ಬಸ್‌ ಚಾಲನಾ ಅವಧಿ ವಿಸ್ತರಿಸಿದ ಬಿಎಂಟಿಸಿ

Most read

ಬೆಂಗಳೂರು: ಇತ್ತೀಚಿಗೆ ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿರುವುದು ವರದಿಯಾಗುತ್ತಿವೆ. ಮತ್ತೊಂದು ಕಡೆ ಸಾರಿಗೆ ಸಂಸ್ಥೆ ಬಸ್‌ ಗಳು ಕಿಲ್ಲರ್‌ ಬಸ್‌ ಗಳೂ ಎಂಬ ಕುಖ್ಯಾತಿಗೆ ಒಳಗಾಗಿವೆ.

ಇದಕ್ಕೆ ಕಾರಣ ಬಸ್‌ ತಲುಪಬೇಕಾದ ಸಮಯ ನಿಗಧಿಯಾಗಿರುವುದು. ಉದಾಹರಣೆಗೆ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಉತ್ತರಹಳ್ಳಿ ತಲುಪಲು 55 ನಿಮಿಷಗಳನ್ನು ನಿಗಧಿಪಡಿಲಾಗಿತ್ತು. ಬೆಂಗಳೂರಿನ ಟ್ರಾಫಿಕ್‌ ವ್ಯವಸ್ಥೆಯಲ್ಲಿ ಈ ಸಮಯ ತಲುಪುವುದು ಅಸಾಧ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ.. ಆದರೆ ಬಿಎಂಟಿಸಿ ಚಾಲಕರು ನಿಗಧಿತ ವೇಳೆಗೆ ತಲುಪಬೇಕಾದ ಅನಿವಾರ್ಯತೆ ಇತ್ತು. ಅದಕ್ಕಾಗಿ ಬಸ್‌ ಚಾಲಕರು ವೇಗವಾಗಿ ಬಸ್‌ ಚಾಲನೆ ಮಾಡುತ್ತಿದ್ದರು. ಇದರಿಂದ ಅಪಘಾತಗಳಾಗುತ್ತಿದ್ದವು ಮತ್ತು ಸಾರ್ವಜನಿಕರಿಗೆ ತೊಂದರೆಯೂ ಆಗುತ್ತಿತ್ತು.

ಇದೀಗ, ಬಿಎಂಟಿಸಿ ಅಧಿಕಾರಿಗಳು ಪ್ರತಿ ಮಾರ್ಗದಲ್ಲೂ ಬಸ್ ಸಂಚಾರದ ಸಮಯ ಹೆಚ್ಚಳ ಮಾಡುವ ಮೂಲಕ ಚಾಲಕರ ಮೇಲಿನ ಒತ್ತಡ ಕಡಿಮೆ ಮಾಡಿದ್ದಾರೆ. ಚಾಲಕರು ನಿರಾಳರಾಗಿದ್ದು, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಬಿಎಂಟಿಸಿ ಬಸ್ಗಳು ಸಂಚಾರ ಮಾಡುವ 1800 ಮಾರ್ಗಗಳಲ್ಲೂ ಸಮಯವನ್ನು ಬದಲಾವಣೆ ಮಾಡಲಾಗಿದೆ.
ಪ್ರತಿಯೊಂದು ಮಾರ್ಗದಲ್ಲೂ 15 ರಿಂದ 20 ನಿಮಿಷಗಳ ಕಾಲ ಹೆಚ್ಚಿನ ಸಮಯ ನೀಡಲಾಗುತ್ತದೆ. ಇದರಿಂದ ಚಾಲಕ, ನಿರ್ವಾಹಕರ ಮೇಲಿನ ಹಲ್ಲೆ ಮತ್ತು ಅಪಘಾತಗಳು ಕಡಿಮೆ ಆಗಲಿವೆ ಎಂದು ನಿರೀಕ್ಷಿಸಲಾಗಿದೆ. ಬಿಎಂಟಿಸಿಯ ಚಾಲಕರು ನಿಗಧಿತ ಅವಧಿಯಲ್ಲಿ ಗುರಿ ತಲುಪಲು ವೇಗವಾಗಿ ಬಸ್ ಚಲಾಯಿಸುತ್ತಿದ್ದರು. ಇದರಿಂದ ಅಪಘಾತಗಳು ಸಂಭವಿಸುತ್ತಿದ್ದವು. ಬಿಎಂಟಿಸಿಯ 58 ಸಾವಿರ ಟ್ರಿಪ್‌ಗಳಲ್ಲೂ ಹೆಚ್ಚಿನ ಸಮಯವನ್ನು ನೀಡಲು ಬಿಎಂಟಿಸಿ ಮುಂದಾಗಿದೆ.

More articles

Latest article