ಸರಹದ್ದುಗಳು

Most read

ಇತ್ತೀಚೆಗೆ  ಬದುಕು ಕಮ್ಯೂನಿಟಿ ಕಾಲೇಜ್ ನಲ್ಲಿ ನಮ್ ಸರ್ಸಿಮಾ (ದು ಸರಸ್ವತಿ) ಹೇಳ್ತಿದ್ಲು, “ಮನ್ಸುರು ಪ್ಯಾಲೆಸ್ಟೈನಲ್ಲಿ ಸತ್ರೇನು ಇಲ್ಲಿ ಸತ್ರೇನು ಮನ್ಸುರು ಮನ್ಸುರೇ” ನಿಜ ಅಲ್ವ? ಈ ಎರಡು ವಿಷಯಗಳನ್ನ ಎಷ್ಟು ಪಾಠ ಕಲಿತರೂ ನಾವು ಬಿಡುವುದೇ ಇಲ್ಲ. ಯುದ್ಧ ಮತ್ತೆ ಸರಹದ್ದುಗಳು.

ರಾಮರಾಯರ ಹತ್ರ ನಾನು ಸಂಗೀತ ಕಲಿಯುವಾಗ ನನಗೇ ಎಂದು ಪ್ರತಿ ನಿತ್ಯ ಒಂದು ಗಂಟೆಯ ಕ್ಲಾಸ್ ಮಾಡಲು ಆಗುತ್ತಿರಲಿಲ್ಲ. ಏಕೆಂದರೆ ಆಗಿನ ಸಮಯದಲ್ಲಿ ನನ್ನ ಅಮ್ಮನ ಹತ್ರ ಹೆಚ್ಚು ದುಡ್ಡಿರುತ್ತಿರಲಿಲ್ಲ. ಮಿಕ್ಕವರು 200, 500 ಕೊಡೋ ಕಡೆ ಅಮ್ಮ 20 ರೂ ಕೊಡಲು ಸಾಧ್ಯವಾಗುತ್ತಿತ್ತು. ಆ ಕಾರಣಕ್ಕೇ  ನನಗೆ ಯಾರೆಲ್ಲಾ ಕ್ಲಾಸ್‌ಗೆ ಬರ್ತಿದ್ರೋ ಅವರಿಗೆ ಹೇಳಿಕೊಡೋದನ್ನ ಕೂತು ಕೇಳಿಸಿಕೊಳ್ಳ ಬಹುದಿತ್ತು ಅಷ್ಟೆ. ಆದರೆ ಕೆಲವರು ಅವರಿಗೆ ಹೇಳಿಕೊಡುವುದನ್ನು ನಾ ಕೇಳಿದರೆ ಅವರಿಗೆ ಹೇಳಿಕೊಡುವ ವೈಶಿಷ್ಠ್ಯಗಳನ್ನ ನನ್ನ ಜೊತೆ ಹಂಚಿಕೊಂಡ ಹಾಗೆ ಅವರಿಗೆ ಅನ್ನಿಸಿ ಅವರು ನನ್ನ ಕ್ಲಾಸಿನಿಂದ ಹೊರಗಟ್ಟುತ್ತಿದ್ದರು. ನನಗೆ ಆವಾಗ ತೀರಾ ದು:ಖವಾಗುತ್ತಿತ್ತು. ದುಡ್ಡಿನಿಂದಲ್ಲವೇ ಈ ರೀತಿಯ ನಡವಳಿಕೆ ಎಂದು ಕೊರಗುತ್ತಿದ್ದೆ. ಆದರೆ ತೋರಿಸಿ ಕೊಳ್ಳುತ್ತಿರಲಿಲ್ಲ.

ಒಂದು ದಿನ ನಮ್ ರಾಮರಾಯರು, ಸೊಪ್ಪು ತರ್ಬೇಕು ಅಂತ ಮೈಸೂರು ರೋಡಿನ ಕಡೆ ಕರೆದುಕೊಂಡು ಹೋಗುತ್ತಾ ಕೇಳಿದರು “ಏನೋ ಸಿದ್ದಿ ನೋವಾಗುತ್ತಾ ಕೆಲವರು ತಮ್ಮ ಕ್ಲಾಸಿನಲ್ಲಿ ಕೂರಲು ಬಿಡುವುದಿಲ್ಲ ಎಂದು?”. ತಟಕ್ ಅಂತ ನನ್ನ ಕಣ್ಣಲ್ಲಿ ನೀರು ಒತ್ತರಿಸಿ ಬಂದಿತು. ನಾನು ಏನೂ ಹೇಳಲಿಲ್ಲ. ಸುಮ್ಮನೆ ಅವರ ಮುಖ ನೋಡಿದೆ. ಅವರು ನನ್ನ ಕೈ ಹಿಡಿದು ಒತ್ತಿದರು. “ನಾನೂ ಏನೇನೋ ಅನುಭವಿಸಿ ಬಿಟ್ಟಿದ್ದೇನೆ ಪುಟ್ಟ” ಅಂತ ನಡು ದಾರೀಲಿ ನಿಂತರು. ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.

ಅವರಿಗೆ ಬರೋಡದಲ್ಲಿ ಹೇಳಿಕೊಡುತ್ತಿದ್ದ ಒಬ್ಬರು ಇವರಿಗಿಂತ ದೊಡ್ಡ ಬ್ರಾಮಣರಂತೆ. ಅಂದ್ರೆ ನಮ್ಮ ಮೇಷ್ಟ್ರಿಗೆ ತಾವೇ ಅತೀ ಹೆಚ್ಚಿನ ಬ್ರಾಮಣರು ಎಂಬ ಭ್ರಮೆ ಯಿಂದ ಆಚೆ ಬರುವುದಕ್ಕೆ ಈ ಒಂದು ರಾಗ ಕಲಿಯಬೇಕಿತ್ತು. ಅದಾವುದೋ ಬಹಳ ಹಳೇ ಕಾಲದ ರಾಗ. ಅದನ್ನು ಅವರೊಬ್ಬರೇ ಹಾಡುತ್ತಿದ್ದದ್ದಂತೆ. ಅದನ್ನು ಕಲಿಸಿಕೊಡಿ ಎಂದು ನಮ್ ಮೇಷ್ಟ್ರು ಕೇಳಿದಾಗ ಅವರ ಜಾತಿ ಕೇಳಿದರಂತೆ. ಅಂದ್ರೆ ಇದು ನಡೆದದ್ದು ಸುಮಾರು 1920-30ರ ಸಮಯದಲ್ಲಿ. ಆಗ ಮೇಷ್ಟ್ರು ತಮ್ಮ ಜಾತಿ ಮತ್ತೆಲ್ಲಾ ಡೀಟೇಲ್ಸ್ ಕೊಟ್ರಂತೆ. ಆಗ ಆ ಮನುಷ್ಯ ಹೇಳಿದನಂತೆ “ನೀನು ನಮಗಿಂತ ಕೆಳಗಿನ ಬ್ರಾಮಣ. ಅದಕ್ಕೆ ಆ ರಾಗ ಕಲಿಯ ಬೇಕಾದ್ರೆ ನನ್ನ ಮನೆ ಬಚ್ಚಲು ಮತ್ತು ಪಾಯಖಾನೆ ತೊಳೆಯ ಬೇಕು ಅದೂ 3 ತಿಂಗಳು” ಎಂದರಂತೆ.  

ನಮ್ ಮೇಷ್ಟ್ರು ಸ್ವಲ್ಪನೂ ಯೋಚನೆ ಮಾಡದೆ ಆ ರಾಗವನ್ನು ಕಲಿಯಲು ಅವರ ಮನೆಯಲ್ಲಿ 3 ತಿಂಗಳು ಕೆಲಸ ಮಾಡಿದರಂತೆ. ಕಡೆಗೆ ಒಂದು ದಿವಸ ಆ ಬ್ರಾಮಣ ಗುರು ಕರೆದು ಒಂದೇ ದಿನದಲ್ಲಿ ಪಾಠ ಹೇಳಿಕೊಟ್ಟು ಕಳಿಸಿದರಂತೆ. ಅವರು ಹೇಳಿ ಮುಗಿಸುವ ಹೊತ್ತಿಗೆ ನಾನು ಬಿಕ್ಕೀ ಬಿಕ್ಕೀ ಅತ್ತೆ ರೋಡಿನ ಮಧ್ಯದಲ್ಲಿ…

ರೂಮಿ ಹರೀಶ್

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 25 ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

ಇದನ್ನೂ ಓದಿ- http://ಅಂಬೇಡ್ಕರ್ ಎಂದೆ…!? https://kannadaplanet.com/ambedkar-ambedkar/

More articles

Latest article