ತಾವೇ ಬೈಕ್ ಚಲಾಯಿಸಿ ರೋಡ್ ಶೋ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ!!

ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ನಗರದಲ್ಲಿ ಶಾಸಕ ಸತೀಶ್ ಸೈಲ್ ಅವರಿಂದಿಗೆ ಭರ್ಜರಿ ರೋಡ್ ಶೋ ನಡೆಸಿದರು.

ನಗರದ ಮಿತ್ರ ಸಮಾಜ ಮೈದಾನದಿಂದ ಆರಂಭವಾದ ಬೈಕ್ ರ್ಯಾಲಿಯಲ್ಲಿ ಸಾವಿರಾರು ಯುವಕರು ಪಾಲ್ಗೊಂಡರು. ಯುವಕರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹಾಗೂ ಶಾಸಕ ಸತೀಶ್ ಸೈಲ್ ಕೂಡ ಬೈಕ್‌ನಲ್ಲಿ ಸಾಗಿ ಗಮನ ಸೆಳೆದರು.

ಮಿತ್ರ ಸಮಾಜ- ಕಾಜುಬಾಗ- ಕೋಡಿಬಾಗ ರಸ್ತೆ ಮೂಲಕ ಟೋಲ್‌ನಾಕಾ, ಸುಂಕೇರಿ ರಸ್ತೆ ಮೂಲಕ ಪುನಃ ಮಿತ್ರ ಸಮಾಜದಲ್ಲಿ ರ್ಯಾಲಿ ಸಮಾಪ್ತಿಗೊಳ್ಳಲಿದೆ‌. ರ್ಯಾಲಿಯುದ್ದಕ್ಕೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ ಪರ, ಕಾಂಗ್ರೆಸ್ ಪಕ್ಷದ ಪರವಾಗಿ ಘೋಷಣೆಗಳು ಮೊಳಗಿದವು.

ಬೈಕ್ ಓಡಿಸುತ್ತಲೇ ದಾರಿಯುದ್ದಕ್ಕೂ ಸೇರಿದ ಜನರತ್ತ ಅಂಜಲಿ ಅವರು ಹಸನ್ಮುಖರಾಗಿ ಕೈಬೀಸಿ ಮತಯಾಚಿಸಿದ್ದು ವಿಶೇಷವಾಗಿತ್ತು. ಬೈಕ್ ರ್ಯಾಲಿ ಸಾಗಿದ ಮಾರ್ಗದುದ್ದಕ್ಕೂ ಸೇರಿದ ಜನರಿಂದ ಅಂಜಲಿ ಅವರಿಗೆ ನಿರೀಕ್ಷೆ ಮೀರಿದ ಅಪಾರ ಬೆಂಬಲ ದೊರಕಿತು.

More articles

Latest article

Most read