ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ; ಈ ಬಾರಿ ಯಾರ ಬದಲಿಗೆ ಯಾರಿಗೆ ಟಿಕೆಟ್​?

Most read

ಕರ್ನಾಟಕ ಲೋಕಸಭಾ (Karnataka Lokasbha Election) ಅಖಾಡ ರಂಗೇರಿದೆ. ಕಾಂಗ್ರೆಸ್​, ಬಿಜೆಪಿ  ಗೆಲುವಿಗಾಗಿ ರಣತಂತ್ರ ರೂಪಿಸಿದೆ. ಇದೀಗ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ (BJP candidates 2nd List) ರಿಲೀಸ್ ಮಾಡಿದೆ. ಕರ್ನಾಟಕದ 20 ಕ್ಷೇತ್ರಗಳಿಗೆ ಸ್ಪರ್ಧಿಗಳ ಹೆಸರು ಘೋಷಣೆ ಮಾಡಲಾಗಿದೆ.

ಅದರಲ್ಲೂ ಮುಖ್ಯವಾಗಿ ಹಲವು ಹಾಲಿ ಸಂಸದರಿಗೆ ಟಿಕೆಟ್​ ಮಿಸ್ ಆಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಿದೆ.  ಒಟ್ಟು ಎಂಟು ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದ್ದು, ಆರು ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದರಿಂದ ಘಟಾನುಘಟಿ ನಾಯಕರುಗಳಿಗೆ ಹೈಕಮಾಂಡ್​  ಬಿಗ್ ಶಾಕ್ ಕೊಟ್ಟಿದೆ.

ಯಾರ ಬದಲಿಗೆ ಯಾರಿಗೆ ಟಿಕೆಟ್​?

  • ದಕ್ಷಿಣ ಕನ್ನಡ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲು ಬದಲಿಗೆ ಬ್ರಿಜೇಶ್​ ಚೌಟಾಗೆ ಟಿಕೆಟ್
  • ಮೈಸೂರು- ಪ್ರತಾಪ್​ ಸಿಂಹ ಬದಲು ಯದುವೀರ ಒಡೆಯರ್​ಗೆ ಟಿಕೆಟ್
  • ಬಳ್ಳಾರಿಯಲ್ಲಿ ದೇವೇಂದ್ರಪ್ಪ ಬದಲು ಶ್ರೀರಾಮುಲುಗೆ ಟಿಕೆಟ್
  • ಹಾವೇರಿಯಲ್ಲಿ ಶಿವಕುಮಾರ್ ಬದಲು ಬೊಮ್ಮಾಯಿಗೆ ಟಿಕೆಟ್
  • ತುಮಕೂರಿನಲ್ಲಿ G.S​.ಬಸವರಾಜು ಬದಲು ಸೋಮಣ್ಣ ಗೆ ಟಿಕೆಟ್
  • ಕೊಪ್ಪಳದಲ್ಲಿ ಸಂಗಣ್ಣ ಕರಡಿ ಬದಲು ಡಾ.ಬಸವರಾಜ​ ಕ್ಯಾವಟರ್‌ ಗೆ ಟಿಕೆಟ್
  • ಬೆಂಗಳೂರು ಉತ್ತರದಿಂದ ಹಾಲಿ ಸಂಸದ ಸದಾನಂದಗೌಡರ ಬದಲು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಟಿಕೆಟ್‌
  • ಚಾಮರಾಜನಗರದಿಂದ ವಿ.ಶ್ರೀನಿವಾಸ​ ಪ್ರಸಾದ್​ ಬದಲಿಗೆ ಎಸ್​.ಬಾಲರಾಜುಗೆ ಟಿಕೆಟ್

ಯಾರ್ಯಾರಿಗೆ ಟಿಕೆಟ್?

  • ಚಿಕ್ಕೋಡಿ ಲೋಕಸಭಾ ಕ್ಷೇತ್ರ-ಅಣ್ಣಾ ಸಾಹೇಬ್ ಜೊಲ್ಲೆ
  • ಬಾಗಲಕೋಟೆ ಲೋಕಸಭಾ ಕ್ಷೇತ್ರ-ಪಿ.ಸಿ.ಗದ್ದಿಗೌಡರ್
  • ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ-ಕೋಟ ಶ್ರೀನಿವಾಸ ಪೂಜಾರಿ
  • ಹಾವೇರಿ ಲೋಕಸಭಾ ಕ್ಷೇತ್ರ-ಬಸವರಾಜ ಬೊಮ್ಮಾಯಿ
  • ಮೈಸೂರು ಕ್ಷೇತ್ರ-ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
  • ಬೆಂಗಳೂರು ಗ್ರಾಮಾಂತರ ಕ್ಷೇತ್ರ-ಡಾ.ಸಿ.ಎನ್.ಮಂಜುನಾಥ
  • ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ-ಶೋಭಾ ಕರಂದ್ಲಾಜೆ
  • ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ-ತೇಜಸ್ವಿ ಸೂರ್ಯ
  • ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ-ಪಿ.ಸಿ.ಮೋಹನ್
  • ತುಮಕೂರು ಲೋಕಸಭಾ ಕ್ಷೇತ್ರ-ವಿ.ಸೋಮಣ್ಣ
  • ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ-ಕ್ಯಾಪ್ಟನ್ ಬ್ರಿಜೇಶ್ ಚೌಟಾ
  • ಚಾಮರಾಜನಗರ ಲೋಕಸಭಾ ಕ್ಷೇತ್ರ-ಎಸ್.ಬಾಲರಾಜು
  • ಧಾರವಾಡ ಲೋಕಸಭಾ ಕ್ಷೇತ್ರ-ಪ್ರಹ್ಲಾದ್ ಜೋಶಿ
  • ಕೊಪ್ಪಳ ಲೋಕಸಭಾ ಕ್ಷೇತ್ರ-ಡಾ.ಬಸವರಾಜ ತ್ಯಾವಟೂರು
  • ದಾವಣಗೆರೆ ಲೋಕಸಭಾ ಕ್ಷೇತ್ರ-ಗಾಯತ್ರಿ ಸಿದ್ದೇಶ್ವರ್
  • ಬಳ್ಳಾರಿ ಲೋಕಸಭಾ ಕ್ಷೇತ್ರ-ಬಿ.ಶ್ರೀರಾಮುಲು
  • ಕಲಬುರಗಿ ಲೋಕಸಭಾ ಕ್ಷೇತ್ರ-ಡಾ.ಉಮೇಶ್ ಜಾಧವ್
  • ಬೀದರ್ ಲೋಕಸಭಾ ಕ್ಷೇತ್ರ-ಭಗವಂತ ಖೂಬಾ
  • ವಿಜಯಪುರ ಲೋಕಸಭಾ ಕ್ಷೇತ್ರ-ರಮೇಶ್ ಜಿಗಜಿಣಗಿ
  • ಶಿವಮೊಗ್ಗ ಲೋಕಸಭಾ ಕ್ಷೇತ್ರ-ಬಿ.ವೈ.ರಾಘವೇಂದ್ರ

More articles

Latest article