ಹಾವೇರಿ ಜಿಲ್ಲೆಯಲ್ಲಿ ನೂರಾರು ರೈತರ ಖಾತೆಗಳ ಬದಲಾವಣೆಗೆ ಜಿಲ್ಲಾಧಿಕಾರಿ ಎಸಿ, ತಹಸೀಲ್ದಾರ್ ಗಳಿಗೆ ಸೂಚನೆ ನೀಡಿದ್ದಾರೆ. ತಕ್ಷಣ ಅದನ್ನು ವಾಪಸ್ ಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಶಿಗ್ಗಾವಿಯಲ್ಲಿ ಇಂದು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,, ಹಾವೇರಿ ಜಿಲ್ಲಾಧಿಕಾರಿ ಜಿಲ್ಲೆಯ ಶಿಗ್ಗಾವಿ, ಸವಣೂರು, ಹಿರೆಕೆರೂರು, ಬ್ಯಾಡಗಿ, ಹಾನಗಲ್, ರಟ್ಟಿಹಳ್ಳಿ ತಾಲೂಕು ತಹಸೀಲ್ದಾಗಳು 23-8-2024 ರಂದು ರೈತರಿಗೆ ನೊಟಿಸ್ ಕೊಟ್ಟಿದ್ದಾರೆ. ಇವರು ಕೇವಲ ಸರ್ವೆನಂಬರ್ ಕೊಟ್ಟಿದ್ದಾರೆ. ಆ ಸರ್ವೆ ನಂಬರ್ ನಲ್ಲಿ ಯಾರಿದ್ದಾರೆ ಗೊತ್ತಿಲ್ಲ. ಗೆಜೆಟ್ ಯಾರ ಹೆಸರಿನಲ್ಲಿ ಇರಬೇಕೆಂದು ಮುಸ್ಲೀ ಜಮಾತ್ ಮುಗಳಿಕಟ್ಟಿ, ಹುನಗುಂದ, ಬನ್ನೂರ, ಬೆಳಲಕೊಪ್ಪ ಈ ಥರ ನೊಟಿಸ್ ಕೊಟ್ಟಿದ್ದಾರೆ. ಇದರಿಂದ ದೊಡ್ಡ ಗೊಂದಲ ಸೃಷ್ಟಿಯಾಗಿದೆ. ಅಷ್ಟೇ ಅಲ್ಲ ಶಾಂತಿ ಸ ಸೌಹಾರ್ದತೆ ಕದಡುವ ಕೆಲಸ ಮಾಡಿದ್ದಾರೆ. ಯಾವುದಾದರೂ ಆದೇಶ ಮಾಡುವ ಮೊದಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ತುಷ್ಟೀಕರಣ ರಾಜಕಾರಣದ ಹಠಮಾರಿ ಧೋರಣೆಯಿಂದ ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಹೆಸ್ಕಾಂನ ಕಾರ್ಯನಿರ್ವಹಣಾಧಿಕಾರಿ ಕಚೇರಿಗೂ ನೊಟೀಸ್ ಕೊಟ್ಟಿದ್ದಾರೆ. ವಕ್ಪ್ ಆಸ್ತಿ ಪ್ರಕಾರ ದುರಸ್ಥಿ ಮಾಡಬೇಕೆಂದು ನೊಟಿಸ್ ಕೊಟ್ಟಿದ್ದಾರೆ. ಹಜರತ್ ಅಹಮದ್ ಸಹಾಯತ್ ಸವಣೂರು, ಗುಡಿಸಾಗರ ಶ್ರೀಕಾಂತ ವೀರಪ್ಪಗೌಡ, ಸಿದ್ದವ್ವ ಗದಿಗೆಪ್ಪ ಹಾವೇರಿ, ಸಂದೀಪ್ ಸವೂರ ಈ ರೀತಿ ರೈತರ ಹೆಸರಿನಲ್ಲಿರುವ ಹಲವಾರು ಪಹಣಿಗಳನ್ನು ಬದಲಾಯಿಸಲು ಪ್ರಯತ್ನ ಮಾಡುತ್ತಿದ್ದಾರೆ. ಮುಸಲ್ಮಾನ ಸಂಸ್ಥೆಗಳು, ಮುಸಲ್ಮಾನರ ಹೆಸರಿನಲ್ಲಿರುವ ಪಹಣಿಯನ್ನೂ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶಿಗ್ಗಾವಿ ಯಲ್ಲಿ 220 ಕೆವಿ ಸ್ಡೇಷನ್ ಮಾಡುವಾಗ ವಕ್ಪ್ ಆಸ್ತಿ ಅಂತ ತಕರಾರು ಮಾಡಿದ್ದರು. ಆಗ ನಾವು ಕೋರ್ಟ್ ಗೆ ಹೋಗಿ ನ್ಯಾಯ ಪಡೆದುಕೊಂಡು ಬಂದೆವು. ಶಿಗ್ಗಾವಿಯ 68, ಸಬಣೂರಿನಲ್ಲಿ 376 ರೈತರಿಗೆ ನೊಟೀಸ್ ಬಂದಿದೆ. ನೂರಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರ ಜಮೀನು ವಕ್ಪ್ ಆಸ್ತಿ ಎಂದರೆ ಆ ರೈತರನ್ನು ಲಾಕ್ ಮಾಡಿದಂತಾಗುತ್ತದೆ. ಇದರಿಂದ ರೈತರು ಸಾಗುವಳಿ ಮಾಡಲು, ಮಾರಾಟ ಮಾಡಲು ಆಗುವುದಿಲ್ಲ. ಸರ್ಕಾರ ವಕ್ಪ್ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಸರ್ಕಾರವೇ ನೇರ ಕಾರಣ ಎಂದು ಹೇಳಿದರು.
ಸರ್ಕಾರ ಸಮಸ್ಯೆ ಸೃಷ್ಟಿ ಮಾಡಿ ವಿರೋಧ ಪಕ್ಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸುತ್ತಿದೆ. ಸರ್ಕಾರದ ಜನ ವಿರೋಧಿ ನೀತಿಯನ್ನು ಎತ್ತಿ ಹಿಡಿಯೋದು ವಿರೋಧ ಪಕ್ಷದ ರಾಜಕಾರಣವೂ ಹೌದು. ಸರ್ಕಾರ ತಕ್ಷಣ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕು. ಮತ್ತು ರೈತರ ಪಹಣಿಯಲ್ಲಿ ವಕ್ಪ್ ಆಸ್ತಿ ಎಂದು ನಮೂದಿಸಿರುವುದನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ವಕ್ಪ್ ಕಾನೂನು ತಿದ್ದುಪಡಿ ಮಾಡಲು ತೀರ್ಮಾನಿಸಿದ್ದು, ಈಗಾಗಲೇ ಜಂಟಿ ಸದನ ಸಮಿತಿ ರಚನೆಯಾಗಿದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆ ಮಂಡನೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.