ಬಿಜೆಪಿ ನಾಯಕರ ಭಾಷೆ ಗಮನಿಸಿದರೆ RSS ಸಂಸ್ಕೃತಿ ಅರಿವಾಗುತ್ತದೆ: ಎಂಎಲ್‌ ಸಿ ಸುರೇಶ್‌ ಬಾಬು ವ್ಯಂಗ್ಯ

Most read

ಬೆಂಗಳೂರು: ಕಾನೂನುಬಾಹೀರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲವಾದರೆ ಬಿಜೆಪಿ ಹಾಗೂ ಸಂಘಪರಿವಾರ, ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ಹೆದರುತ್ತಿರುವುದೇಕೆ ಎಂದು ಕಾಂಗ್ರೆಸ್‌ ವಕ್ತಾರ ವಿಧಾನಪರಿಷತ್‌ ಸದಸ್ಯ ರಮೇಶ್‌ ಬಾಬು ಪ್ರಶ್ನಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ನಾಯಕರು ಸಂಘಪರಿವಾರದ ಹೆಸರನ್ನು ಬಳಸಿಕೊಂಡು ಅತಿರೇಕದ ಟೀಕೆ ಮಾಡುತ್ತಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಅವರಿಗೆ ಬರೆದ ಪತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ನಿರಂತರ ಟೀಕೆ ಮಾಡುತ್ತಿದ್ದಾರೆ. ಅವರೆಲ್ಲರೂ ಸಂಘ ಪರಿವಾರದಲ್ಲಿ ಕಲಿತವರು. ಅವರು ಬಳಸುತ್ತಿರುವ ಭಾಷೆಯನ್ನು ಅಲ್ಲಿಯೇ ಕಲಿತಿದ್ದಾರೆ ಎಂದು ಟೀಕಿಸಿದರು. ಶಾಸಕ ಮುನಿರತ್ನ ಅವರಿಗೆ ಸಂಘಪರಿವಾರದ ಬಗ್ಗೆ ಅತಿಯಾದ ವಿಶ್ವಾಸವಿದೆ. ಹೀಗಾಗಿ ಅವರು ಸಂಘ ಪರಿವಾರದ ಚಡ್ಡಿ ಹಾಕಿರುವ ಫೋಟೋ ಹಾಕಬೇಕು ಎಂದು ವ್ಯಂಗ್ಯವಾಡಿದರು.

ಸಂಘ ಪರಿವಾರದಿಂದ ಬಿಜೆಪಿ ನಾಯಕರು ಸಭ್ಯತೆ ಕಲಿತಿದ್ದರೆ, ಸಚಿವ ಪ್ರಿಯಾಂಕ್ ಖರ್ಗೆ ಅವರು 4ರಂದು ಸಿಎಂಗೆ ಪತ್ರ ಬರೆದಿರುವುದರ ಬಗ್ಗೆ ಚರ್ಚೆಯಾಗಲಿ ಎಂದು ಹೇಳಬೇಕು. ಸಂಘ ಪರಿವಾರದಿಂದಲೇ ಬೆಳೆದಿರುವುದಾಗಿ ಹೇಳಿಕೊಳ್ಳುವ ಅಕ್ರಮವಾಗಿ ಸಾವಿರಾರು ಜಮೀನು ಹಂಚಿಕೆ ಮಾಡಿರುವ ಆರೋಪ ಹೊತ್ತಿರುವ ಅಶೋಕ್, ಬಿಜೆಪಿ ಶಾಸಕರಿಂದಲೇ ರೂ. 20 ಸಾವಿರ ಕೋಟಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ವಿಜಯೇಂದ್ರ ಅವರು, ಚೀಟಿ ರವಿ ಎಂದೇ ಖ್ಯಾತೆ ಪಡಿದಿರುವ ಸಿ.ಟಿ ರವಿ, ಕಚ್ಚೆಹರುಕ ಎಂದೇ ಖ್ಯಾತಿ ಪಡೆದಿರುವ ಸಿ.ಸಿ ಪಾಟೀಲ್, ನ್ಯಾಯಾಯಲದಿಂದ ಇಂಜೆಕ್ಷನ್ ಆರ್ಡರ್ ತಂದಿರುವ ಕೂಗುಮಾರಿ ಪ್ರತಾಪ್ ಸಿಂಹ ಮತ್ತು ಸದನದಲ್ಲಿ ಮಹಿಳಾ ಸಚಿವರ ಬಗ್ಗೆ ಕೀಳು ಪದ ಬಳಕೆ ಮಾಡಿದ ಸಿ.ಟಿ ರವಿ ಅವರು ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ ಎಂದರು.

1948-49, 1975-77, ಹಾಗೂ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನಿಷೇಧ ಹೇರಲಾಗಿತ್ತು. ಸಂಘ ಪರಿವಾರ ಈ ಹಿಂದೆ ನಿಷೇಧಕ್ಕೆ ಒಳಪಟ್ಟಿತ್ತೋ ಇಲ್ಲವೋ ಎಂಬುದು ಮುಖ್ಯವೇ ಹೊರತು, ನೀವು ಎಷ್ಟು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೀರಿ ಎಂಬುದು ಮುಖ್ಯವಲ್ಲ. ಕಾನೂನು ಬಾಹೀರ ಚಟುವಟಿಕೆ ಮಾಡುವುದಕ್ಕೆ ಆರ್ ಎಸ್ಎಸ್ ಮಾತ್ರವಲ್ಲ, ಯಾವುದೇ ಸಂಘಟನೆಗೆ ಅವಕಾಶವಿಲ್ಲ. ನೀವೆಲ್ಲರೂ ನಾತುರಾಮ್ ಗೋಡ್ಸೆ ಅವರ ವಂಶಸ್ಥರು. ಅವರ ಡಿಎನ್ಎ ನಿಮ್ಮಲಿದೆ. ಕೊಲೆ ಬೆದರಿಕೆ ಹಾಕುವ ಪರಿಪಾಠ ನಿಮ್ಮಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಾಣ ಬೆದರಿಕೆ ಹಾಕುವವರಿಗೆ ಪ್ರಚೋದನೆ ನೀಡುವ ಕೆಲಸವನ್ನು ಬಿಜೆಪಿ ನಾಯಕರು ನಿಲ್ಲಿಸಬೇಕು. ಗಾಂಧಿ ಹತ್ಯೆ ಮಾಡಿದಾಗಿನಿಂದ ಇಲ್ಲಿಯವರೆಗೆ ಸಂಘ ಪರಿವಾರದ ಚಟುವಟಿಕೆಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಪರಿಶೀಲಿಸುತ್ತಲೇ ಬಂದಿದೆ. ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತುವ ಪ್ರಯತ್ನ ಮಾಡಿದಾಗ ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ಪ್ರಶ್ನೆ ಮಾಡಬೇಕು ಎಂದು ಹೇಳಿದರು.

 ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬವನ್ನು ಹೆದರಿಸುವ ಕೆಲಸವನ್ನು ಬಿಡಬೇಕು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಿಮ್ಮ ಪಕ್ಷದಿಂದ ಯಾವ ಕ್ರಿಮಿನಲ್ ಗೆ ಟಿಕೆಟ್ ನೀಡಿದ್ದಿರಿ, ಆತ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಸುತ್ತ ಸುತ್ತು ಹಾಕಿ ಅವರ ಕುಟುಂಬ ಮುಗಿಸುವುದಾಗಿ ಬೆದರಿಕೆ ಹೇಳಿಕೆ ನೀಡಿದ್ದ. ಇಂತಹ ಗೊಡ್ಡು ಬೆದರಿಕೆಗಳಿಗೆ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ ಎಂದರು.

More articles

Latest article