎರಡನೇ ಆಡಳಿತಾವಧಿಯ ಕೊನೆಯ ಬಜೆಟ್ ಇಂದು ಮಂಡನೆಯಾಗುತ್ತಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆಯ 6ನೇ ಬಾರಿಗೆ ಇಂದು ಬಜೆಟ್‌ ಮಂಡಿಸುತ್ತಿದ್ದಾರೆ.

ಜೈ ಹಿಂದ್ಸೈನ್ ಆಫ್ ಮಾಡಿದ ನಿರ್ಮಲಾ ಸೀತಾರಾಮನ್

 • ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ತಮ್ಮ 57 ನಿಮಿಷಗಳ ಬಜೆಟ್ ಭಾಷಣವನ್ನು “ಜೈ ಹಿಂದ್” ಎಂದು ಹೇಳುವ ಮೂಲಕ ಮುಕ್ತಾಯಗೊಳಿಸಿದರು. 

ತೆರಿಗೆದಾರರಿಗೆ ಧನ್ಯವಾದಗಳು‘ ; ಸೀತಾರಾಮನ್

 • ಕಳೆದ 10 ವರ್ಷಗಳಲ್ಲಿ ನೇರ ತೆರಿಗೆ ಸಂಗ್ರಹವು ದುಪ್ಪಟ್ಟಾಗಿದೆ. ಈ ಮೂಲಕ ನಾನು ತೆರಿಗೆದಾರರಿಗೆ ಧನ್ಯವಾದ ಹೇಳಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.

2014 ಪೂರ್ವದಸವಾಲುಗಳಕುರಿತು ನಿರ್ಮಲಾ ಸೀತಾರಾಮನ್

 • ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ “ನೀತಿಗಳು ಮತ್ತು ಆಡಳಿತ” “2014 ರ ಹಿಂದಿನ ಯುಗದ ಪ್ರತಿಯೊಂದು ಸವಾಲನ್ನು” ಸಮರ್ಪಕವಾಗಿ ಎದುಕಿಸಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ

 • ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲಾಗುವುದು

ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು

 • ಪ್ರವಾಸೋದ್ಯಮಕ್ಕೆ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯಕ್ಕೆ ಸರ್ಕಾರ ಹಣ ವ್ಯವಸ್ಥೆ ಮಾಡಲಿದೆ. ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ

 • ಎಲ್ಲಾ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳ ವಿಸ್ತರಿಸಣೆ ಮಾಡಲಾಗುತ್ತದೆ.

ಹೊಸ ಮನೆ ಖರೀದಿಗೆ ನೆರವು

 • ಬಾಡಿಗೆ ಮನೆಗಳು, ಕೊಳೆಗೇರಿಗಳಲ್ಲಿ ವಾಸಿಸುವ ಜನರಿಗೆ ಹೊಸ ಮನೆಯನ್ನು ಖರೀದಿಸಲು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ನೆರವು ನೀಡಲಾಗುತ್ತದೆ.

ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ

 • ತೆರಿಗೆ ಕುರಿತು ಯಾವುದೇ ಬದಲಾವಣೆಗಳನ್ನು ಮಾಡಲು ಪ್ರಸ್ತಾಪಿಸುವುದಿಲ್ಲ. ಆಮದು ಸುಂಕಗಳು ಸೇರಿದಂತೆ ನೇರ ಮತ್ತು ಪರೋಕ್ಷ ತೆರಿಗೆ ದರಗಳಿಗೆ ಈಗಿರುವ ತೆರಿಗೆಯೇ ಮುಂದುವರೆಯಲಿದೆ. ಆದಾಯ ತೆರಿಗೆ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಹೈನುಗಾರಿಕೆ ರೈತರಿಗೆ ಹಾಲು ಹೆಚ್ಚಳಕ್ಕೆ ಯೋಜನೆ

 • ಭಾರತ ಪ್ರಪಂಚದಲ್ಲಿ ಹಾಲು ಉತ್ಪಾದನೆಯಲ್ಲಿ ಮಂದಿದೆ. ಹೈನುಗಾರಿಕೆ ರೈತರಿಗೆ ಹಾಲು ಹೆಚ್ಚಳಕ್ಕೆ ಯೋಜನೆ ಮಾಡಲಾಗಿದೆ. ಡೇರಿಗೆ ಮೂಲಭೂತ ಸೌಕರ್ಯಗಳ ಹೆಚ್ಚಳ. ಡೈರಿಗಳಿಗೆ ರಾಷ್ಟ್ರೀಯ ಗೋಕುಲ್ ಮಿಷನ್ ನಡಿ ಹೆಚ್ಚು ಪ್ರೋತ್ಸಾಹ.

ವಂದೇ ಭಾರತ್ ಮಾದರಿಯ ಬೋಗಿಗಳು, ವಿಮಾನ ನಿಲ್ದಾಣಗಳು ದ್ವಿಗುಣ

 • 40,000 ರೈಲು ಬೋಗಿಗಳನ್ನು ವಂದೇ ಭಾರತ್ ಮಾನದಂಡಕ್ಕೆ ಪರಿವರ್ತಿಸಲಾಗುವುದು. ವಿಮಾನ ನಿಲ್ದಾಣಗಳನ್ನು 149ಕ್ಕೆ ಏರಿಸಲಾಗುವುದು. 1,000 ಹೊಸ ವಿಮಾನಗಳಿಗೆ ಈಗಾಗಲೇ ಆರ್ಡರ್ ಮಾಡಿದೆ ಎಂದು ಹೇಳಿದದ್ದಾರೆ.

300 ಯೂನಿಟ್ ಉಚಿತ ವಿದ್ಯುತ್

 • ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು.

ಮೀನುಗಾರಿಕೆ ಯೋಜನೆಯನ್ನು ಉತ್ತೇಜನ

 • ಮೀನುಗಾರಿಕೆ ಯೋಜನೆಯನ್ನು ಉತ್ತೇಜಿಸಲು ಸರ್ಕಾರ ಕೆಲಸ ಮಾಡುತ್ತದೆ.
 • ಮೀನುಗಾರಿಕೆಯಲ್ಲಿ 55 ಲಕ್ಷ ಹೊಸ ಉದ್ಯೋಗ ಸೃಷ್ಟಿ. ಮೀನುಗಾರಿಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ. ಮತ್ಸ್ಯ ಸಂಪದ ಯೋಜನೆಯಿಂದ ಮೀನುಗಾರರಿಗೆ ಸಹಾಯ. ಮೀನುಗಾರಿಕೆ ಬೂಸ್ಟ್ ನೀಡುತ್ತಿರುವ ಮತ್ಸ್ಯ ಸಂಪದ ಯೋಜನೆ.

ಲಖ್​ಪತಿ ದೀದಿ ಯೋಜನಾ

 • ಲಖ್​ಪತಿ ದೀದಿ ಯೋಜನೆ ಮೂಲಕ 2025ರ ವೇಳೆಗೆ ಲಕ್ಷಾಂತರ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲಾಗುವುದು.

2047ರ ವೇಳೆಗೆ ವಿಕಸಿತ ಭಾರತಕ್ಕಾಗಿ ಯೋಜನೆ

 • 2047 ರ ವೇಳೆಗೆ ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತೇವೆ-ನಿರ್ಮಲಾ ಸೀತಾರಾಮನ್

ಮಹಿಳಾ ಸಬಲೀಕರಣ ನಮ್ಮ ಹೊಣೆ

 • ತ್ರಿವಳಿ ತಲಾಖ್ ಅನ್ನು ಕಾನೂನುಬಾಹಿರಗೊಳಿಸಲಾಗಿದೆ. ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಶಾಸಕಾಂಗ ಸ್ಥಾನಗಳನ್ನು ಮೀಸಲಿಡುವುದು ಸರ್ಕಾರದ ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಎತ್ತಿ ತೋರಿಸುತ್ತದೆ.

ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಯೋಜನೆ

 • ವಿವಿಧ ಇಲಾಖೆಗಳ ಅಡಿಯಲ್ಲಿ ಅಸ್ತಿತ್ವದಲ್ಲಿರುವ ವೈದ್ಯಕೀಯ ಮೂಲಸೌಕರ್ಯವನ್ನು ಬಳಸಿಕೊಂಡು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ನಮ್ಮ ಸರ್ಕಾರ ಯೋಜಿಸಿದೆ.

‘ಸ್ಕಿಲ್ ಇಂಡಿಯಾ ಮಿಷನ್’ ಶ್ಲಾಘಿಸಿದ ಸೀತಾರಾಮನ್

 • ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಸ್ಕಿಲ್ ಇಂಡಿಯಾ ಮಿಷನ್ ಅನ್ನು ಶ್ಲಾಘಿಸಿದರು, ಇದು 1.4 ಕೋಟಿ ಯುವಕರಿಗೆ ತರಬೇತಿ ನೀಡಿದೆ, 54 ಲಕ್ಷ ಯುವಕರಿಗೆ ಕೌಶಲ್ಯವನ್ನು ನೀಡಿದೆ ಮತ್ತು 3000 ಹೊಸ ಐಟಿಐಗಳನ್ನು ಸ್ಥಾಪಿಸಿದೆ ಎಂದು ಹೇಳಿದರು. ಉನ್ನತ ಶಿಕ್ಷಣಕ್ಕಾಗಿ 7 ಐಐಟಿಗಳು, 16 ಐಐಐಟಿಗಳು, 7 ಐಐಎಂಗಳು, 15 ಎಐಐಎಂಎಸ್ ಮತ್ತು 390 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ” ಎಂದು ಅವರು ಹೇಳಿದರು.

25 ಕೋಟಿ ಜನ ಬಡತನ ರೇಖೆಯಿಂದ ಮುಕ್ತ

 • ಕಳೆದ 10 ವರ್ಷಗಳಲ್ಲಿ, 25 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
 • ನಮ್ಮ ಸರ್ಕಾರಕ್ಕೆ ಇರುವುದು ನಾಲ್ಕು ಜಾತಿ ಮಾತ್ರ. ಅದು ಬಡವರು, ಮಹಿಳೆಯರು, ಯುವಕರು ಮತ್ತು ರೈತರು. ಇವರ ಅಭಿವೃದ್ಧಿಯೇ ನಮ್ಮಮಹೊಣೆ.

10 ವರ್ಷಗಳಲ್ಲಿ ಭಾರತದ ಆರ್ಥಿಕತೆ ಬದಲಾವಣೆ ಕಂಡಿದೆ

 • 10 ವರ್ಷಗಳಲ್ಲಿ ಭಾರತದ ಆರ್ಥಿಕತೆ ಬದಲಾವಣೆ ಕಂಡಿದೆ. ಮೋದಿ ನೇತೃತ್ವದಲ್ಲಿ ದೇಶದಲ್ಲಿ ಹಲವು ಬದಲಾವಣೆ. ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಉದ್ಯೋಗ, ಉದ್ದಿಮೆಗೆ ಹಲವು ಅವಕಾಶ ಕಲ್ಪಿಸಲಾಗಿದೆ. 2ನೇ ಅವಧಿಯಲ್ಲಿ ಎಲ್ಲಾ ಜನರ ಅಭಿವೃದ್ಧಿಗಾಗಿ ಸರ್ಕಾರ ಕೆಲಸ ಮಾಡಿದೆ, ಮಾಡುತ್ತಿದೆ. 

ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್!

 • ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆ ತಲುಪಿದೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್ ಮಂತ್ರ ಜಪಸಿದ ನಿರ್ಮಲಾ ಸೀತಾರಾಮನ್‌.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಕೇಂದ್ರದ ಮಧ್ಯಂತರ ಬಜೆಟ್ ಮಂಡನೆ;-

 • ಸಣ್ಣ ಕೈಗಾರಿಕೆಗಳನ್ನು ಜಾಗತಿಕ ಸ್ಪರ್ಧೆಗೆ ಅಣಿಗೊಳಿಸಿದ್ದೇವೆ. ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಅವಕಾಶ ಒದಗಿಸಿಕೊಡುವುದು. ಮುಂದಿನ ಐದು ವರ್ಷ ಭಾರತದ ಅಭಿವೃದ್ಧಿಯ ಪಕ್ವಕಾಲ. ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡುತ್ತೇವೆ.
 • ರಿಫಾರ್ಮ್, ಪರ್ ಫಾರ್ಮ್, ಟ್ರಾನ್ಸ್ ಫಾರ್ಮ್ ಸರ್ಕಾರದ ಮಂತ್ರ. ಭಾರತದ ಬೆಳವಣಿಗೆಯ ಪೈಪೋಟಿ ವಿಶ್ವದ ಜೊತೆಗೆ. ಸ್ಟಾರ್ಟ್ ಅಪ್ ಇಂಡಿಯಾಗಾಗಿ ಸ್ಮಾರ್ಟ್ ಆಪ್ ಗ್ಯಾರಂಟಿ ಕ್ರೆಡಿಟ್ ಸ್ಕೀಂ. ಪೂರ್ವಭಾರತ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ.
 • ಪಿಎಂ ಆವಾಸ್ ಯೋಜನೆ ಅಡಿ ಮೂರು ಕೋಟಿ ಮನೆ ನಿರ್ಮಾಣದ ಗುರಿ ಸಾಧಿಸುತ್ತೇವೆ. ಈಶಾನ್ಯ ಭಾರತ ಅಭಿವೃದ್ಧಿಗೆ ಸಾಕಷ್ಟು ಉತ್ತೇಜನ ಕೊಟ್ಟಿದ್ದೇವೆ. ಭಾರತದ ಅಭಿವೃದ್ಧಿಯಲ್ಲಿ ಈಶಾನ್ಯದ ಪಾಲು ಹೆಚ್ಚಾಗಿದೆ.
 • ಸೋಲಾರ್ ಮೂಲಕ ಪ್ರತಿ ಮನೆಗಳಿಗೂ ಉಚಿತ ವಿದ್ಯುತ್. ಪ್ರತಿ ಮನೆಗೂ 300 ಯೂನಿಟ್ ಉಚಿತ ವಿದ್ಯುತ್. ರಾಮಮಂದಿರ ಉದ್ಘಾಟನೆ ದಿನ ಘೋಷಿಸಿದ ಮೋದಿ. ಹೆಚ್ಚುವರಿ ವಿದ್ಯುತ್ ಅನ್ನು ಆಯಾ ಮನೆಗಳು ಮಾರಾಟ ಮಾಡಲು ಅವಕಾಶ.
 • ಸೋಲಾರ್ ಉಪಕರಣಗಳ ಮಾರಾಟ, ದುರಸ್ತಿ, ಹೆಚ್ಚುವರಿ ಉದ್ಯೋಗ ಸೃಷ್ಟಿಸಲಿದೆ. ಮಧ್ಯಮ ವರ್ಗಕ್ಕೆ ವಸತಿ ಯೋಜನೆ ಮೂಲಕ ಮನೆ. ಹೆಚ್ಚು ವೈದ್ಯಕೀಯ ಕಾಲೇಜ್ ಗಳ ಸ್ಥಾಪನೆಗೆ ಒತ್ತು. ಹೊಸ ಸರ್ಕಾರಿ ಮೆಡಿಕಲ್ ಕಾಲೇಜುಗಳ ಸ್ಥಾಪನೆ. ಇರುವ ಆಸ್ಪತ್ರೆಗಳಲ್ಲಿ ಹೆಚ್ಚಿನ ವೈದ್ಯಕೀಯ ಕಾಲೇಜು ನಿರ್ಮಾಣ.
 • ವೈದ್ಯಕೀಯ ಆಸ್ಪತ್ರೆಗಳ ಕುಂದು ಕೊರತೆ ವಿಚಾರಿಸಲು ವಿಶೇಷ ಸಮಿತಿ ರಚನೆ.9-14 ವರ್ಷದ ಮಕ್ಕಳಿಗೆ ಉಚಿತ ಕ್ಯಾನ್ಸರ್ ತಡೆ ಲಸಿಕೆ. ಇಂದ್ರಧನುಷ್ ಯೋಜನೆ ದೇಶಾದ್ಯಂತ ವಿಸ್ತರಣೆ. ಆಯುಷ್ಮಾನ್ ಭಾರತ್ ಮೂಲಕ ಆರೋಗ್ಯ ವಿಮೆ ಯೋಜನೆ. ಆಶಾ, ಅಂಗನವಾಡಿ ಕಾರ್ಯಕರ್ತರು, ಸಹಾಯಕರಿಗೆ ವಿಮೆ.
 • ಕೋವಿಡ್ ನಂತರ ಜಾಗತಿಕ ಸ್ಥಾನಮಾನಗಳು ಏರುಪೇರಾಗಿವೆ. ಜಗತ್ತಿನ ಆರ್ಥಿಕತೆ, ಹಣದುಬ್ಬರ ಕಡಿಮೆ ಬೆಳವಣಿಗೆಯಂಥ ಸವಾಲುಗಳನ್ನು ಎದುರಿಸುತ್ತಿದೆ. ಯುದ್ದಗಳು, ಸಂಘರ್ಷಗಳು ನಮ್ಮ ಮೇಲೂ ಪರಿಣಾಮ ಬೀರಿವೆ. ಸಂಕಷ್ಟದ ಕಾಲದಲ್ಲಿ ಜಿ20 ಶೃಂಗಸಭೆ ನಡೆಸಲಾಗಿದೆ. ವಿಕಸಿತ ಭಾರತಕ್ಕೆ ಆಧುನಿಕ ಮೂಲಸೌಕರ್ಯಗಳ ಒದಗಿಸುವಿಕೆ.
 • ಮುಂದಿನ 5 ವರ್ಷಗಳು ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕಾಲ. ಭಾರತ – ಯುರೋಪ ಆರ್ಥಿಕ ಕಾರಿಡಾರ್. ಇದು ಅಭಿವೃದ್ದಿಯ ಹೊಸ ಶಕೆಯನ್ನೇ ಬರೆಯಲಿದೆ. ಅಭಿವೃದ್ದಿ, ಉತ್ಪಾದನೆಗಳನ್ನು ಒಳಗೊಂಡ ನೀತಿ ನಮ್ಮದು. 2047ಕ್ಕೆ ಅಭಿವೃದ್ದಿ ಹೊಂದಿದೆ ಭಾರತ ನಿರ್ಮಾಣಕ್ಕೆ ಕಟ್ಟಿಬದ್ದರಾಗಿದ್ದೇವೆ.
 • ಎಲ್ಲ ಭಾಗದ ಎಲ್ಲ ನಾಗರಿಕರು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಅವಕಾಶ ಪಡೆಯಬೇಕು. ಸಾಮರ್ಥ್ಯಕ್ಕನುಗುಣವಾಗಿ ಅವಕಾಶ ಪಡೆಯುವುದೇ ನಮ್ಮ ಅಭಿವೃದ್ದಿಯ ದೃಷ್ಟಿಕೋನ. ಮುಂದಿನ ಪೀಳಿಗೆಯನ್ನು ಗುರಿಯಾಗಿಸಿಕೊಂಡು ಯೋಜನೆಗಳು.
 • 10 ವರ್ಷಗಳಲ್ಲಿ ಭಾರತದ ಆರ್ಥಿಕ ಬದಲಾವಣೆ ಕಂಡಿದೆ. ಮೋದಿ ನೇತೃತ್ವದಲ್ಲಿ ದೇಶದಲ್ಲಿ ಹಲವು ಬದಲಾವಣೆ. ಸಬ್ ಕಾ ಸಾಥ್ ಸಬ್ ವಿಕಾಸ್ ಮಂತ್ರ ಭಾರೀ ಬದಲಾವಣೆ ತಂದಿದೆ. ಜನರಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಉದ್ಯೋಗ, ಉದ್ದಿಮೆಗೆ ಹಲವು ಅವಕಾಶ ಕಲ್ಪಿಸಲಾಗಿದೆ.
 • ಅಭಿವೃದ್ದಿಯ ಫಲಗಳು ಜನರಿಗೆ ತಲುಪುತ್ತಿವೆ. ಈ ಕಾರಣಕ್ಕಾಗಿಯೇ ಎರಡನೇ ಬಾರಿ ನಮಗೆ ಆರ್ಶೀವಾದ ಮಾಡಿದ್ದರು. 2ನೇ ಅವಧಿಯಲ್ಲಿ ಎಲ್ಲಾ ಜನರ ಅಭಿವೃದ್ದಿ ಮಂತ್ರ. ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗ ಸಾಕಷ್ಟು ಸವಾಲುಗಳಿದ್ದವು. ದೇಶದ ಜನ ಆಶಾಭಾವದಿಂದ ನೋಡ್ತಿದ್ದಾರೆ. ಅಭಿವೃದ್ದಿಯ ಫಲ ಜನರಿಗೆ ತಲುಪುತ್ತಿದೆ.
 • ಬಜೆಟ್ ಸಮಾಜದ ಎಲ್ಲ ವರ್ಗದ ಜನರನ್ನ ತಲುಪಲಿದೆ. 10 ವರ್ಷಗಳಲ್ಲಿ ಪಾರದರ್ಶಕ ಆಡಳಿತ ಕೊಟ್ಟಿದ್ದೇವೆ. ಭಾರತೀಯರು ಅಶಾವಾದದಿಂದ ಭವಿಷ್ಯವನ್ನು ನೋಡುತ್ತಿದ್ದಾರೆ. ಉಜ್ವಲ ಭವಿಷ್ಯಕ್ಕೆ ಮೋದಿ ಸರ್ಕಾರದಿಂದ ಹಲವು ಯೋಜನೆ. ಮೋದಿ ನಾಯಕತ್ವದಲ್ಲಿ ಆರ್ಥಿಕತೆ ಹೊಸ ದಿಕ್ಕು ಪಡೆದಿದೆ.
 • ನಾವು ಸರ್ವ ಸಮುದಾಯ ಮತ್ತು ಸರ್ವ ಕ್ಷೇತ್ರಗಳನ್ನೂ ಸ್ಪರ್ಶಿಸಿದ್ದೇವೆ. ಕೊರೊನಾ ಬಳಿಕ ನಾವು ಅಮೃತಕಾಲದ ಆರ್ಥಿಕತೆಯತ್ತ ಸಾಗಿದ್ದೇವೆ. ಭಾರತೀಯರು ಆಶಾವಾದದಿಂದ ಭವಿಷ್ಯವನ್ನು ನೋಡುತ್ತಿದ್ದಾರೆ. ಭಾರತಕ್ಕೆ ಹೊಸ ದೃಷ್ಟಿಕೋನ, ಹೊಸ ಆಶಾವಾದ ಮೂಡಿದೆ.
 • ಎಲ್ಲರಿಗೂ ಗ್ಯಾಸ್, ನೀರು, ಬ್ಯಾಂಕ್ ಖಾತೆ ಒದಗಿಸೋ ಗುರಿ. 80 ಕೋಟಿ ಜನರಿಗೆ ಉಚಿತ ಪಡಿತರ ಒದಗಿಸಲಾಗ್ತಿದೆ. ಮೋದಿಯವರ 2ನೇ ಅವಧಿಯಲ್ಲಿ ಸದೃಢ ಭಾರತ ಕಟ್ಟುವಲ್ಲಿ ಯಶಸ್ವಿಯಾಗಿದ್ದೇವೆ-ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
 • ಹಳ್ಳಿ ಜನರ ಆದಾಯದಲ್ಲಿ ಹೆಚ್ಚಳವಾಗಿದೆ. ನಮ್ಮ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಜಾರಿಯಾಗಿದೆ. ಈ ಹಿಂದೆ ಸಾಮಾಜಿಕ ನ್ಯಾಯ ಬರೀ ಘೋಷಣೆ. 2047ರ ವೇಳೆಗೆ ವಿಕಸಿತ ಭಾರತಕ್ಕಾಗಿ ಯೋಜನೆ. ರೈತರಿಗೆ ಬೆಂಬಲ ಬೆಲೆ ಸಿಕ್ಕಿದೆ. ಸಮಾಜದ ಎಲ್ಲಾ ಸಮುದಾಯಕ್ಕೆ ಬಜೆಟ್. ಅಭಿವೃದ್ದಿಯ ಫಲ ಎಲ್ಲರಿಗೂ ತಲುಪಿದೆ.
 • ಆತ್ಮನಿರ್ಧಾರ ಭಾರತದತ್ತ ಮುನ್ನುಗ್ಗುತ್ತಿದ್ದೇವೆ. ಅಮೃತಕಾಲದಲ್ಲಿ ʼಪಂಚ ಪ್ರಾಣʼ ದ ಅಡಿಪಾಯ ಸಿಕ್ಕಿದೆ. ಎಲ್ಲಾ ಸಮುದಾಯಗಳಿಗೂ ಸರ್ವಸ್ಪರ್ಶಿ ಸರ್ವನ್ಯಾಯ. ಸಾಮಾಜಿಕ ನ್ಯಾಯ ಎಂಬುದು ರಾಜಕೀಯ ಪಕ್ಷಗಳ ಸ್ಲೋಗನ್ ಆಗಿತ್ತು. ನಮ್ಮ ಆಡಳಿತದಲ್ಲಿ ಅಪಾರ ಪಾರದರ್ಶಕತೆ ಇದೆ. ದೇಶದ ಸಂಪತ್ತಿನಲ್ಲಿ ಎಲ್ಲರಿಗೂ ಸಮಪಾಲನ್ನು ನೀಡಲಾಗಿದೆ.
 • 4 ಪ್ರಮುಖ ಸಮುದಾಯಗಳಿಗೆ ಮೋದಿ ಹೆಚ್ಚು ಗಮನಕೊಡುತ್ತಿದ್ದಾರೆ. ಬಡವ, ಮಹಿಳೆ, ಯುವಕ ಮತ್ತು ರೈತ ಸಮುದಾಯಗಳಿಗೆ ಹೆಚ್ಚಿನ ಒತ್ತು. ಈ ನಾಲ್ಕು ವರ್ಗಗಳು ಅಭಿವೃದ್ದಿಯಾದರೆ ದೇಶ ಅಭಿವೃದ್ದಿ ಆಗಲಿದೆ. ಕೊವಿಡ್ ನಂಥ ಮಹಾಮಾರಿಯನ್ನ ಎದುರಿಸಿ ಮುನ್ನಡೆದಿವೆ. ಗರೀಬ್ ಕಲ್ಯಾಣ ಅನ್ನೋದು ದೇಶದ ಕಲ್ಯಾಣ. ನಮ್ಮ ಸರ್ಕಾರ ಸ್ವಜನ ಪಕ್ಷಪಾತವನ್ನು ಮೆಟ್ಟಿ ನಿಂತಿದೆ.
 • ನಮ್ಮ ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದು , ಫಲಾನುಭವಿಗಳಿಗೆ ಎಲ್ಲ ಯೋಜನೆ ತಲುಪಿಸಿದ್ದೇವೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಾಗಿದೆ. 10 ವರ್ಷಗಳಲ್ಲಿ 25 ಕೋಟಿ ಜನ ಬಡತನ ರೇಖೆಯಿಂದ ಹೊರಬಂದಿದ್ದಾರೆ. 34 ಲಕ್ಷ ಕೋಟಿ ರೂಪಾಯಿ ಫಲಾನುಭವಿಗಳಿಗೆ ನೇರ ಸಂದಾಯ. ಈ ನಾಲ್ಕು ವರ್ಗಗಳು ಅಭಿವೃದ್ದಿಯಾದರೆ ದೇಶ ಅಭಿವೃದ್ದಿ ಆಗಲಿದೆ.
 • ಪಿಎಂ ಜನಮನ ಯೋಜನೆ ಬುಡಕಟ್ಟು ಜನರಿಗೆ ತಲುಪಿದೆ. ಜನ್ ಧನ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಪಿಎಂ ಸ್ವ ನಿಧಿ ಯೋಜನೆ ಯಶಸ್ವಿಯಾಗಿದೆ. ರೈತರು ನಮ್ಮ ಅನ್ನದಾತರು, ಅನ್ನದಾತರಿಗೆ ಹಲವು ಯೋಜನೆ. 4 ಕೋಟಿ ರೈತರಿಗೆ ಪಿಎಂ ಫಸಲು ಭೀಮಾ ಯೋಜನೆ ತಲುಪಿದೆ.
 • ಪ್ರಧಾನಿ ಜನ್ ಮನ್ ಯೋಜನೆ ಅಭಿವೃದ್ಧಿಯಿಂದ ಹೊರಗುಳಿದಿದ್ದ ಬುಡಕಟ್ಟು ಜನರು. ಪಿಎಂ ಸಮ್ಮಾನ್ ಯೋಜನೆಯಲ್ಲಿ 11.8 ಕೋಟಿ ರೈತರಿಗೆ ಅನುಕೂಲ. 4 ಕೋಟಿ ರೈತರು ಪಿಎಂ ಫಸಲ್ ಭೀಮಾ ಯೋಜನೆಯ ಲಾಭ ಪಡೆದಿದ್ದಾರೆ. 1269 ಈ ಮಾರ್ಕೆಟ್ ಗಳ ಮೂಲಕ ಕೋಟ್ಯಂತರ ರೈತರಿಗೆ ಸಹಾಯ.
 • ಸ್ಟಾರ್ಟ್ ಪ್ ಗಳ ಮೂಲಕ ತಂತ್ರಜ್ಞಾನದ ಅಭಿವೃದ್ಧಿಯಾಗಿದೆ. NEP ಮೂಲಕ ಶಿಕ್ಷಣದ ಉನ್ನತೀಕರಣಕ್ಕೆ ಒತ್ತು. 7 ಐಐಟಿ, 16ಐಐಟಿ 319 ವಿವಿಗಳನ್ನು ಹೊಸದಾಗಿ ಸ್ಥಾಪಿಸಲಾಗಿದೆ. ಜನಧನ ಖಾತೆಯಿಂದ ಅಭಿವೃದ್ಧಿಗೆ ಶಕ್ತಿ. ಬಡವರ ಅಭಿವೃದ್ಧಿಯೇ ಸರ್ಕಾರದ ಗುರಿ.
 • ಬುಡಕಟ್ಟು ಸಮೂಹಕ್ಕೆ ಜನಮನ ಯೋಜನೆ. ರೈತರ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಕೆಲಸ. ಯುವ ಸಬಲೀಕರಣಕ್ಕಾಗಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಿಎಂ ಶ್ರೀ ಯೋಜನೆಯ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲಾಗಿದೆ. 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಬದಲಾವಣೆ.
 • ಭಾರತದ ಆರ್ಥಿಕತೆಯಲ್ಲಿ ಭಾರಿ ಬದಲಾವಣೆ ಕಂಡಿದೆ. ಬಡವರು, ಮಹಿಳೆ, ರೈತರ ಅಗತ್ಯತೆಗಳ ಮೊದಲ ಆದ್ಯತೆ. ಸಿಲ್ಕ್ ಇಂಡಿಯಾ ಮೂಲಕ 1.4 ಕೋಟಿ ಯುವಕರಿಗೆ ಕೌಶಲ್ಯಾಭಿವೃದ್ಧಿ. ಮಹಿಳಾ ಸಬಲೀಕರಣಕ್ಕೆ ಆದ್ಯತೆ. 30 ಕೋಟಿ ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಸಾಲ.
 • ದೇಶಾದ್ಯಂತ 390 ವಿಶ್ವವಿದ್ಯಾಲಯಗಳನ್ನು ಆರಂಭ ಮಾಡಲಾಗಿದೆ. ತ್ರಿವಳಿ ತಲಾಖ್ ನಿಷೇಧ. ಶೇ.33ರಷ್ಟು ಮೀಸಲಾತಿಯಿಂದ ಮಹಿಳೆಯರ ಸ್ವಾಭಿಮಾನ ಹೆಚ್ಚಿದೆ. ಪಿಎಂ ಅವಾಜ್ ಕಟ್ಟಲಾದ ಮನೆಗಳ ಮಾಲೀಕತ್ವ ಮಹಿಳೆಯರಿಗೆ ಸಿಕ್ಕಿದೆ. ಇದು ಮಹಿಳೆಯರ ಸ್ವಾಭಿಮಾನವನ್ನು ಹೆಚ್ಚಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಉದ್ಯಮಕ್ಕೆ ಸಹಾಯ.
 • ಏಷ್ಯನ್ ಹಾಗೂ ಪ್ಯಾರಾಗೇಮ್ಸ್ ನಲ್ಲಿ ಭಾರತ ಅತ್ಯುತ್ತಮ ಸಾಧನೆ. ಭಾರತದಲ್ಲಿ 80 ಚೆಸ್ ಗ್ರ್ಯಾಂಡ್ ಮಾಸ್ಟರ್ ಗಳಿದ್ದಾರೆ. ಮಹಿಳಾ ಮೀಸಲಾತಿ ಕಾಯ್ದೆ ತಂದು ಮಹಿಳೆಯರಿಗೆ ಶಕ್ತಿ ತುಂಬಲಾಗಿದೆ. ಕ್ರೆಡಿಟ್ ಗ್ಯಾರಂಟಿ ಯೋಜನೆಯಿಂದಲೂ ಯುವಕರಿಗೆ ಅನುಕೂಲ. 43ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡಲಾಗಿದೆ.
 • ಮಹಿಳೆಯರಿಗೆ ಸರಾಸರಿ ಆದಾಯ ಹೆಚ್ಚಳವಾಗಿದೆ. ನಾರಿಶಕ್ತಿಗೆ ಬಜೆಟ್ ನಲ್ಲಿ ಹೆಚ್ಚು ಒತ್ತು. ಎಲ್ಲಾ ರೀತಿಯ ಮೂಲಭೂತ ಸೌಕರ್ಯಕ್ಕೆ ಒತ್ತು. ನಮ್ಮ ಆಡಳಿತ ಪಾರದರ್ಶಕ ಮತ್ತು ಪ್ರಾಮಾಣಿಕ, ಜನಕೇಂದ್ರಿತವಾಗಿದೆ. ದೇಶದ ಎಲ್ಲ ಭಾಗಗಳು ಈ ಅಭಿವೃದ್ದಿ ವೇಗದಲ್ಲಿ ಪಾಲುದಾರರಾಗಿದೆ. ಜನರ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ನಮ್ಮ ಸರ್ಕಾರ ಶಕ್ತಿ ತುಂಬುತ್ತಿದೆ. ಎಲ್ಲ ರೀತಿಯ ಮೂಲಕಸೌಕರ್ಯಗಳು ವೇಗದಲ್ಲಿ ನಿರ್ಮಾಣಗೊಳ್ಳುತ್ತಿವೆ.
 • ದೇಶದ ಎಲ್ಲ ಭಾಗಗಳು ಈ ಅಭಿವೃದ್ದಿ ವೇಗದಲ್ಲಿ ಪಾಲುದಾರರಾಗಿದೆ. ದೇಶದ ಎಲ್ಲಾ ಭಾಗಗಳೂ ಆರ್ಥಿಕತೆ ಅಭಿವದ್ದಿಗೆ ಸಾಥ್. GST ಮೂಲಕ ಒಂದು ದೇಶ ಒಂದು ತೆರಿಗೆ ಪದ್ದತಿ. ಬಂಡವಾಳ ಹರಿದು ಬರುತ್ತಿದೆ, ಹಣಕಾಸು ವ್ಯವಸ್ಥೆ ಅತ್ಯುತ್ತಮವಾಗಿದೆ.

More articles

Latest article