ಚನ್ನಪಟ್ಟಣ : ಕುಮಾರಸ್ವಾಮಿ ಅತ್ಯಂತ ಕೆಳಮಟ್ಟಕ್ಕೆ ಇಳಿದು ನನ್ನ ವಿರುದ್ಧ ಕಟುಕಿದ್ದರು. ಈ ಫಲಿತಾಂಶದ ಮೂಲಕ ಉತ್ತರವನ್ನು ಕೊಟ್ಟಿದ್ದೇನೆ ಎಂದು ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.
ವಿಜಯೇಂದ್ರ ನನ್ನ ಬ್ಯಾಟರಿ ವೀಕ್ ಆಗಿದೆ ಅಂತಿದ್ರು. ವಿಜಯೇಂದ್ರ ನಿಮ್ಮ ಬ್ಯಾಟರಿ ವೀಕ್ ಆಗಿದ್ದಾಗ ಚಾರ್ಜ್ ಮಾಡಿದ್ದು ನಾನು. ವಿಜಯೇಂದ್ರ ಮತ್ತು ಬಿಎಸ್ ವೈ ಷಡ್ಯಂತ್ರದಿಂದ ನಾನು ಎನ್ ಡಿಎ ಬಿಟ್ಟಿದ್ದು. BSY ಕುತಂತ್ರದಿಂದ ನನಗೆ ಬಿಜೆಪಿ ಟಿಕೆಟ್ ಕೈತಪ್ಪಿತ್ತು ಎಂದು ಸಿಪಿ ಯೋಗೇಶ್ವರ್ ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಬಿಜೆಪಿಯವರಿಗೆ ಎದುರೆಟು ಕೊಟ್ಟಿದಾರೆ.
“ನನ್ನ ಗೆಲುವು ನಿರೀಕ್ಷೆ ಮಾಡಿದ್ದೆ. ನನ್ನ ನಿರೀಕ್ಷೆಗೆ ಹತ್ತಿರವಾದ ಗೆಲುವು ಇದು“ ಎಂದು ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.
“ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಗೆಲುವಿನ ಮಾತು ಕೊಟ್ಟಿದ್ದೆ. 30 ಸಾವಿರ ಅಂತರದಲ್ಲಿ ಗೆಲ್ತೇನೆ ಅಂತ ಸಹ ಹೇಳಿದ್ದೆ” ಎಂದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಇದು ಜೆಡಿಎಸ್ ಅಸ್ತಿತ್ವದ ಚುನಾವಣೆ. ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ. ದೇವೇಗೌಡರ ಹೋರಾಟದಲ್ಲಿ ಸ್ವಾರ್ಥ ಇತ್ತು. ಕುಟುಂಬದವರನ್ನು ಬೆಳೆಸೋ ಹೋರಾಟ ದೇವೇಗೌಡರದ್ದು ಎಂದು ಯೋಗೇಶ್ವರ್ ಗುಡುಗಿದ್ದಾರೆ.
ಹಳೇ ಮೈಸೂರಿನಲ್ಲಿ ಡಿ ಕೆ ಸಹೋದರರ ನಾಯಕತ್ವ ಒಪ್ಪಿದ್ದಾರೆ ಎಂದು ಗೆಲುವಿನ ಬಳಿಕ ಸಿ.ಪಿ. ಯೋಗೇಶ್ವರ್ ಮಾಧ್ಯಮದವರ ಜೊತೆ ಸಂತೋಷ ಹಂಚಿಕೊಂಡರು.